ಖಾಸಗಿ ಶಾಲೆಗಳು ಸರ್ಕಾರದ ಪಠ್ಯಪುಸ್ತಕಗಳನ್ನೇ ಖರೀದಿಸಬೇಕೆಂಬ ನಿಯಮ ಇದ್ದರೂ ಖಾಸಗಿ ಪ್ರಕಾಶನ ದರ ಪಠ್ಯ ಪುಸ್ತಕಗಳನ್ನು ಖರೀದಿಸಿ ಮಕ್ಕಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಬೆನ್ನಲ್ಲೇ ಪಠ್ಯಪುಸ್ತಕ ಖರೀದಿ ವಿಚಾರವನ್ನು ತಮ್ಮಿಷ್ಟಕ್ಕೆ ಬಿಡುವಂತೆ ಕೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಲಿಂಗರಾಜು ಕೋರಾ
ಬೆಂಗಳೂರು(ಜ.07): ಪಠ್ಯ ಪುಸ್ತಕ ಖರೀದಿ ವಿಚಾರದಲ್ಲಿ ಇಷ್ಟು ವರ್ಷ ಪರೋಕ್ಷವಾಗಿ ಚಕಾರ ಎತ್ತುತ್ತಿದ್ದ ಅನುದಾನ ರಹಿತ ಖಾಸಗಿ ಶಾಲೆಗಳು ಇದೀಗ ಸರ್ಕಾರದೊಂದಿಗೆ ನೇರ ಸಂಘರ್ಷಕ್ಕಿಳಿದಿವೆ. ಖರೀದಿಯಲ್ಲಿ ಸ್ವಾತಂತ್ರ್ಯ ನೀಡಿ, ಇಲ್ಲವೇ ಕಾಲಕ್ಕನುಗುಣವಾಗಿ ಪಠ್ಯಕ್ರಮದಲ್ಲಿ ಸುಧಾರಣೆ ಮತ್ತು ಪರಿಷ್ಕರಿಸಿ ಎಂದು ಒತ್ತಾಯಿಸಿವೆ.
ಸ್ವಾಯತ್ತತೆ ರಕ್ಷಣೆ, ಬೋಧನಾ ವಿಧಾನ, ಶಿಕ್ಷಣದ ಗುರಿಗೆ ಅನುಗುಣವಾಗಿ ಪಠ್ಯಪುಸ್ತಕ ಖರೀದಿ ನಿರ್ಧಾರವನ್ನು ತಮ್ಮಿಷ್ಟಕ್ಕೆ ಬಿಡುವಂತೆ ಅವರ್ ಸ್ಕೂಲ್ ಶಾಲಾ ಸಂಘಟನೆ ಆಗ್ರಹಿಸಿದ್ದರೆ, ರಾಜ್ಯದ ಪ್ರಮುಖ ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ '2005ರ ಎನ್‌ಸಿಎಫ್ ಮತ್ತು ಎನ್ ಸಿಇಆರ್‌ಟಿ ಶಿಫಾರಸಿನ ಅನ್ವಯ 1-4ನೇ ತರಗತಿವರೆಗಿನ ಮಕ್ಕಳಿಗೆ ನಿಗದಿಪಡಿಸಿರುವ ಪಠ್ಯಕ್ರಮಮಕ್ಕಳ ವಯಸ್ಸಿಗೆ ಅನುಗುಣವಾಗಿಲ್ಲ ಎಂದು ಕೇಂದ್ರದ ಸಮಿತಿಯೇ ವರದಿ ನೀಡಿದೆ. ಹಾಗಾಗಿ ಇತರೆ ಪಠ್ಯಕ್ರ ಮಗಳಿಗೆ ಅನುಗುಣವಾಗಿ ರಾಜ್ಯ ಪಠ್ ಕ್ರಮದಲ್ಲಿ ಸುಧಾರಣೆ ತಂದು ಪಠ್ಯ ಪುಸ್ತಕ ಗಳನ್ನು ಪರಿಷ್ಕರಿಸಬೇಕೆಂದು ಒತ್ತಾಯಿಸಿದೆ.
9ನೇ ಕ್ಲಾಸ್‌ವರೆಗೆ ಎಲ್ಲರನ್ನು ಪಾಸ್ ಮಾಡೋದು ದಡ್ಡತನ: ಬಸವರಾಜ ಹೊರಟ್ಟಿ
ಶಿಕ್ಷಕರಲ್ಲಿ ಹೋರಾಟದ ಮನೋಭಾವ ಕಡಿಮೆಯಾಗಿದೆ. ಶಿಕ್ಷಕರು ಸಂಘಟಿತರಾಗಬೇಕು. ಮತ್ತು ಅಧ್ಯಯನ ಖಾಸಗಿ ಶಾಲೆಗಳು ಸರ್ಕಾರದ ಪಠ್ಯಪುಸ್ತಕಗಳನ್ನೇ ಖರೀದಿಸಬೇಕೆಂಬ ನಿಯಮ ಇದ್ದರೂ ಖಾಸಗಿ ಪ್ರಕಾಶನ ದರ ಪಠ್ಯ ಪುಸ್ತಕಗಳನ್ನು ಖರೀದಿಸಿ ಮಕ್ಕಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಬೆನ್ನಲ್ಲೇ ಪಠ್ಯಪುಸ್ತಕ ಖರೀದಿ ವಿಚಾರವನ್ನು ತಮ್ಮಿಷ್ಟಕ್ಕೆ ಬಿಡುವಂತೆ ಕೇಳಿರುವುದು ಚರ್ಚೆಗೆ ಗ್ರಾಸವಾಗಿದೆ. 2025-26ನೇ ಸಾಲಿಗೆ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಖಾಸಗಿ ಶಾಲೆಗಳು ಸ್ಯಾಟ್ಸ್ ತಂತ್ರಾಂಶದಲ್ಲಿ ನೀಡಿರುವ ಮಾಹಿತಿಯಂತೆ ಮಕ್ಕಳ ದಾಖಲಾತಿಗೆ ಅನುಗುಣವಾಗಿ ಪಠ್ಯ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲು ಆದೇಶಿಸಿದೆ.
ಆಕ್ಷೇಪಿಸಿರುವ ಅವರ್ ಸ್ಕೂಲ್ಸ್ ಸಂಘಟನೆ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅರಸ್, ಇಲಾಖಾ ಆಯುಕ್ತ ತ್ರಿಲೋಕ್ ಚಂದ್ರರಿಗೆ ಪತ್ರ ಬರೆದಿದ್ದಾರೆ. ಈ ನಿಯಮ ಖಾಸಗಿ ಶಾಲೆಗಳ ಸಂವಿಧಾನದತ್ತ ಮೂಲಭೂತ ಹಕ್ಕುಗಳ ಉಲ್ಲಂಘನೆ. ಶಿಕ್ಷಣ ಸ್ವಾಯತ್ತತ್ತೆಗೆ ವಿರುದ್ದವಾಗಿದೆ. ನಾವು ಅನುಸರಿಸುತ್ತಿರುವ ಪಠ್ಯ ಕ್ರಮ, ಶೈಕ್ಷಣಿಕ ಪದ್ಧತಿಗೆ ಅನುಗುಣವಾದ ಪಠ್ಯ ಪುಸ್ತಕ ಆಯ್ಕೆ ಮಾಡಿ ಬೋಧನೆ ಅವಕಾಶಕ್ಕೆ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಮುಕ್ತ ಮಾರುಕಟ್ಟೆಗೆ ಪುಸ್ತಕ ಬಿಡಿ:
ಪ್ರತಿ ವರ್ಷ ಖಾಸಗಿ ಶಾಲೆಗಳಿಂದ ಪುಸ್ತಕಗಳಿಗೆ ಬೇಡಿಕೆ ಪಡೆಯುತ್ತದೆ. ಆದರೆ ಸಮಯಕ್ಕೆ ಸರಿಯಾಗಿಬರುವುದಿಲ್ಲ. ನವೆಂಬರ್‌ನಲ್ಲೇ ಶೇ.10ರಷ್ಟು ಮುಂಗಡ ಪಾವತಿಸಿ, ಪುಸ್ತಕ ನೀಡುವ ಮೊದಲೇ ಪೂರ್ಣ ಪ್ರಮಾಣದ ಹಣ ಪಾವತಿಸಬೇಕು. ಆದರೂ ಸರಿಯಾಗಿ ಪುಸ್ತಕಗಳು ಬರುವುದಿಲ್ಲ. ಹೆಚ್ಚುವರಿ ಬೇಡಿಕೆಯ ಪುಸ್ತಕಗಳಂತು ಶೈಕ್ಷಣಿಕ ಅವಧಿ ಮುಗಿದರೂ ಕೈಸೇರುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಪಠ್ಯ ಕ್ರಮದ ನಿಗದಿ, ವರ್ಗೀಕರಣ ಮತ್ತು ನಿಯಂತ್ರಣ) ನಿಯಮಗಳು 1995ರ ಅನುಸಾರ ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರ ಅಂದರೆ ಕರ್ನಾಟಕ ಪಠ್ಯ ಪುಸ್ತಕ ಸಂಘ ನಿಗದಿಪಡಿಸುವ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನೇ ರಾಜ್ಯ ಪಠ್ಯಕ್ರಮ ಅನುಸರಿಸುವ ಎಲ್ಲ ಶಾಲೆಗಳೂ ಕಡ್ಡಾಯವಾಗಿ ಅನುಸರಿಸ ಬೇಕಾಗುತ್ತದೆ. ಈ ಬಗ್ಗೆ ಶಾಲೆಗಳಿಗೆ ಸಂಯೋಜನೆ ನೀಡುವಾಗ ಷರತ್ತುಗಳನ್ನು ವಿಧಿಸಲಾಗಿರುತ್ತದೆ. ಈ ಷರತ್ತು ಉಲ್ಲಂಘಿಸಿದರೆ ನಿಯಮಾನುಸಾರ ಶಾಲೆಗಳ ವಿರುದ್ಧ ಕ್ರಮ ವಹಿಸಬಹುದಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.