ಭಾರತದ ಅರ್ಧದಷ್ಟು ಶಾಲೆಗಳಲ್ಲಿ ಕಂಪ್ಯೂಟರ್ ಇಲ್ಲ; AI ಯುಗದಲ್ಲಿ ಮಕ್ಕಳ ಶಿಕ್ಷಣ ಕುರಿತು UDISE+ 2023-24 ಆಘಾತಕಾರಿ ವರದಿ!

UDISE+ 2023-24 ವರದಿಯು ಭಾರತದ ಶಾಲೆಗಳಲ್ಲಿ ಕಂಪ್ಯೂಟರ್‌ಗಳ ಕೊರತೆಯನ್ನು ಬಹಿರಂಗಪಡಿಸಿದೆ. ಮೂಲಭೂತ ಸೌಕರ್ಯಗಳಿದ್ದರೂ, ಅರ್ಧದಷ್ಟು ಶಾಲೆಗಳಲ್ಲಿ ಕಂಪ್ಯೂಟರ್‌ಗಳಿಲ್ಲ, ಇದು AI ಯುಗದಲ್ಲಿ ಶಿಕ್ಷಣಕ್ಕೆ ಸವಾಲೊಡ್ಡುತ್ತದೆ.

udise plus 2023 24 report Indian schools do not have computers; How to educate in AI era 2025 rav

UDISE+ 2023-24 Report  : ಹೊಸ ಶಿಕ್ಷಣ ನೀತಿ (NEP 2020) ಶಿಕ್ಷಣದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂದು ಹೇಳುತ್ತದೆ.ಇದಕ್ಕಾಗಿ ಶಿಕ್ಷಣದಲ್ಲಿನ ತಾರತಮ್ಯ ಕೊನೆಗಾಣಿಸಿ ಎಲ್ಲ ಮಕ್ಕಳಿಗೂ ಓದುವ ಅವಕಾಶ ಸಿಗುವಂತಾಗಬೇಕು. ಆದರೆ ನಾವಿಂದು ಎಐ ಯುಗಕ್ಕೆ ಕಾಲಿಟ್ಟಿದ್ದೇವೆ. ಭಾರತದ ಅರ್ಧದಷ್ಟು ಶಾಲೆಗಳಲ್ಲಿ ಕಂಪ್ಯೂಟರ್‌ಗಳೇ ಇಲ್ಲ, ಹೌದು ಇಂಥದ್ದೊಂದು ಆಘಾತಕಾರಿ ವರದಿ ಬಹಿರಂಗವಾಗಿದೆ.

UDISE+ 2023-24 ವರದಿಯು ಭಾರತದ ಶಾಲೆಗಳ ಇಂದಿನ ಪರಿಸ್ಥಿತಿಯ ಭಯಾನಕ ಚಿತ್ರಣವನ್ನು ಬಹಿರಂಗಪಡಿಸಿದೆ. ಒಂದೆಡೆ, 90% ಕ್ಕಿಂತ ಹೆಚ್ಚು ಶಾಲೆಗಳು ವಿದ್ಯುತ್ ಮತ್ತು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಂತಹ ಅಗತ್ಯ ಸೌಲಭ್ಯಗಳನ್ನು ಹೊಂದಿವೆ, ಆದರೆ ಮತ್ತೊಂದೆಡೆ ಮಕ್ಕಳು ಕಲಿಯಲು ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣವೇ ಇಲ್ಲ. ಎಐ ಯುಗದಲ್ಲಿ ಕಂಪ್ಯೂಟರ್ ಇಲ್ಲದೆ ಮಕ್ಕಳು ಹೇಗೆ ಶಿಕ್ಷಣ ಕಲಿಯುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ. ನಾವಿಂದು 2025ರ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ವರ್ಷವು ತಂತ್ರಜ್ಞಾನದ ಜಗತ್ತಿನಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಎಐ ಬಳಕೆ ಜೊತೆಗೆ ಕಂಡುಕೇಳರಿಯದ ರೀತಿಯಲ್ಲಿ ಜಗತ್ತು ತಾಂತ್ರಿಕ ಪ್ರಗತಿ ಸಾಧಿಸಲಿದೆ. ಮನುಷ್ಯನ ಪ್ರತಿಯೊಂದು ಕೆಲಸವನ್ನು ಇನ್ಮುಂದೆ ಎಐ ರೋಬೋಟ್‌ಗಳು ಕಾರ್ಯನಿರ್ವಹಿಸುತ್ತವೇ. ಕಾರು ಚಾಲನೆಯಿಂದ ಶಿಕ್ಷಣದವರೆಗೆ ಎಐ ಬಳಕೆಯಾಗಲಿದೆ. ಹೀಗಿರುವಾಗ ಭಾರತದಲ್ಲಿ ಅರ್ಧದಷ್ಟು ಶಾಲೆಗಳಲ್ಲಿ ಕಂಪ್ಯೂಟರ್ ಗಳೇ ಇಲ್ಲ, ಇನ್ನೂ ಮಕ್ಕಳಿಗೆ ಎಐ ಶಿಕ್ಷಣ ಪಡೆಯುವುದು ಯಾವಾಗ? 

ಜಗತ್ತನ್ನೇ ಬದಲಿಸಲಿದೆ AI ತಂತ್ರಜ್ಞಾನ, 2025ರಲ್ಲಿ ಏನೇನು ಬದಲಾಗುತ್ತೆ?

2023-24ರಲ್ಲಿ ಭಾರತದಾದ್ಯಂತ ಶಾಲೆಗಳಲ್ಲಿ ದಾಖಲಾತಿ 37 ಲಕ್ಷದಷ್ಟು ಕಡಿಮೆಯಾಗಿದೆ ಎಂದು ಶಿಕ್ಷಣ ಸಚಿವಾಲಯದ ಯುಡಿಐಎಸ್‌ಇ ಅಂಕಿಅಂಶಗಳು ತೋರಿಸಿವೆ. ಯುನಿಫೈಡ್ ಡಿಸ್ಟ್ರಿಕ್ಟ್ ಇನ್ನಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಶನ್‌ (ಯುಡಿಐಎಸ್‌ಇ) ಪ್ಲಸ್ ದೇಶಾದ್ಯಂತ ಶಾಲಾ ಶಿಕ್ಷಣದ ಡೇಟಾವನ್ನು ಒಟ್ಟುಗೂಡಿಸಲು ಶಿಕ್ಷಣ ಸಚಿವಾಲಯವು ನಿರ್ವಹಿಸುವ ಡೇಟಾ ಒಟ್ಟುಗೂಡಿಸುವ ವೇದಿಕೆಯಾಗಿದೆ.

2022-23ರಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 25.17 ಕೋಟಿಯಾಗಿದ್ದರೆ, 2023-24ರ ಅಂಕಿಅಂಶಗಳು 24.80 ಕೋಟಿಗಳಾಗಿವೆ. ಪರಿಶೀಲನೆಯ ಅವಧಿಯಲ್ಲಿ ಬಾಲಕಿಯರ ಸಂಖ್ಯೆ 16 ಲಕ್ಷಕ್ಕೆ ಇಳಿದಿದ್ದರೆ, ಹುಡುಗ ವಿದ್ಯಾರ್ಥಿಗಳ ಸಂಖ್ಯೆ 21 ಲಕ್ಷಕ್ಕೆ ಇಳಿದಿದೆ.

ಒಟ್ಟು ದಾಖಲಾತಿಯಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯವು ಸುಮಾರು 20 ಪ್ರತಿಶತದಷ್ಟಿದೆ. ಅಲ್ಪಸಂಖ್ಯಾತರಲ್ಲಿ ಶೇಕಡಾ 79.6 ರಷ್ಟು ಮುಸ್ಲಿಮರು, ಶೇಕಡಾ 10 ರಷ್ಟು ಕ್ರಿಶ್ಚಿಯನ್ನರು, 6.9 ಶೇಕಡಾ ಸಿಬ್ಬರು, 2.2 ಶೇಕಡಾ ಬೌದ್ಧರು, 1.3 ಶೇಕಡಾ ಜೈನರು ಮತ್ತು ಶೇಕಡಾ 0.1 ರಷ್ಟು ಪಾರ್ಸಿಗಳಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ, UDISE+ ನಲ್ಲಿ ನೋಂದಾಯಿಸಲಾದ 26.9% ವಿದ್ಯಾರ್ಥಿಗಳು ಸಾಮಾನ್ಯ ವರ್ಗದಿಂದ, 18% ಪರಿಶಿಷ್ಟ ಜಾತಿಯಿಂದ, 9.9% ಪರಿಶಿಷ್ಟ ಪಂಗಡದಿಂದ, ಮತ್ತು 45.2% ಇತರೆ ಹಿಂದುಳಿದ ವರ್ಗದವರಿದ್ದಾರೆ.

AI Chatbots ಜೊತೆ ಎಂದಿಗೂಈ ವಿಷಯಗಳನ್ನು ಶೇರ್ ಮಾಡಿಕೊಳ್ಳಬೇಡಿ!

ಒಟ್ಟು ದಾಖಲಾತಿಯಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯವು ಸುಮಾರು 20 ಪ್ರತಿಶತದಷ್ಟಿದೆ. ಅಲ್ಪಸಂಖ್ಯಾತರಲ್ಲಿ ಶೇಕಡಾ 79.6 ರಷ್ಟು ಮುಸ್ಲಿಮರು, ಶೇಕಡಾ 10 ರಷ್ಟು ಕ್ರಿಶ್ಚಿಯನ್ನರು, 6.9 ಶೇಕಡಾ ಸಿಬ್ಬರು, 2.2 ಶೇಕಡಾ ಬೌದ್ಧರು, 1.3 ಶೇಕಡಾ ಜೈನರು ಮತ್ತು ಶೇಕಡಾ 0.1 ರಷ್ಟು ಪಾರ್ಸಿಗಳಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ, UDISE+ ನಲ್ಲಿ ನೋಂದಾಯಿಸಲಾದ 26.9% ವಿದ್ಯಾರ್ಥಿಗಳು ಸಾಮಾನ್ಯ ವರ್ಗದಿಂದ, 18% ಪರಿಶಿಷ್ಟ ಜಾತಿಯಿಂದ, 9.9% ಪರಿಶಿಷ್ಟ ಪಂಗಡದಿಂದ, ಮತ್ತು 45.2% ಇತರೆ ಹಿಂದುಳಿದ ವರ್ಗದವರಿದ್ದಾರೆ ಎಂದು ವರದಿ ತಿಳಿಸಿದೆ...

Latest Videos
Follow Us:
Download App:
  • android
  • ios