ಸಾಮಾನ್ಯವಾಗಿ ಗ್ರಾಮಗಳಲ್ಲಿ ವಿವಿಧ ಬ್ಯಾಂಕ್ ಸ್ಥಾಪನೆ ವ್ಯವಹಾರ ಮಾಡುವುದು ಕಾಮನ್. ಅದರೆ ಶಾಲೆಯಲ್ಲಿ ಮಕ್ಕಳ ಬ್ಯಾಂಕ್ ಸ್ಥಾಪನೆ ಮಾಡಿ ಬ್ಯಾಂಕ್ ವ್ಯವಹಾರದ ತಿಳೀವಳಿಕೆ ಹಾಗೂ ಅದರ ನಿರ್ವಹಣೆಯನ್ನ ಮಕ್ಕಳೇ ಮಾಡುತ್ತಿದ್ದಾರೆ. ಹೇಗಿದೆ ಆ ಮಕ್ಕಳ ಬ್ಯಾಂಕ್ ..? ಎಷ್ಟು ಹಣ ಜಮೆ ಆಗಿದೆ ಗೊತ್ತಾ?
ಪವನ್ ಕುಮಾರ್ ,ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ
ಹಾವೇರಿ (ಜ.31) : ಸಾಮಾನ್ಯವಾಗಿ ಗ್ರಾಮಗಳಲ್ಲಿ ವಿವಿಧ ಬ್ಯಾಂಕ್ ಸ್ಥಾಪನೆ ವ್ಯವಹಾರ ಮಾಡುವುದು ಕಾಮನ್. ಅದರೆ ಶಾಲೆಯಲ್ಲಿ ಮಕ್ಕಳ ಬ್ಯಾಂಕ್ ಸ್ಥಾಪನೆ ಮಾಡಿ ಬ್ಯಾಂಕ್ ವ್ಯವಹಾರದ ತಿಳೀವಳಿಕೆ ಹಾಗೂ ಅದರ ನಿರ್ವಹಣೆಯನ್ನ ಮಕ್ಕಳೇ ಮಾಡುತ್ತಿದ್ದಾರೆ. ಹೇಗಿದೆ ಆ ಮಕ್ಕಳ ಬ್ಯಾಂಕ್ ? ಎಷ್ಟು ಹಣ ಜಮೆ ಆಗಿದೆ ಗೊತ್ತಾ?
undefined
ಹೌದು ಇಂಥದೊಂದು ಮಕ್ಕಳ ಬ್ಯಾಂಕ್ ಹಾವೇರಿ ತಾಲ್ಲೂಕಿನ ಬೊಮ್ಮನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಉನ್ನತಿಕರೀಸಿದ ಶಾಲೆಯ ಸ್ಥಾಪನೆಯಾಗಿದೆ. ಈ ಶಾಲೆಯಲ್ಲಿ ಆಗಷ್ಟ 26 ರಂದು ಸರ್ಕಾರಿ ಸೇವಿಂಗ್ ಬ್ಯಾಂಕನ್ನು ಪ್ರಾರಂಭ ಮಾಡಲಾಗಿದ್ದು, ಬ್ಯಾಂಕಿನ ಎಲ್ಲ ನಿರ್ವಹಣೆಯನ್ನು ಮಕ್ಕಳೇ ಮಾಡುತ್ತಿದ್ದಾರೆ. ಬ್ಯಾಂಕಿನ ವ್ಯವಸ್ಥಾಪಕರಾಗಿ 8 ನೇ ತರಗತಿಯ ಪವಿತ್ರಾ ಬಡಿಗೇರ, ನಗದು ಮೇಲ್ವಿಚಾರಕರಾಗಿ 7 ನೇ ತರಗತಿಯ ಯಶವಂತ ಕರಿಯಮ್ಮನವರ, ಬ್ಯಾಂಕಿನ ನೋಡಲ್ ಅಧಿಕಾರಿಯಾಗಿ ಶಾಲೆಯ ಸಹ ಶಿಕ್ಷಕಿಯರಾದ ಶೋಭಾ ಬಡಿಗೇರ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳಿಗೆ ವ್ಯವಹಾರಿಕ ಜ್ಞಾನ ಜೊತೆಗೆ ಉತ್ತಮ ಜೀವನ ನಡೆಸಲು ಸಹಾಯವಾಗುತ್ತದೆ.
' ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು'
ಶಾಲೆಯ ಬ್ಯಾಂಕಿನಲ್ಲಿ 75 ಮಕ್ಕಳು ಖಾತೆಗಳು ತೆರೆದಿದ್ದಾರೆ. ಖಾತೆ ಹೊಂದಿದ ಮಕ್ಕಳಿಗೆ ಖಾತೆ ಸಂಖ್ಯೆಯನ್ನು ಹಾಕಿ ಪಾಸಬುಕ್ ನೀಡಲಾಗಿದೆ. ಶಾಲಾ ಬ್ಯಾಂಕನ್ನು ಪ್ರಾರಂಭಿಸಲು ಮತ್ತು ನಿರ್ವಹಣೆ ಮಾಡಲು ಶಾಲೆಯ ಸಹಶಿಕ್ಷಕರಾದ ಪ್ರದೀಪಕುಮಾರ.ಸಿ ಮಕ್ಕಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.
ಬ್ಯಾಂಕ್‌ನ ವ್ಯವಹಾರಗಳನ್ನೆಲ್ಲ ಮಕ್ಕಳೇ ನಿರ್ವಹಣೆ ನಿರ್ವಹಿಸುತ್ತಿದ್ದಾರೆ. ಶಾಲೆಯ ಬ್ಯಾಂಕಿನಲ್ಲಿ ಈವರೆಗೆ 45 ಸಾವಿರ ವ್ಯವಹಾರ ನಡೆಯುತ್ತಿದೆ. ವಾರಕ್ಕೆ ಎರಡು ದಿನ ಸೋಮವಾರ ಮತ್ತು ಗುರುವಾರ 3.30 ರಿಂದ 4,30 ಸಮಯದಲ್ಲಿ ಮಾತ್ರ ಈ ಬ್ಯಾಂಕ್‌ನ್ನು ನಿರ್ವಹಿಸಲಾಗುತ್ತದೆ. ಹಣ ಜಮಾ ಮತ್ತು ಡ್ರಾ ಮಾಡಲು ಸಹ ಸೂಕ್ತ ಅರ್ಜಿ ಪಾರ್ಮಗಳನ್ನು ನೀಡಿ ವ್ಯವಹಾರ ವ್ಯವಸ್ಥೆ ಮಾಡಲಾಗಿದೆ.
ಪಾಲಕರು ಕೊಟ್ಟ ಹಣವನ್ನು ಮಕ್ಕಳು 5 ರೂಪಾಯಿಂದ ಜಮಾ ಮಾಡಲು ಮಾಡಲು ಸೂಚನೆ ನೀಡಲಾಗಿದೆ. ಪಾಲಕರ, ಖಾತೆದಾರರ ಮಕ್ಕಳ, ನೋಡಲ್ ಅಧಿಕಾರಿಯ ಸಹಿ ಹೊಂದಿದ ಖಾತೆ ತೆರೆಯುವ ಅರ್ಜಿ ನಮೂನೆಯನ್ನು ಅವಕಾಶ ನೀಡಲಾಗಿದೆ.ಒಂದು ವಾರಕ್ಕೆ ಸಾವಿರಕ್ಕೂ ಅಧಿಕ ಹಣದ ವ್ಯವಹಾರ ನಡೆಯುತ್ತದೆ. ಬ್ಯಾಂಕ್ ನಿರ್ವಹಣೆ ಮಾಡಲು ಶಾಲೆಯಲ್ಲಿ ಪ್ರತ್ಯೇಕ ಕೊಠಡಿ ಮಾಡಲಾಗಿದೆ ಇದೊಂದು ಉತ್ತಮ ಬ್ಯಾಂಕ್ ಆಗಿದ್ದು ಮಕ್ಕಳಿಗೆ ವ್ಯವಹಾರಿಕ ಜ್ಞಾನ ಬರುವ ಉದ್ದೇಶದಿಂದ ಮಾಡಲಾಗಿದೆ
ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ: ಸಚಿವ
ಒಟ್ಟಿನಲ್ಲಿ ಶಾಲೆಯ ಬ್ಯಾಂಕಿನಿಂದ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಬರುತ್ತಿದೆ. ಜೊತೆಗೆ ಬ್ಯಾಂಕು ಯಾವ ರೀತಿ ನಿರ್ವಹಣೆ ಮಾಡುತ್ತಾರೆ ಅನ್ನೋ ಮಾಹಿತಿ ಲಭ್ಯವಾಗುತ್ತಿದೆ. ಮಕ್ಕಳು ಅನಾವಶ್ಯಕ ಖರ್ಚು ಕಡಿಮೆ ಮಾಡಿ, ಉಳಿತಾಯ ಮಾಡುತ್ತಿದ್ದಾರೆ.