ಕರ್ನಾಟಕದಲ್ಲಿ ಕೊರೋನಾ ಬಳಿಕ ಶಾಲೆ ಬಿಡ್ತಿರೋ ಮಕ್ಕಳು: ಕಾರಣ?

By Girish Goudar  |  First Published Jun 5, 2022, 11:45 AM IST

*   ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಶಾಲೆ ಬಿಡ್ತಿರೋ ಮಕ್ಕಳ ಸಂಖ್ಯೆ
*  ಕೊರೋನಾ ಬಳಿಕ ಬಹುತೇಕ ಮಕ್ಕಳು ಶಾಲೆ ಬಿಟ್ಟಿದ್ದಾರೆ
*  ವಲಸೆ ಹೋಗೋದು, ಇಚ್ಛಾಶಕ್ತಿ ಕೊರತೆ, ಕೆಲಸಕ್ಕೆ ಹೋಗ್ತಿರೋದು ಕಾರಣ?
 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ

ಬಳ್ಳಾರಿ(ಜೂ.05):  ಪಠ್ಯದಲ್ಲಿ ಏನು ಇರಬೇಕು ಏನಿರಬಾರದು ಎನ್ನುವ ಬಗ್ಗೆ ರಾಜ್ಯದ್ಯಾಂತ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದ್ರೆ, ಪ್ರಸಕ್ತ ಸಾಲಿನಲ್ಲಿ ಸಾವಿರಾರು ಮಕ್ಕಳು ಶಾಲೆಗೆ ಮರಳದೇ ಇರೋದು ಯಾರ ಗಮನಕ್ಕೂ ಬರುತ್ತಿಲ್ಲ. ಈ ಬಗ್ಗೆ ಯಾರು ಕೂಡ ಕನಿಷ್ಟ ಚರ್ಚೆಯನ್ನು ಮಾಡ್ತಿಲ್ಲ. ಶಿಕ್ಷಣ ಇಲಾಖೆ ಈ ಬಗ್ಗೆ ಏನೆಲ್ಲ ಕ್ರಮ ತೆಗೆದು ಕೊಳ್ಳುತ್ತಲೇ ಇದ್ರೂ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣ್ತಿಲ್ಲ.  ಇನ್ನೂ ಇದಕ್ಕೆ ಸೂಕ್ಷ್ಮವಾಗಿ ಕಾರಣ ಹುಡುಕುತ್ತಾ ಹೋದ್ರೇ, ಮತ್ತದೆ ಕೊರೊನಾ ಕಾರಳ ಕತೆ ನಮ್ಮ ಕಣ್ಣೆದುರಿಗೆ ಬರುತ್ತದೆ.

Tap to resize

Latest Videos

undefined

ಕೊರೋನಾ ಮುಗಿದ್ರೂ ಶಾಲೆ ಕಡೆ ಮುಖ ಮಾಡ್ತಿಲ್ಲ 

ಹೌದು, ಮಹಾಮಾರಿ ಕೊರೋನಾ ಸೋಂಕಿನಿಂದಾಗಿ ರಾಜ್ಯದಲ್ಲಿ ಸಮರ್ಪಕವಾಗಿ ಎರಡು ವರ್ಷ ಶಾಲೆಗಳು ನಡೆಯಲಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭಗೊಂಡಿದ್ದು , ಪ್ರವೇಶಾತಿ ಪ್ರಕ್ರಿಯೆ ಭರದಿಂದ ಸಾಗಿದೆ. ಆದ್ರೇ ರಾಜ್ಯದಲ್ಲಿ 27 ಸಾವಿರಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ದೂರವುಳಿದಿದ್ದು , ಅವರನ್ನು ಪುನಃ ಶಾಲೆಗಳಿಗೆ ಕರೆತರುವುದು ಶಿಕ್ಷಣ ಇಲಾಖೆಗೆ ಸವಾಲಾಗಿದೆ. ಕೊರೊನಾ ವೇಳೆ ನಿರಂತರ ಶಿಕ್ಷಣ ಒದಗಿಸುವ ಉದ್ದೇಶದೊಂದಿಗೆ ಆನ್‌ ಲೈನ್‌ ತರಗತಿ, ವಿದ್ಯಾಗಮ  ಸೇರಿದಂತೆ ವಿವಿಧ ರೀತಿಯಲ್ಲಿ ಪ್ರಯತ್ನಿಸಲಾಗಿತ್ತು. ಆದ್ರೇ, ಇಷ್ಟೇಲ್ಲ‌ ಹರಸಾಹಸದ ಮಧ್ಯೆಯೂ ಸಾವಿರಾರು ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ.

 ವಿಜಯಪುರದ ವಿಕಲಚೇತನರ ಪುನಶ್ಚೇತನ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಭೇಟಿ!

ಸರ್ಕಾರದ ವಿವಿಧ ಯೋಜನೆಗಳು ಇದ್ರೂ ಬರುತ್ತಿಲ್ಲ 

ಇನ್ನೂ ಮಕ್ಕಳಿಗೆ ಶಾಲೆಗೆ ಬರೋ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಬಿಸಿಯೂಟ , ಅಪೌಷ್ಟಿಕ ನಿವಾರಣೆಗೆ ಮೊಟ್ಟೆ, ಬಾಳೆಹಣ್ಣು , ಉಚಿತ ಪುಸ್ತಕ, ಸಮವಸ್ತ್ರ ಸೇರಿ ಹಲವು ಸೌಕರ್ಯಗಳನ್ನು ನೀಡಿದ್ರು, ಶಾಲೆಗಳಿಂದ ದೂರ ಉಳಿಯುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 46,592 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಇದರಲ್ಲಿ ಈವರೆಗೆ 19,416 ಮಕಳ ಟ್ರ್ಯಾಕಿಂಗ್ ಮಾಡಲಾಗಿದ್ದು, 14,154 ಮರಳಿ ಕರೆತರಲಾಗಿದೆ. ಉಳಿದಂತೆ 27 ಸಾವಿರ ಮಕ್ಕಳು ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಮಕ್ಕಳು ಶಾಲೆಯಿಂದ ದೂರ ಉಳಿದ್ರೇ ಉಡುಪಿಯಲ್ಲಿ ಅತಿಕಡಿಮೆ ಮಕ್ಕಳು ದೂರವಿದ್ದಾರೆ..

ಮಕ್ಕಳು ಶಾಲೆಯಿಂದ ದೂರ ಉಳಿಯಲು ಕಾರಣವೇನು ?

ಇನ್ನೂ ಕೊರೋನಾ ವೇಳೆ ಆರ್ಥಿಕ ಮುಗ್ಗಟ್ಟಿನಿಂದ ಬಳಲಿದೆ ಅದೆಷ್ಟೋ ಬಡ ಮತ್ತು ಮಧ್ಯಮ ವರ್ಗದ ಜನರು ಆ ಕಡೆಯಿಂದ ಈ ಕಡೆ ಮತ್ತು ಈ ಕಡೆಯಿಂದ ಆ ಕಡೆ ವಲಸೆ ಹೋಗಿದ್ದಾರೆ. ಹೀಗಾಗಿ ಆ ಮಕ್ಕಳು ಶಾಲೆಗೆ ಸೇರಿಸೋ ಪ್ರಕ್ರಿಯೆ ನಡೆಯುತ್ತಿಲ್ಲ. ಇದರ ಜೊತೆಗೆ ಒಂದಷ್ಟು ಮಕ್ಕಳು ಈಗಾಗಲೇ ಅಲ್ಲಲ್ಲಿ ಕೆಲಸ ಮಾಡುತ್ತಿರೋದ್ರಿಂದ ಶಾಲೆಗೆ ಬರುಲು ಆಸಕ್ತಿ ತೋರಿಸುತ್ತಿಲ್ಲ. ಇದಕ್ಕೆ ಪೋಷಕರು ಕೂಡ ಪೂರಕವಾಗಿರೋದ್ರಿಂದ ಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ಹೋಗ್ತಿದ್ದಾರೆ. ಇನ್ನೂ ಇದರಲ್ಲಿ 38 ಬಾಲ್ಯ ವಿವಾಹ ನಡೆದಿರೋದು ಕೂಡ ಒಂದು ದುರಂತವಾಗಿದ್ದು, ಒಂದೇಡೆಯಾದ್ರೇ, ಮತ್ತೊಂದೆಡೆ  ಸಾವಿರ ಹೆಚ್ಚು ಹದಿನೈದು ವರ್ಷದ ಬಾಲಕರು ಈಗಾಗಲೇ ಮನೆ ನಿರ್ವಹಣೆಯಲ್ಲಿ ತೋಡಗಿರೋದ್ರಿಂದ ಶಾಲೆಗೆ ಬರುತಿಲ್ಲ.

ಮನೆ ಮನೆಗೆ ತೆರಳುತ್ತಿರೋ ಶಿಕ್ಷಕರು

ಇನ್ನೂ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಕರು ಸೇರಿದಂತೆ ಶಿಕ್ಷಣ ಇಲಾಖೆ ಹತ್ತು ಹಲವು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಇದರಲ್ಲಿ ಪ್ರಮುಖವಾದದ್ದು ಮಕ್ಕಳ ಮನೆ ಮನೆಗೆ ತೆರಳಿ ಪೋಷಕರ ಮನವೊಲಿಸೋದ್ದಾಗಿದೆ. ಇದರ ಜೊತೆ ಮಕ್ಕಳಿಂದ ಜಾಗೃತಿ ಮೂಡಿಸೋ ನಿಟ್ಟಿನಲ್ಲಿ ಪ್ರಭಾತ್ ಪೇರಿ ನಡೆಸಿ ಜಾಗೃತಿ ಮೂಡಿಸುತ್ತಿದ್ದಾರೆ.
 

click me!