ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.3) : ಒಂದೆಡೆ ರಾಜ್ಯದಲ್ಲಿ ಪಠ್ಯಪುಸ್ತಕಗಳಲ್ಲಿ (Textbook) ಯಾವ ಪಾಠ ಇರಬೇಕು ಬೇಡ ಎನ್ನುವ ವಿಷಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ ಇನ್ನೊಂದೆಡೆ ಮಳೆಯಲ್ಲಿ (Rain) ನೆಂದ ಪುಸ್ತಕವನ್ನು ಪುಟ್ಟ-ಪುಟ್ಟ ಮಕ್ಕಳು ಬಿಸಿಲಲ್ಲಿ ಒಣಗಿಸುವ ಪರಿಸ್ಥಿತಿ ಕಾಫಿನಾಡಿನಲ್ಲಿ ಬಂದೊದಗಿದೆ.
ಸೋರುತ್ತಿದೆ ಸರ್ಕಾರಿ ಶಾಲೆ: ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಅದೆಷ್ಟು ಶಾಲೆಗಳು (School) ಇಂದಿಗೂ ಮೂಲಭೂತ ಸೌಲಭ್ಯದ ಕೊರತೆಯನ್ನು ಎದುರಿಸುತ್ತಿವೆ. ಮೂಲಭೂತ ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಅನುದಾನವನ್ನು ಕೂಡ ಬಿಡುಗಡೆ ಮಾಡುತ್ತಿದೆ.
ವಿವಾದಗಳ ಸುಳಿಯಲ್ಲಿ ROHITH CHAKRATHIRTHA, 2016ರ ಟ್ವೀಟ್ ಬಗ್ಗೆ ಭಾರೀ ಚರ್ಚೆ!
ಆದರೆ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ ಎನ್ನುವುದಕ್ಕೆ ಚಿಕ್ಕಮಗಳೂರಿನ ಕಳಸ ತಾಲೂಕಿನ ತನೋಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಸಾಕ್ಷಿ ಎನ್ನುವಂತಿದೆ. ವರ್ಷಂಪ್ರತಿ ಸರ್ಕಾರ, ಶಿಕ್ಷಣ ಇಲಾಖೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುತ್ತಿದ್ದೇವೆ. ಶಾಲಾಮಕ್ಕಳಿಗೆ ಸುಸಜ್ಜಿತವಾದ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಬದ್ಧ ಎನ್ನುವ ಘೋಷವಾಕ್ಯವನ್ನು ಮಾಡುತ್ತಿದೆ.
ಆದರೆ ಇದಕ್ಕೆ ಅಪವಾದ ಎನ್ನುವಂತೆ ಈ ಶಾಲೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಳೆ ಬಂತು ಅಂದ್ರೆ ಶಾಲೆಯ ಕೊಠಡಿಗಳಲ್ಲಿ ನೀರು ಸುರಿಯುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗಿದೆ ಎಂದು ಮಕ್ಕಳು ತಮ್ಮ ಅಳಲುನ್ನು ಹೊರಹಾಕಿದ್ದಾರೆ.
Suvarna News Reality Check; ಕೋಟಿ ಹಣ ಬಿಡುಗಡೆಯಾದ್ರೂ ಮಕ್ಕಳಿಗೆ ಕಳಪೆ ಬಿಸಿಯೂಟ!
ಕೊಠಡಿಗಳು ಸಂಪೂರ್ಣ ಶಿಥಲಾವಸ್ಥೆ : ಮಲೆನಾಡಿನಲ್ಲಿ ಮುಂಗಾರು ಮಳೆ ಆರಂಭಕ್ಕೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಇದೆ. ಇದರ ನಡುವೆ ನೆನ್ನೆ ಮೊನ್ನೆ ಸುರಿದ ಮಳೆಯಿಂದಾಗಿ ತನೋಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಮಕ್ಕಳು ಮಳೆಯಿಂದ ಒದ್ದೆಯಾಗಿದ್ದ ಪುಸ್ತಕವನ್ನ ಬಿಸಿಲಲ್ಲಿ ಒಣಗಿಸುವ ದೃಶ್ಯ ಕರುಳು ಹಿಂಡುವಂತಿದೆ.
ಮಳೆಯಲ್ಲಿ ನೆನೆದ ಪುಸ್ತಕವನ್ನ ಬಿಸಿಲಲ್ಲಿ ಒಣಗಿಸಿಯೇ ಓದಬೇಕಾದ ದಯನೀಯ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಕಳಸ ತಾಲೂಕಿನ ತನೋಡಿ ಸರ್ಕಾರಿ ಶಾಲೆಯಲ್ಲಿ ಮಳೆ ಬಂದರೆ ಶಾಲೆಯೊಳಗೆ ನೀರು ನುಗ್ಗುತ್ತಿದ್ದರೂ ಯಾರೂ ಗಮನಿಸಿಲ್ಲ ಜೊತೆಗೆ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು 1-5ನೇ ತರಗತಿಯಲ್ಲಿ 28 ಮಕ್ಕಳಿದ್ದು, ಎಲ್ಲರೂ ಕೂಲಿ ಕಾರ್ಮಿಕರ ಮಕ್ಕಳೇ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಭವಿಷ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕೇಂದ್ರದಿಂದ PM Shri Schools ಸ್ಥಾಪನೆ
ಅಧಿಕಾರಿಗಳು ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶವಾಗಿತ್ತು. ಸ್ಥಳೀಯ ಆಕ್ರೋಶ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ತಂಡ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ 10ದಿನದ ಒಳಗೆ ತಾತ್ಕಾಲಿಕವಾಗಿ ದುರಸ್ಥಿ ಪಡಿಸುವ ಭರವಸೆಯನ್ನು ನೀಡಿದ್ದು ಇದು ಕಾರ್ಯಗತಕ್ಕೆ ಬರುವುದು ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಾಗಿದೆ.