SSLC Exams: ಎಕ್ಸಾಂನಲ್ಲಿ ಕಾಪಿ ಹೊಡೆಯೋಕೆ ಚಾನ್ಸೇ ಇಲ್ಲ: ವಿದ್ಯಾರ್ಥಿಗಳ ಮೇಲೆ ಹದ್ದಿನ ಕಣ್ಣು..!

By Girish GoudarFirst Published Mar 23, 2022, 9:10 AM IST
Highlights

*  ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿಸಿಟಿವಿ ನಿಗಾ
*  ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕ್ಯಾಮೆರಾ ಅಳವಡಿಕೆ ಕಡ್ಡಾಯ
* ಶಿಕ್ಷಣ ಇಲಾಖೆ ಸುತ್ತೋಲೆ
 

ಬೆಂಗಳೂರು(ಮಾ.23):  ಎಸ್‌ಎಸ್‌ಎಲ್‌ಸಿ ಪರೀಕ್ಷೆ(SSLC Examination) ನಡೆಯುವ ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ(CC Camera) ಅಳವಡಿಕೆ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಅಲ್ಲದೆ, ಪರೀಕ್ಷಾ ದಿನಗಳ ವಿಡಿಯೋ ದೃಶ್ಯಾವಳಿಗಳನ್ನು ಜಿಲ್ಲಾ ಹಂತದ ಸಮಿತಿಯಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಪರೀಕ್ಷಾ ಅಕ್ರಮಗಳು ನಡೆಯದಂತೆ ನಿಯಂತ್ರಿಸಲು ಇಂತಹ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ಇಲಾಖೆ ತಿಳಿಸಿದೆ.

2022ನೇ ಸಾಲಿನ ಪರೀಕ್ಷೆಗಳು ಮಾರ್ಚ್‌ 28ರಿಂದ ಏ.11ರವರೆಗೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರದ(Exam Center) ಮುಖ್ಯ ಅಧೀಕ್ಷಕರ ಕೊಠಡಿ, ಕಾರಿಡಾರ್‌ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಇದಕ್ಕಾಗಿ ಒಂದು ಡಿವಿಆರ್‌, ನಾಲ್ಕು ಎಚ್‌ಡಿ ಕ್ಯಾಮೆರಾ, ಒಂದು ಮಾನಿಟರ್‌ ಮತ್ತಿತರ ಉಪಕರಣ ಖರೀದಿಸಿ ಅಳವಡಿಸಬೇಕು. ಇದಕ್ಕಾಗಿ ಶಾಲಾ ಸಂಚಿತ ನಿಧಿಯಿಂದ 40 ಸಾವಿರ ರು.ನಷ್ಟು ಅನುದಾನ(Grants) ಬಳಕೆ ಮಾಡಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ. 2018 ಮತ್ತು 2020ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆಯಲ್ಲೂ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿತ್ತು.

Latest Videos

West Bengal 10th Exam: SSLC ಪರೀಕ್ಷೆ ಹಿನ್ನೆಲೆ ಇಂಟರ್ನೆಟ್ ಬಂದ್‌ ಮಾಡಿದ ದೀದಿ ಸರಕಾರ

ಆಯಾ ದಿನವೇ ದೃಶ್ಯಾವಳಿ ವರದಿ:

ಪ್ರತಿ ದಿನ ಪರೀಕ್ಷೆ ಮುಗಿದ ಬಳಿಕ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಹಾರ್ಡ್‌ ಡಿಸ್ಕ್‌ಗಳಲ್ಲಿ ಸಂಗ್ರಹಿಸಿ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಆಯಾ ಜಿಲ್ಲೆಯ ಡಯಟ್‌ ಪ್ರಾಂಶುಪಾಲರ ನೇತೃತ್ವ ಸಮಿತಿಯು ದೃಶ್ಯಾವಳಿಗಳನ್ನು ಆಯಾ ದಿನವೇ ಪರಿಶೀಲಿಸಿ ಅಕ್ರಮದ ಮಾಹಿತಿಗಳಿದ್ದರೆ ಏ.20ರೊಳಗೆ ಇಲಾಖೆಗೆ ವರದಿ ನೀಡಬೇಕು ಎಂದು ತಿಳಿಸಲಾಗಿದೆ.

ಅದೇ ರೀತಿ ಈ ವರ್ಷವೂ ರಾಜ್ಯದ(Karnataka) ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಈ ಹಿಂದಿನ ವರ್ಷದ ಪರೀಕ್ಷಾ ಅವಧಿಯಲ್ಲಿ ಹಲವು ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಒಂದು ವೇಳೆ ಅಳವಡಿಸದೆ ಇದ್ದಲ್ಲಿ, ಈ ವರ್ಷ ಹೊಸದಾಗಿ ಗುರುತಿಸಿರುವ ಕೇಂದ್ರಗಳಲ್ಲಿ ತಕ್ಷಣ ಸಿಸಿ ಕ್ಯಾಮೆರಾ ಅಳವಡಿಕೆಗೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕ್ರಮ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ(Department of Education) ಆಯುಕ್ತ ಡಾ.ವಿಶಾಲ್‌(Dr Vishal) ಸೂಚಿಸಿದ್ದಾರೆ.

ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ನೀಡಿದ KSRTC

ಬೆಂಗಳೂರು: 2021-22ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ(KSRTC) ಅವಕಾಶ ಮಾಡಿಕೊಟ್ಟಿದೆ. ಹೌದು. ಇದೇ  ಮಾರ್ಚ್​ 28ರಿಂದ ಏಪ್ರಿಲ್​ 11ರವರೆಗೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ(Exam) ಬರೆಯುವ ವಿದ್ಯಾರ್ಥಿಗಳ(Students) ಹಿತದೃಷ್ಟಿಯಿಂದ  ಉಚಿತ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಅವಕಾಶ ನೀಡಿದೆ.

ಮಹತ್ವದ ನಿರ್ಧಾರಕ್ಕೆ ಮುಂದಾದ ಶಿಕ್ಷಣ ಇಲಾಖೆ , SSLC, PUC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಪರೀಕ್ಷಾ ಪ್ರವೇಶ ಪತ್ರವನ್ನು(Hall Ticket) ತೋರಿಸುವುದು ಕಡ್ಡಾಯವಾಗಿದ್ದು, ಪರೀಕ್ಷಾ ಕೇಂದ್ರದವರೆಗೆ ನಿಗಮದ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಆಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ಹೋಗುವಾಗ ಹಾಗೂ ಹಿಂತಿರುಗುವಾಗ ಕಡ್ಡಾಯವಾಗಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ. ಹೊರವಲಯ ಸಾಮಾನ್ಯ ಹಾಗೂ ವೇಗದೂತ ಬಸ್​ಗಳಲ್ಲು ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷಾ ಕೇಂದ್ರದ ಬಳಿ ಬಸ್ ಹತ್ತಲು ಹಾಗೂ ಇಳಿಯಲು ಕೂಡ ಅವಕಾಶ ಮಾಡಲಾಗುವುದು. ಈಗಾಗಲೇ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಬಸ್ ಚಾಲಕ ನಿರ್ವಾಹಕರುಗಳಿಗೆ ಸೂಚಿಸಲಾಗಿದೆ. ಇನ್ನೂ ಪರೀಕ್ಷಾ ಕೇಂದ್ರದ ಬಳಿಯೇ ನಿಲುಗಡೆಗೆ ಸೂಚಿಸಲಾಗಿದೆ ಎಂದು ಕೆಸ್​ಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
 

click me!