CBSE Fake Notice ಟರ್ಮ್ 2 ಪರೀಕ್ಷೆ ನಿಯಮಗಳ ಕುರಿತ ನಕಲಿ ಪೋಸ್ಟ್ ವೈರಲ್!

Published : Apr 29, 2022, 04:20 PM ISTUpdated : Apr 29, 2022, 04:22 PM IST
CBSE Fake Notice  ಟರ್ಮ್ 2 ಪರೀಕ್ಷೆ  ನಿಯಮಗಳ ಕುರಿತ ನಕಲಿ ಪೋಸ್ಟ್ ವೈರಲ್!

ಸಾರಾಂಶ

CBSE ಟರ್ಮ್ 2 ಪರೀಕ್ಷೆಯ ನಿಯಮಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಪೋಸ್ಟ್ ವೈರಲ್ ಆಗುತ್ತಿದ್ದು, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಎಚ್ಚರಿಕೆ ನೀಡಿದೆ.

ನವದೆಹಲಿ(ಎ.29): CBSE ಟರ್ಮ್ 2 ಪರೀಕ್ಷೆಗಳು 2022 ರ (CBSE Term 2  exam) ಸಮಯದಲ್ಲಿ ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳು ಮತ್ತು ಪರೀಕ್ಷೆಗಳು ಮುಗಿದ ನಂತರ ಅನುಸರಿಸಬೇಕಾದ ನಿಯಮಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ  ನಕಲಿ  ಪೋಸ್ಟ್ ಒಂದು ಓಡಾಡುತ್ತಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಎಚ್ಚರಿಕೆ ನೀಡಿದೆ.

ನಕಲಿ ನೋಟಿಸ್ ನಲ್ಲಿ ಇರುವುದೇನು?
ಏಪ್ರಿಲ್ 27ರಂದು ಸಿಬಿಎಸ್‌ಇ ( Central Board of Secondary Education ) ಹೆಸರಿನಲ್ಲಿ ಹರಿದಾಡುತ್ತಿರುವ ಈ ನಕಲಿ ನೋಟೀಸ್‌ನಲ್ಲಿ ಪರೀಕ್ಷೆಯ ಮಾರ್ಗಸೂಚಿ ಮತ್ತು ಪರೀಕ್ಷೆಯ ಕೊನೆಯಲ್ಲಿ ಏನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.  ತಡವಾಗಿ ಬಂದ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವುದು. ಕೊಠಡಿಗಳನ್ನು ಪರಿಶೀಲಿಸುವುದು,   ಪರೀಕ್ಷೆ ಆರಂಭವಾದ ಕೂಡಲೇ ಬಳಕೆಯಾಗದ ಪ್ರಶ್ನೆ ಪತ್ರಿಕೆಗಳನ್ನು  ಸೀಲಿಂಗ್ ಮಾಡುವುದು. 11.30ರ ನಂತರ ಯಾವುದೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ನೀಡದಿರುವುದು.

ONGC RECRUITMENT 2022: ಬರೋಬ್ಬರಿ 3614 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಟರ್ಮ್ 2 ಪರೀಕ್ಷೆಗಳ ಕಾರ್ಯವಿಧಾನದ ಅಂತ್ಯದ ನಂತರ TA/DA ಕ್ಲೈಮ್ ಮತ್ತು ಸಂಭಾವನೆ ಬಿಲ್ ಜೊತೆಗೆ ವರದಿಯನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ಗೆ ಸಲ್ಲಿಸಬೇಕು ಎಂದು ನಕಲಿ ನೋಟಿಸ್ ನಲ್ಲಿ ಬರೆಯಲಾಗಿದೆ.  ವಾಸ್ತವ ಏನೆಂದರೆ 10 ಗಂಟೆಯ ನಂತ್ರ ವಿದ್ಯಾರ್ಥಿಗಳು  ಪರೀಕ್ಷಾ ಕೊಠಡಿಗೆ ಬಂದರೆ ಅವರಿಗೆ ಅನುಮತಿ ನೀಡುವುದಿಲ್ಲ.

Asianet Suvarna News ENBA Award ಏಷ್ಯಾನೆಟ್ ನ್ಯೂಸ್‌ಗೆ ಮತ್ತಷ್ಟು ಪ್ರಶಸ್ತಿಗಳ ಗರಿ!

ನಕಲಿ ನೋಟಿಸ್ ಬಗ್ಗೆ CBSE ಸ್ಪಷ್ಟನೆ: ನಕಲಿ ನೋಟಿಸ್  ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸಿಬಿಎಸ್‌ಇ ಟ್ವಿಟ್ಟರ್ ಮೂಲಕ #FakeNewsAlert’ ಹ್ಯಾಶ್ ಟ್ಯಾಗ್  ಬರೆದು ನಕಲಿ ನೋಟಿಸ್ ಅನ್ನು ಶೇರ್ ಮಾಡಿಕೊಂಡು ಇಂತಹ ಯಾವುದೇ ನಮ್ಮಿಂದ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

 

ನಕಲಿ ನೋಟಿಸ್‌ನಲ್ಲಿ ಪರೀಕ್ಷೆಯ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳಷ್ಟೇ ಅಲ್ಲದೆ ಉತ್ತರ ಪತ್ರಿಕೆಗಳನ್ನ ಪ್ಯಾಕ್ ಮಾಡುವ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಆದ್ರೆ, CBSE ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಕೂಡ ಅಂತಹ ಯಾವುದೇ ಸೂಚನೆಯನ್ನು ನೀಡಿಲ್ಲ. 

Kolara Seeds Preserver Papamma ನೂರಾರು ವರ್ಷಗಳ ಮಡಿಕೆಯಲ್ಲಿ ಬೀಜ ಸಂರಕ್ಷಣೆ 

ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು Supreme Court:ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಶಾಲೆಗೆ ಕಳುಹಿಸಬಾರದು ಎಂದು ಸೋಮವಾರ ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಶಾಲಾ ಶಿಕ್ಷಣದ (School education) ಬಗ್ಗೆ ಪೋಷಕರ ಆತಂಕವನ್ನು  ಕಠೋರವಾಗಿ ಪರಿಗಣಿಸಿರುವ ಸುಪ್ರೀಂ ಮಕ್ಕಳ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಚಿಕ್ಕ ವಯಸ್ಸಿನಲ್ಲೇ ಶಾಲೆಗಳಿಗೆ ಕಳುಹಿಸಬಾರದು ಎಂದಿದೆ. 

ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿ ಒಂದು ರೀತಿಯ ಧಾವಂತವಿದೆ. ಪಾಲಕರು ತಮ್ಮ ಮಕ್ಕಳನ್ನು ಎರಡು ವರ್ಷ ವಯಸ್ಸಾದ ತಕ್ಷಣ ಶಾಲೆಗೆ ಕಳುಹಿಸಲು ಬಯಸುತ್ತಾರೆ. ಇದು ಅವರ ಮಾನಸಿಕ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರ ಪೀಠ ಟೀಕೆ ವ್ಯಕ್ತಪಡಿಸಿದೆ. 

ಮುಂಬರುವ ಶೈಕ್ಷಣಿಕ ವರ್ಷಕ್ಕೆ ಕೇಂದ್ರೀಯ ವಿದ್ಯಾಲಯದಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ ಕನಿಷ್ಠ ಆರು ವರ್ಷಗಳ ವಯಸ್ಸಿನ ಮಾನದಂಡ ವಿಧಿಸಿರುವುದನ್ನು ಪ್ರಶ್ನಿಸಿ ಪೋಷಕರು ಸಲ್ಲಿಸಿರುವ ಮನವಿಯನ್ನು ನ್ಯಾಯಪೀಠವು ವಿಚಾರಣೆ ನಡೆಸುತ್ತಿದೆ. 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ