12ನೇ ತರಗತಿಯ ಬೆನ್ನಲ್ಲಿಯೇ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ.
ಬೆಂಗಳೂರು (ಮೇ.12): ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಡಿಜಿಲಾಕರ್ (DigiLocker) ಮತ್ತು ಉಮಂಗ್ ( UMANG) ಅಪ್ಲಿಕೇಶನ್‌ಗಳ ಜೊತೆಗೆ results.cbse.nic.in ಮತ್ತು cbseresults.nic.in ನಲ್ಲಿ ಇದನ್ನು ಪರಿಶೀಲಿಸಬಹುದು. ಮಂಡಳಿಯು ಈ ಫಲಿತಾಂಶಗಳನ್ನು IVRS ಮತ್ತು SMS ಮೂಲಕವೂ ಒದಗಿಸಲಿದೆ. ಸಿಬಿಎಸ್‌ಇ 10ನೇ ತರಗತಿಯಲ್ಲಿ ಈ ಬಾರಿ ಒಟ್ಟು ಶೇ. 93.12ರಷ್ಟು ಫಲಿತಾಂಶ ದಾಖಲಾಗಿದೆ. ಈ ವರ್ಷ 10 ನೇ ತರಗತಿ ಫಲಿತಾಂಶದಲ್ಲಿ ಒಟ್ಟಾರೆ ಶೇಕಡಾ 93.12 ರಷ್ಟು ದಾಖಲಾಗಿದೆ. ಇದು ಕಳೆದ ವರ್ಷದ 94.40 ಶೇಕಡಾಕ್ಕಿಂತ 1.28 ಶೇಕಡಾ ಕಡಿಮೆಯಾಗಿದೆ. ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲೂ ತಿರುವನಂತಪುರ ವಲಯ ಅಗ್ರಸ್ಥಾನ ಪಡೆದಕೊಂಡಿದೆ. ಶೇ. 99.91ರಷ್ಟು ಪಾಸ್ ಪರ್ಸಂಟೇಜ್ ದಾಖಲು ಮಾಡಿದ್ದರೆ, ಗುವಾಹಟಿ ಅತೀ ಕಳಪೆ ಸಾಧನೆ ಮಾಡಿದೆ. ಗುವಾಹಟಿ ವಲಯದ ಫಲಿತಾಂಶ ಶೇ. 76.90ರಷ್ಟಾಗಿದೆ. ಸಿಬಿಎಸ್‌ಇ ಬೋರ್ಡ್ ಶುಕ್ರವಾರ ಮೊದಲಿಗೆ 12ನೇ ತರಗತಿಯ ಫಲಿತಾಂಶವನ್ನು ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲಿಯೇ 10ನೇ ತರಗತಿಯ ಫಲಿತಾಂಶವನ್ನೂ ಪ್ರಕಟಿಸಿತು.
ಒಟ್ಟು 16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ವಿದ್ಯಾರ್ಥಿಗಳು ಮೇಲ್ಕಂಡ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅದನ್ನು ಪರಿಶೀಲಿಸಬಹುದು. ಫೆಬ್ರವರಿ 5 ರಿಂದ ಮಾರ್ಚ್ 21 ರವರೆಗೆ 10 ನೇ ಪರೀಕ್ಷೆ ನಡೆದಿದ್ದು, ಈ ಪರೀಕ್ಷೆಗೆ 21,86,940 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು ಮತ್ತು 16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಬಾಲಕಿಯರೇ ಮೇಲುಗೈ: 12ನೇ ತರಗತಿಯ ಫಲಿತಾಂಶದಂತೆ 10ನೇ ತರಗತಿಯ ಸಿಬಿಎಸ್‌ಇ ಫಲಿತಾಂಶದಲ್ಲೂ ಬಾಲಕಿಯರು ಮೇಲುಗೈ ಸಂಪಾದಿಸಿದ್ದಾರೆ. ಶೇ. 94.25ರಷ್ಟು ವಿದ್ಯಾರ್ಥಿನಿಯರು ಪಾಸ್ ಆಗಿದ್ದರೆ, ಶೇ.92.27ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
CBSE Class 12 Result: ತಿರುವನಂತಪುರ ಟಾಪ್, ಬೆಂಗಳೂರಿಗೆ 2ನೇ ಸ್ಥಾನ!
ಶಾಲಾವಾರು ರಿಸಲ್ಟ್: ಜವಹರಲಾಲ್ ನೆಹರು ವಿದ್ಯಾಲಯದಲ್ಲಿ ಶೇ. 99.14ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರೆ, ಕೇಂದ್ರೀಯ ವಿದ್ಯಾಲಯದಲ್ಲಿ ಶೇ. 98, ಸ್ವತಂತ್ರ ಶಾಲೆಗಳಲ್ಲಿ ಶೇ. 95.27, ಸಿಟಿಎಸ್‌ಎಯಲ್ಲಿ ಶೇ. 93.86, ಸರ್ಕಾರಿ ಅನುದಾನಿತದಲ್ಲಿ ಶೇ. 81.57 ಹಾಗೂ ಸರ್ಕಾರಿ ಶಾಲೆಗಳಲ್ಲಿ ಶೇ. 80.38ರಷ್ಟು ವಿದ್ಯಾರ್ಥಿಗಳು ಪಾಸ್ ಅಗಿದ್ದಾರೆ. ಒಟ್ಟು 44,297 ವಿದ್ಯಾರ್ಥಿಗಳು ಶೇ. 95ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇನ್ನು 1,95,799 ವಿದ್ಯಾರ್ಥಿಗಳು ಶೇ. 90ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರು ನಂ.2: 10ನೇ ತರಗತಿ ಫಲಿತಾಂಶದಲ್ಲೂ ಬೆಂಗಳೂರು 2ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಶೇ.99.18ರಷ್ಟು ಸಾಧನೆ ಮಾಡಿದ್ದರೆ, ಚೆನ್ನೈ (99.14%), ಅಜ್ಮೀರ್ (97.27%), ಪುಣೆ (96.92%), ಪಟನಾ (94.57%), ಚಂಡೀಗಢ (93.94%), ಭುವನೇಶ್ವರ (93.64%), ಪ್ರಯಾಗ್ ರಾಜ್ (92.55), ನೋಯ್ಡಾ (92.50%), ಪಂಚಕುಲ (92.33%), ಭೋಪಾಲ್ (91.24%), ದೆಹಲಿ ಪಶ್ಚಿಮ (90.67%), ಡೆಹ್ರಾಡೂನ್ (90.61%), ದೆಹಲಿ ಪೂರ್ವ (88.30%) ಹಾಗೂ ಗುವಾಹಟಿ (76.90%) ನಂತರದ ಸ್ಥಾನಗಳಲ್ಲಿವೆ.
CBSE, NCRTE ಪಠ್ಯಕ್ರಮದಿಂದ ಮೊಘಲರ ಪಾಠಗಳಿಗೆ ಕೊಕ್