ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮೊದಲ ಸರ್ಕಾರಕ್ಕೊಂದು ಸಲಹೆ ಕೊಟ್ಟ ವಿಶ್ವನಾಥ್

By Suvarna NewsFirst Published Sep 16, 2020, 4:20 PM IST
Highlights

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಇದನ್ನು ರಾಜ್ಯ ಫಸ್ಟ್ ಜಾರಿಗೊಳಿಸಬೇಕೆನ್ನುವ ಪ್ಲಾನ್ ಇದೆ. ಈ ನಡುವೆ ಬಿಜೆಪಿ ಶಾಸಕರೊಬ್ಬರು ಮೊದಲು ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷರನ್ನ ಕಿತ್ತೊಗೆಯಿರಿ ಎಂದು ಗುಡುಗಿದ್ದಾರೆ.

ಬೆಂಗಳೂರು, (ಸೆ.16): ಉನ್ನತ ಶಿಕ್ಷಣ ಪರಿಷತ್ ಗೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಉಪಾಧ್ಯಕ್ಷರಿದ್ದು, ಅವರನ್ನ ಸರ್ಕಾರ ಅವರನ್ನು ಉನ್ನತ ಶಿಕ್ಷಣ ಪರಿಷತ್ ನಿಂದ ಬಿಡುಗಡೆಗೊಳಿಸಲಿ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ‌ ಮಾಡಬೇಕಾದ ಜವಾಬ್ದಾರಿ ಉನ್ನತ ಶಿಕ್ಷಣ ಪರಿಷತ್ ಮೇಲಿದೆ. ಆದ್ರೆ, ರಂಗನಾಥ್ ಅವರು ಆರ್ಥಿಕ ಅಪರಾಧದ ಹಿನ್ನೆಲೆ ಇರುವ ಕಾಫಿ ಡೇ ಸಂಸ್ಥೆಗೆ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು.

ಫಸ್ಟ್ ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆಗೆ ಪಣ: ಮತ್ತೊಂದು ಹೆಜ್ಜೆ ಮುಂದಿಟ್ಟ ಡಿಸಿಎಂ

ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ರಂಗನಾಥ್ ಅವರು ಆರ್ಥಿಕ ನಷ್ಟದ ಸಂಸ್ಥೆಯಲ್ಲಿ ಇದ್ದಾರೆ.  ಅವರು ಯಾವುದಾದರೂ ಒಂದು ಕಡೆಯಲ್ಲಿ ಇರಲಿ. ಸರ್ಕಾರ ಅವರನ್ನು ಉನ್ನತ ಶಿಕ್ಷಣ ಪರಿಷತ್ ನಿಂದ ಬಿಡುಗಡೆಗೊಳಿಸಲಿ. ಇಲ್ಲದಿದ್ದರೆ ರಂಗನಾಥ್ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

"

ಡ್ರಗ್ಸ್‌ ಮಾಫಿಯಾ ಬಗ್ಗೆ ವಿಶ್ವನಾಥ್ ಮಾತು

ಇನ್ನು ಇದೇ ವೇಳೆ ಡ್ರಗ್ಸ್‌ ಮಾಫಿಯಾ ಬಗ್ಗೆ ಮಾತನಾಡಿದ ವಿಶ್ವನಾಥ್, ಕೇವಲ‌ ಒಂದೇ ವರ್ಗದವರನ್ನು ಕರೆ ತಂದು ತನಿಖೆ ಮಾಡ್ತಿರೋದನ್ನು ಸಮಾಜ ಪ್ರಶ್ನೆ ಮಾಡ್ತಿದೆ. ಅದೂ‌ ಕೂಡಾ ಹೆಣ್ಣು ಮಕ್ಕಳನ್ನೇ. ಇದರಲ್ಲಿ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳ‌ ಮಕ್ಕಳು ಇಲ್ಲವೇ ಎಂದು ಪ್ರಶ್ನಿಸಿದರು.

ಹೆಣ್ಣುಮಕ್ಕಳನ್ನೇ ಕರೆದುಕೊಂಡು ಬಂದು ಪೊಲೀಸ್ ಇಲಾಖೆಯೇ ಪ್ರಕರಣದ ದಿಕ್ಕು ತಪ್ಪಿಸುತ್ತಿದೆ ಅನ್ನಿಸುತ್ತಿದೆ. ಡ್ರಗ್ಸ್ ದಂಧೆಯನ್ನು ಪೊಲೀಸರು ಬಯಲು ಮಾಡಲಿಲ್ಲ. ಅದಕ್ಕೆ ಲಂಕೇಶ್ ಬರಬೇಕಾಯ್ತು. ಸರ್ಕಾರದ  ಸೀರಿಯಸ್ ಆಗಿದ್ದರೆ, ಪೊಲೀಸ್ ಇಲಾಖೆ ಲೈಟ್ ಆಗಿ ತೆಗೆದುಕೊಂಡಿದೆ ಎಂದರು.

‘ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ’

ನ್ಯಾಯಾಂಗ ಇದನ್ನು ಸುಮೋಟೋ‌ ಆಗಿ ತೆಗೆದುಕೊಳ್ಳಬೇಕಿತ್ತು. ಪೊಲೀಸರಿಗೆ ಗೊತ್ತಿಲ್ಲದೇ ಇರುವ ವಿಚಾರ ಇಲ್ಲ.  ಈ ದಂಧೆಯಲ್ಲಿ ಶಾಮೀಲಾಗಿರುವ ಪೊಲೀಸ್ ಅಧಿಕಾರಿಗಳ ಬಗ್ಗೆ ಕೂಡಾ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಷ್ಟರ ಮಟ್ಟಿಗೆ ಬೆಳೆಯಲು ಯಾರು ಕಾರಣ..? ವಿದೇಶಿ ಪ್ರಜೆಗಳು ಈ ದಂಧೆಯಲ್ಲಿ ಇಲ್ಲವೇ...?  ಒಬ್ಬನನ್ನು ಹಿಡಿದುಕೊಂಡು ಬಂದು ಪೊಲೀಸರು ಓಡಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

click me!