ಮೊಬೈಲ್‌ ಕಸಿದು ಮಕ್ಕಳಿಗೆ ಸಾಧಕರ ಜೀವನ ಪರಿಚಯ... ಮೋದಿಯ ಒಂದು ಗೊಂಬೆಯ ಕತೆ!

By Suvarna NewsFirst Published Sep 15, 2020, 10:33 PM IST
Highlights

ಆನ್ ಲೈನ್ ಗೇಮ್ ಗಳಿಂದ ಮಕ್ಕಳು ಹೊರಕ್ಕೆ/ಒಂದೇ ಭಾರತ ಶ್ರೇಷ್ಠ  ಭಾರತ ಅಭಿಯಾನ/ ಸಾಧಕರ ಗೊಂಬೆಗಳು/ ದೇಶದ ಸಮಗ್ರತೆ ಮತ್ತು ಸಾಧನೆ ಸಾರುವ ಟಾಯ್ಸ್

ನವದೆಹಲಿ( ಸೆ. 15)  ಸರ್ದಾರ್ ಪಟೇಲ್, ಛತ್ರಪತಿ ಶಿವಾಜಿ, ರಾಣಿ ಲಕ್ಷ್ಮೀಬಾಯಿ, ಪರಮವೀರ ಚಕ್ರ ಪುರಸ್ಕೃತರು ಭಾರತದ ಪರಂಪರೆ ಸಾರುವ ಯೋಗ..  ಹೌದು..ಕೇಂದ್ರ ಸರ್ಕಾರದ 'ಒಂದೇ ಭಾರತ, ಶ್ರೇಷ್ಠ ಭಾರತ' ಯೋಜನೆಯ ಟೀಮ್ ಅಪ್ ಫಾರ್ ಟಾಯ್ಸ್... ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಘೋಷಣೆ ಮಾಡಿದ್ದರು.

ಮಕ್ಕಳಲ್ಲಿ ಆನ್ ಲೈನ್ ಗೇಮಿಂಗ್ ಹುಚ್ಚಾಟ ದೂರಮಾಡಿ  ದೈಹಿಕ ಚಟುವಟಿಕೆ ಜಾಸ್ತಿ ಮಾಡುವುದು  ಈ ಯೋಜನೆಯ ಪ್ರಮುಖ ಉದ್ದೇಶ.  ಜತೆಗೆ ಮಕ್ಕಳಲ್ಲಿ ನಮ್ಮ ದೇಶದ ಬಗ್ಗೆ ಹೆಮ್ಮೆ ಮೂಡಿಸುವುದು, ಅರಿವು ಮೂಡಿಸುವ ಕೆಲಸವೂ ಆಗಲಿದೆ.

ಪ್ರಮೋಶನ್ ಮತ್ತು ಇಂಡಸ್ಟ್ರಿ ಸಚಿವಾಲಯ ಈ ಬಗ್ಗೆ ಸಭೆ ನಡೆಸಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಸಾಧನೆ ಸಾರುವ ದಿಗ್ಗಜರ ಗೊಂಬೆಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡುವ ಚರ್ಚೆ ನಡೆದಿದೆ.  ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಭಾರತದ ಸಂಸ್ಕೃತಿಯ ಪರಿಚಯ ಮಾಡಿಕೊಡುವುದು ಹೇಗೆ ಎಂಬುದರ ಬಗ್ಗೆ ವಿಮರ್ಶೆಯಾಗಿದೆ.

ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆ ಕ್ಲಸ್ಟರ್

ಸಚಿವರಿಂದಲೂ ನಾವು ಸಲಹೆ ಕೇಳಿದ್ದೇವೆ. ಶೈಶಕ್ಷಣಿಕ ಅಭಿವೃದ್ಧಿ ಗಮನದಲ್ಲಿ ಒಟ್ಟುಕೊಂಡು ಟಾಯ್ಸ್ ನಿರ್ಮಾಣ ಹೇಗೆ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದ ದಂತಕತೆಗಳು ಮತ್ತು ಜಾನಪದವನ್ನು ಬಳಸಿಕೊಳ್ಳುವ ಆಲೋಚನೆ ತೆರೆದಿಡಲಾಗಿದೆ.

ಜವಳಿ ಖಾತೆ, ವಾಣಿಜ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಂಸ್ಕೃತಿ. ಪ್ರವಾಸೋದ್ಯಮ, ರೈಲ್ವೆ, ನಗರಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳಿಂದಲೂ  ಮಾಹಿತಿ ಮತ್ತು ಸಲಹೆ ಪಡೆದುಕೊಳ್ಳಲಾಗುತ್ತಿದೆ.  ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಣ ಇಲಾಖೆ ಮುಂದಿನ ಹೆಜ್ಜೆಗಳನ್ನು ಇಡಲಿದೆ.  ನೈತಿಕ ಮೌಲ್ಯ ಸಾರುವ ಟಾಯ್ಸ್ ಗಳು ಮಕ್ಕಳ ಕೈ ಸೇರಲಿವೆ.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ದೇಶ ಸಾರ್ವಭೌಮವಾದಲ್ಲಿವರೆಗೆ ಪ್ರಾಣ ತ್ಯಾಗ ಮಾಡಿದ, ಹೋರಾಟ ಮಾಡಿದ ಮಹಾನುಭಾವರು, ಇಸ್ರೋ ಸಾಧನೆ, ಡಿಆರ್‌ಡಿಒಕ್ಕೆ ಸಂಬಂಧಿಸಿದ ಟಾಯ್ ನಿರ್ಮಾಣಕ್ಕೂ ಸರ್ಕಾರ ಮುಂದಾಗಿದೆ. 

click me!