ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಪಡಿಸುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಅನಾಹುತ ಆಗುತ್ತದೆ. ಆದರೆ ರಾಜ್ಯ ಸರ್ಕಾರ ಇದನ್ನು ಪರಿಗಣಿಸದೆ ರಾಜಕೀಯ ಮಾಡುತ್ತಿದೆ. ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕ ಅಭಿಪ್ರಾಯಕೊಟ್ಟಿತ್ತು. ಆದರೆ ಈಗ ಅದನ್ನು ಜಾರಿಗೆ ತರುವುದಿಲ್ಲ ಎಂದು ಹಠಮಾರಿ ಧೋರಣೆ ತೋರಿಸುತ್ತಿದೆ ಎಂದ ಸಿ.ಟಿ ರವಿ
ಉಡುಪಿ(ನ.19): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸದೆ, ಬಡ ಮಕ್ಕಳಿಗೆ ಈ ನೀತಿಯಿಂದಾಗುವ ಲಾಭಗಳಿಂದ ವಂಚಿಸುತ್ತಿದೆ ಎಂದು ಬಿಜೆಪಿ ನಾಯಕ ಸಿ.ಟಿ ರವಿ ಆರೋಪಿಸಿದ್ದಾರೆ.
ಅವರು ಶನಿವಾರ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಪಡಿಸುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಅನಾಹುತ ಆಗುತ್ತದೆ. ಆದರೆ ರಾಜ್ಯ ಸರ್ಕಾರ ಇದನ್ನು ಪರಿಗಣಿಸದೆ ರಾಜಕೀಯ ಮಾಡುತ್ತಿದೆ. ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕ ಅಭಿಪ್ರಾಯಕೊಟ್ಟಿತ್ತು. ಆದರೆ ಈಗ ಅದನ್ನು ಜಾರಿಗೆ ತರುವುದಿಲ್ಲ ಎಂದು ಹಠಮಾರಿ ಧೋರಣೆ ತೋರಿಸುತ್ತಿದೆ ಎಂದರು.
undefined
ಉಡುಪಿ: ನಾಲ್ವರ ಕೊಲೆ ಪ್ರಕರಣ, ನೊಂದ ಕುಟುಂಬಕ್ಕೆ ಶೀಘ್ರ ನ್ಯಾಯ, ಸಚಿವೆ ಹೆಬ್ಬಾಳ್ಕರ್
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೋಷಗಳಿದ್ದರೆ ಹೇಳಿ, ಸರಿಪಡಿಸಬಹುದು, ಆದರೆ ಯಾವುದಕ್ಕೆ ನಿಮ್ಮ ವಿರೋಧ, ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ನಿಮ್ಮ ವಿರೋಧವೇ, ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣಕ್ಕೆ ನಿಮ್ಮ ವಿರೋಧವೇ ಎಂದು ಪ್ರಸ್ನಿಸಿದ ಸಿ.ಟಿ.ರವಿ, ಪ್ರಾದೇಶಿಕ ಭಾಷೆ ಶಿಕ್ಷಣದಿಂದ ಕಲಿಕೆ ಸುಲಭವಾಗುತ್ತದೆ, ಮಾತೃಭಾಷೆ ಜೊತೆಗೆ ಇನ್ನೆರಡು ಭಾಷೆ ಕಲಿಯುವುದಕ್ಕೆ ಅವಕಾಶ ಇದೆ. ಆದರೆ ಭಾಷಾ ಬಾಂಧವ್ಯ ನಿರ್ಮಾಣ ನಿಮಗೆ ಸಹ್ಯ ಆಗ್ತಾ ಇಲ್ಲವೇ, ನಾವು ಅನ್ಯಭಾಷೀಯರ ಜೊತೆ ಜಗಳವಾಡುತ್ತಲೇ ಇರಬೇಕೇ, ಕೌಶಲದ ತರಬೇತಿ ನೀಡುವುದು ಅಪರಾಧವೇ ಎಂದು ಸಾಲುಸಾಲು ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟರು.
ಈಗಾಗಲೇ ಕಾಂಗ್ರೆಸ್ ನಾಯಕರಾದ ಡಿಕೆಶಿ, ಎಂ.ಬಿ. ಪಾಟೀಲ್, ಡಾ.ಪರಮೇಶ್ವರ್ ನಡೆಸುವ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಇದೆ, ಆದರೆ ಅವರದ್ದೇ ಸರ್ಕಾರ ಮಾತ್ರ ರಾಷ್ಟ್ರೀಯ ಶಿಕ್ಷಣ ನೀತಿ ಬೇಡ ಎನ್ನುತ್ತಿದೆ. ಇಂತಹ ರಾಜಕೀಯದಿಂದ ಬಡಮಕ್ಕಳಿಗೆ ಉತ್ತಮ ಶಿಕ್ಷಣದಿಂದ ವಂಚಿಸಬೇಡಿ ಎಂದವರು ಸಲಹೆ ಮಾಡಿದರು.