ಅತಿ ದೊಡ್ಡ ಅಣೆಕಟ್ಟೆಗಳಲ್ಲಿ ಒಂದಾದ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರಪ್ರದೇಶದಲ್ಲಿದೆ ಅಂತ ತಪ್ಪು ಮಾಹಿತಿ ನೀಡಲಾಗಿದೆ. ಈ ರೀತಿ ಸಿಬಿಎಸ್‌ಇ ಪಠ್ಯಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಅಂತ ಕಿಡಿ ಕಾರಿದ ಮೋಹನ್ ದಾಸರಿ
ಬೆಂಗಳೂರು(ಡಿ.09): ರಾಜ್ಯದ್ದು ಆಯ್ತು ಇವಾಗ ಕೇಂದ್ರದ ಸರದಿ, ಟಿಪ್ಪು, ಹಿಜಾಬ್, ವೈದ್ಯಕೀಯ ಸಮಾಜಶಾಸ್ತ್ರವಾಯ್ತು ಇವಾಗ ನದಿಗಳ ಸರದಿಯಾಗಿದೆ. ಪುಸ್ತಕದಲ್ಲಿ ತುಂಗೆ ಭದ್ರೆಯರ ಹೆಸರಲ್ಲಿ ಪಾಲಿಟಿಕ್ಸ್ ಶುರುವಾಗಿದೆ. ತುಂಗೆ ಭದ್ರೆಯರು ನಂದೆ ಆಂಧ್ರಪ್ರದೇಶ ಸರ್ಕಾರ ಅಂತಿದೆ. ತುಂಗಭದ್ರಾ ಯೋಜನೆ ಆಂಧ್ರದಲ್ಲಿದೆಯಂತೆ, ಪಠ್ಯ ಪುಸ್ತಕದಲ್ಲಿನ ತಪ್ಪು ಮಾಹಿತಿಗೆ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಖಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸಿಬಿಎಸ್ಇ ಪುಸ್ತಕದ ಯಡವಟ್ಟಿಗೆ ಮೋಹನ್ ದಾಸರಿ ಸಿಎಂ ಕಾಲೆಳೆದಿದ್ದಾರೆ. ಅತಿ ದೊಡ್ಡ ಅಣೆಕಟ್ಟೆಗಳಲ್ಲಿ ಒಂದಾದ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರಪ್ರದೇಶದಲ್ಲಿದೆ ಅಂತ ತಪ್ಪು ಮಾಹಿತಿ ನೀಡಲಾಗಿದೆ. ಈ ರೀತಿ ಸಿಬಿಎಸ್‌ಇ ಪಠ್ಯಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಅಂತ ಮೋಹನ್ ದಾಸರಿ ಕಿಡಿ ಕಾರಿದ್ದಾರೆ.
Kannada University ಘಟಿಕೋತ್ಸವ: ಭಾರತ ಜ್ಞಾನದ ವಿಶ್ವಗುರು ಆಗಲಿ: ರಾಜ್ಯಪಾಲ
ಮೋಹನ್ ದಾಸರಿ ಹೇಳೋದೇನು?
ಸಿಬಿಎಸ್‌ಇ ನಾಲ್ಕನೇ ತರಗತಿ ಪಠ್ಯಪುಸ್ತಕದಲ್ಲಿ ದೇಶದ ಪ್ರಮುಖ ವಿವಿಧೋದ್ದೇಶ ನದಿ ಯೋಜನೆಗಳ ಪಟ್ಟಿಯನ್ನು ನೀಡಲಾಗಿದೆ. ಅದರಲ್ಲಿ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರ ಪ್ರದೇಶದಲ್ಲಿದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ಬರೋಬ್ಬರಿ 135 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಅಣೆಕಟ್ಟು ಅಥವಾ ಪಂಪ ಸಾಗರವನ್ನು ಆಂಧ್ರ ಪ್ರದೇಶದಲ್ಲಿರುವ ಯೋಜನೆ ಎಂದು ಮಕ್ಕಳಿಗೆ ಕಲಿಸುವುದು ಎಷ್ಟು ಸರಿ? ಎಂದು ಮೋಹನ್ ದಾಸರಿ ಪ್ರಶ್ನಿಸಿದ್ದಾರೆ.
ನನ್ನ ಮಗನ ಪಠ್ಯಪುಸ್ತಕದ ನೀರಿನ ಸಂಪನ್ಮೂಲಗಳು ಪಾಠದಲ್ಲಿ ತುಂಗಭದ್ರ ಯೋಜನೆಯು ಆಂಧ್ರ ಪ್ರದೇಶದಲ್ಲಿದೆ ಎಂದು ಹೇಳಲಾಗಿದೆ.ಇಂದೆಂತಹಾ ನಾಚಿಕೆಯ ವಿಷಯ ಸಿಎಂ ಬಸವರಾಜ ಬೊಮ್ಮಾಯಿಯವರೇ?, ನಿಮ್ಮ ಶಿಗ್ಗಾಂವಿ ಕ್ಷೇತ್ರದಲ್ಲೂ ಹರಿಯುವ ತುಂಗಭದ್ರಾ ನದಿಗೆ ಸಂಬಂಧಿಸಿದ ಯೋಜನೆ ಬಗ್ಗೆಯೇ ತಪ್ಪು ಮಾಹಿತಿ ನೀಡಲಾಗಿದೆ ಅಂತ ಸಿಎಂ ಬೊಮ್ಮಾಯಿ ಅವರಿಗೆ ಮೋಹನ್ ದಾಸರಿ ಕುಟುಕಿದ್ದಾರೆ.