Bengaluru: ಬಿಬಿಎಂಪಿಯಿಂದ 10 ಕಡೆ ‘ಸಂಜೆ ಶಾಲೆ’ ಆರಂಭ

By Kannadaprabha News  |  First Published Sep 7, 2022, 12:00 AM IST

ವಿದ್ಯಾರ್ಥಿ ಬೆಳಕು ಯೋಜನೆಯಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸಂಜೆ ಶಾಲೆ: ಸಚಿವ ಬಿ.ಸಿ.ನಾಗೇಶ್‌


ಬೆಂಗಳೂರು(ಸೆ.07): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಶಿಕ್ಷಣ ವಿಭಾಗದ ವತಿಯಿಂದ ‘ವಿದ್ಯಾರ್ಥಿ ಬೆಳಕು’ ಯೋಜನೆಯಡಿ ಪಾಲಿಕೆಯ ಆಯ್ದ 10 ಶಾಲಾ, ಕಾಲೇಜುಗಳಲ್ಲಿ ಸೋಮವಾರದಿಂದ ಅಗಸ್ತ್ಯ ಫೌಂಡೇಷನ್‌ ಸಂಸ್ಥೆಯ ಸಹಯೋಗದಲ್ಲಿ ಸಂಜೆ ಶಾಲೆಗಳನ್ನು ಪ್ರಾರಂಭಿಸಲಾಗಿದೆ.

ಬಿಬಿಎಂಪಿಯಿಂದ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿ ಬೆಳಕು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಈಗ ವಿದ್ಯಾರ್ಥಿಗಳಿಗೆ ಮಾಹಿತಿ ಸುಲಭವಾಗಿ ಸಿಗುತ್ತಿದ್ದು ಅದಕ್ಕಾಗಿ ಶಾಲೆಗಳಿಗೆ ಹೋಗಲೇಬೇಕೆಂದಿಲ್ಲ. ಆದರೆ ಅವರಲ್ಲಿ ಇರುವ ಕೊರತೆಯನ್ನು ಗುರುತಿಸಿ, ಅದನ್ನು ನೀಗಿಸಲು ಮಾರ್ಗದರ್ಶನ ನೀಡುವ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಪಾಲಿಕೆ ವಿಶೇಷ ಆಯುಕ್ತರಾದ (ಶಿಕ್ಷಣ) ಡಾ.ರಾಮ್‌ ಪ್ರಸಾದ್‌ ಮನೋಹರ್‌, ಸಹಾಯಕ ಆಯುಕ್ತ(ಶಿಕ್ಷಣ) ಉಮೇಶ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tap to resize

Latest Videos

BBMP Night School; ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ಬಿಬಿಎಂಪಿ ತೆರೆಯಲಿದೆ ಸಂಜೆ ಶಾಲೆ

ಪ್ರತಿಭಾ ಪುರಸ್ಕಾರ: 

2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ 14 ವಿದ್ಯಾರ್ಥಿಗಳಿಗೆ ನಗದು, ಪ್ರಶಸ್ತಿಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಶಕ್ತಿಗಣಪತಿ ನಗರ ಪ್ರೌಢ ಶಾಲೆಯ ಸಿ.ಲಕ್ಷ್ಮಿ(617 ಅಂಕಗಳು)- .50 ಸಾವಿರ ನಗದು, ಶ್ರೀರಾಂಪುರ ಪ್ರೌಢಶಾಲೆಯ ಎಂ.ಸಿ.ಉಜ್ವಲಾ (616 ಅಂಕಗಳು)- .30 ಸಾವಿರ, ಲಗ್ಗೆರೆ ಪ್ರೌಢಶಾಲೆಯ ಕೆ.ತರುಣ್‌(606 ಅಂಕಗಳು)- .25 ಸಾವಿರ.

ಪ.ಪೂ.ಕಾಲೇಜು ಕಲಾ ವಿಭಾಗ: 

ಕಾವೇರಿಪುರ ಪ.ಪೂ.ಕಾಲೇಜ್‌ನ ಜಿ.ಆರ್‌.ಮಹೇಶ್‌ (ಅಂಕ 560)- .50 ಸಾವಿರ, ಕ್ಲೀವ್‌ಲ್ಯಾಂಡ್‌ಟೌನ್‌ ಪ.ಪೂ.ಕಾಲೇಜಿನÜ ಎಚ್‌.ಗಂಗಾಮಾಲಮ್ಮ (559)- .30 ಸಾವಿರ, ಕೆ.ಬಿ.ನಗರ ಪ.ಪೂ.ಕಾಲೇಜಿನ ಕೆ.ಭಾರತಿ- .25 ಸಾವಿರ ನಗದು ಬಹುಮಾನ ನೀಡಲಾಯಿತು.

ವಾಣಿಜ್ಯ ವಿಭಾಗ: 

ಕೆ.ಬಿ.ನಗರ ಪ. ಪೂ.ಕಾಲೇಜಿನ ಟಿ.ಎಸ್‌.ನೂತನ್‌ (ಅಂಕ 584)- .50 ಸಾವಿರ, ಬೈರವೇಶ್ವರ ನಗರ ಪ.ಪೂ.ಕಾಲೇಜಿನ ಎಂ.ಅನ್ನಪೂರ್ಣೇಶ್ವರಿ(ಅಂಕ 583)- 30 ಸಾವಿರ, ಕ್ಲೀವ್‌ಲ್ಯಾಂಡ್‌ಟೌನ್‌ ಕಾಲೇಜಿನ ನಿದಾ ಅಫ್ರೀನ್‌, ಉಮ್ಮೆಹನಿ (ಅಂಕ ತಲಾ 576)- ತಲಾ .25 ಸಾವಿರ.

ಬಡಮಕ್ಕಳಿಗೆ ಗುಡ್ ನ್ಯೂಸ್ ಬೆಂಗಳೂರಿನಲ್ಲಿ ಸಂಜೆ ಶಾಲೆ ಆರಂಭ

ವಿಜ್ಞಾನ ವಿಭಾಗ: 

ಕ್ಲೀವ್‌ಲ್ಯಾಂಡ್‌ಟೌನ್‌ ಕಾಲೇಜಿನ ಮನಿಶಾ ಕೆರ್ಕೆಟ್ಟಾ(ಅಂಕ 555)- .50 ಸಾವಿರ, ಆಯೇಷಾ ಸಿದ್ಧಿಕ್‌(ಅಂಕ 563)- .30 ಸಾವಿರ, ಬುಶ್ರಾ ಯಾಸ್ಮೀನ್‌ (ಅಂಕ 517)- .25 ಸಾವಿರ, ಅಂತಿಮ ಪದವಿ: ಕ್ಲೀವ್‌ಲ್ಯಾಂಡ್‌ ಟೌನ್‌ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕೆ.ಆಫ್ರೀನ್‌(ಅಂಕಗಳು 3726)- .50 ಸಾವಿರ ಬಹುಮಾನ ಪಡೆದುಕೊಂಡಿದ್ದಾರೆ.

ಶಿಕ್ಷಕರಿಗೆ ಸನ್ಮಾನ: 

20 ಜನರಿಗೆ ‘ಉತ್ತಮ ಶಿಕ್ಷಕ’ ಪ್ರಶಸ್ತಿ. .10 ಸಾವಿರ ನಗದು ಬಹುಮಾನ ನೀಡಲಾಯಿತು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 144 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಲಾ .25 ಸಾವಿರ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 143 ವಿದ್ಯಾರ್ಥಿಗಳಿಗೆ ತಲಾ .35 ಸಾವಿರ ನಗದು ನೀಡಿ ಗೌರವಿಸಲಾಯಿತು. ನಿವೃತ್ತಿ ಹೊಂದಿರುವ 40 ಶಿಕ್ಷಕರಿಗೆ ಸನ್ಮಾನಿಸಲಾಯಿತು.
 

click me!