ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಎಡವಟ್ಟು: ಹುತಾತ್ಮ ವೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಪಠ್ಯಕ್ಕೆ ಕೊಕ್

By Govindaraj SFirst Published Jun 9, 2022, 9:28 PM IST
Highlights

* ರೋಹಿತ್ ಚಕ್ರತೀರ್ಥ ಸಮಿತಿ ಬಳಿಕ ಈಗ ಬರಗೂರು ಸಮಿತಿ ಎಡವಟ್ಟು ಬಯಲಿಗೆ
* ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಠ್ಯವನ್ನೇ ಕೈಬಿಟ್ಟಿದ್ದ ಬರಗೂರು ಸಮಿತಿ
* ಭಯೋತ್ಪಾದಕರ ವಿರುದ್ಧ ಹೋರಾಡಿದ್ದ ವೀರ ಯೋಧನ ಪಠ್ಯಕ್ಕೆ ಕೊಕ್

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಜೂ.09): ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿರ್ಸಜನೆ ಬಳಿಕವೂ ಪಠ್ಯದೊಳಗಿನ ವಿಚಾರ ಸುದ್ದಿಯಾಗುತ್ತಲೇ ಇದೆ. ರೋಹಿತ್ ಚಕ್ರತೀರ್ಥ ಸಮಿತಿಯ ವಿವಾದಗಳು ತಣ್ಣಗಾಗುತ್ತಿರುವ ನಡುವೆ, ಬರಗೂರು ರಾಮಚಂದ್ರಪ್ಪ ಸಮಿತಿಯ ಮಹಾ ಎಡವಟ್ಟು ಈಗ ಬಯಲಾಗಿದೆ. 26/11/2008 ರಲ್ಲಿ ನಡೆದ ಟೆರರ್ ಅಟ್ಯಾಕ್ ನಲ್ಲಿ ವೀರಮರಣವನ್ನಪ್ಪಿದ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಠ್ಯವನ್ನೇ ಬರಗೂರು ಸಮಿತಿ ಕೈಬಿಟ್ಟಿದ್ದ ಅಂಶ ಈಗ ಬಯಲಾಗಿದೆ. ಮುಂಬೈ ದಾಳಿಯ ಸನ್ನಿವೇಶ ಹೊಂದಿದ್ದ ಪಠ್ಯಕ್ಕೆ ಕೊಕ್ ನೀಡಿದ್ದ ಮಾಹಿತಿ ಈಗ ಹೊರಬಿದ್ದಿದೆ. 

ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ವಿಷಯ ಇಟ್ಟುಕೊಂಡು, ಅದರಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಆಪರೇಷನ್ ಟೆರರ್ ಹೇಗಿತ್ತು ಎಂಬ ಕಥೆಯಾಧಾರಿತ ಸಿನಿಮಾ 'ಮೇಜರ್' ರಿಲೀಸ್ ಆಗಿ ಸದ್ದು ಮಾಡುತ್ತಿರುವಾಗ, ಅವರ ಪಠ್ಯ ಕೈಬಿಟ್ಟಿದ್ದ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. 8ನೇ‌ ತರಗತಿಯ ದ್ವಿತೀಯ ಭಾಷೆ ಕನ್ನಡದಲ್ಲಿದ್ದ 'ಕರಾಳ ರಾತ್ರಿ; ಹೆಸರಿನ ಪಠ್ಯವನ್ನ ಬರಗೂರು ಸಮಿತಿಗಿಂತ ಮುಂಚೆ ಇದ್ದ ಮುಡಂಬಡಿತ್ತಾಯ ಸಮಿತಿ ಸೇರ್ಪಡೆಗೊಳಿಸಿತ್ತು. ಶಾಲೆಯಲ್ಲಿ ಮಕ್ಕಳ ಗುಂಪು ಶಿಕ್ಷಕಿಗೆ ಪ್ರಶ್ನೆಗಳನ್ನ ಕೇಳುತ್ತಾ ವಿಧ್ವಂಸಕರೆಂದರೆ ಯಾರು? ಎಂಬ ಪ್ರಶ್ನೆ ಮುಂದಿಡುತ್ತಾರೆ. 

ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ: Araga Jnanendra

ಈ ಪ್ರಶ್ನೆಗೆ ಉತ್ತರಿಸುವ ಸಲುವಾಗಿ ಶಿಕ್ಷಕಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಹೇಳುತ್ತಾ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬಗ್ಗೆ ತಿಳಿಸಿಕೊಡುವ ಪಠ್ಯ ಇದಾಗಿದೆ. 'ಕರಾಳ ರಾತ್ರಿ' ಗದ್ಯ ಪಾಠದಲ್ಲಿ ಹೇಗೆ ಭಯೋತ್ಪಾದಕರು ಅಟ್ಯಾಕ್ ಮಾಡಿದ್ರು, ಹೇಗೆ ಭಯೋತ್ಪಾದಕರನ್ನ ಸೈನಿಕರು ಹೊಡೆದುರುಳಿಸಿದ್ರು. ಸಂದೀಪ್ ಉನ್ನಿಕೃಷ್ಣನ್ ಅವರ ಆಪರೇಷನ್ ಹೇಗಿತ್ತು ಎಂಬುದನ್ನ ಸವಿವರವಾಗಿ ಅಳವಡಿಸಲಾಗಿತ್ತು. ಆದರೆ ಅಂತಹ ವೀರ ಯೋಧನ ಪಠ್ಯವನ್ನೇ ತೆಗೆದುಹಾಕಿತ್ತು ಬರಗೂರು ರಾಮಚಂದ್ರಪ್ಪ ಸಮಿತಿ. ಯಾವ ಕಾರಣಕ್ಕೆ ಮೇಜರ್ ಉನ್ನಿಕೃಷ್ಣನ್ ಪಠ್ಯ ಕೈಬಿಡಲಾಗಿದೆ ಎಂಬುದರ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ಕೇಳಿದಾಗ ಯಾವ ವಿವರ ಸಿಗುತ್ತಿಲ್ಲ. 

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತಪ್ಪಾಗಿದ್ರೆ ತಿದ್ದಿಕೊಳ್ಳುತ್ತೇವೆ: ಸಚಿವ ನಾಗೇಶ್

ಮಾಹಿತಿ ಪ್ರಕಾರ ಶಿಕ್ಷಣ ಇಲಾಖೆಗೆ ವಿವರಣೆ ಕೂಡ ಬರಗೂರು ರಾಮಚಂದ್ರಪ್ಪ ಸಮಿತಿ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗುತ್ತಿದೆ. ರೋಹಿತ್‌ ಚಕ್ರತೀರ್ಥ ಸಮಿತಿ ಕೂಡ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಠ್ಯಕ್ಕೆ ಯಾಕೆ ಕೈಬಿಡಲಾಯಿತು ಎಂಬ ಮಾಹಿತಿ ಕೇಳಿದಾಗಲೂ ಶಿಕ್ಷಣ ಇಲಾಖೆ ವಿವರಣೆ ನೀಡಿಲ್ಲ. ಹುತಾತ್ಮ ಯೋಧನ ಪಠ್ಯ ‌ಕೈಬಿಟ್ಟು ಬ್ಲಡ್ ಗ್ರೂಪ್ ಎಂಬ ಪಠ್ಯವನ್ನ ಬರಗೂರು ಸಮಿತಿ ಸೇರ್ಪಡೆಗೊಳಿಸಿತ್ತು. ಯಾವ ಕಾರಣಕ್ಕಾಗಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಠ್ಯ ಕೈಬಿಡಲಾಯ್ತು? ಯಾರ ಓಲೈಕೆಗಾಗಿ ಕರಾಳ ರಾತ್ರಿ ಪಠ್ಯಕ್ಕೆ ಕೊಕ್ ಕೊಡಲಾಯ್ತ? ಇದಕ್ಕೆ ಬರಗೂರು ರಾಮಚಂದ್ರಪ್ಪ ಅವರೇ ಉತ್ತರಿಸಬೇಕಿದೆ. ಆದರೆ ವೀರ ಯೋಧನೊಬ್ಬನ ಸಾಹಸದ ಕಥೆಯನ್ನ ಮಕ್ಕಳಿಗೆ ತಿಳಿಸದಂತೆ ಮಾಡಿದ್ರು ಮಾತ್ರ ಒಳ್ಳೆಯ ನಡೆಯಲ್ಲ.

click me!