ಗುಲ್ಬರ್ಗಾ ವಿವಿಗೆ ಮೈಲಾರಪ್ಪ ಕುಲಪತಿ?

By Kannadaprabha News  |  First Published Nov 13, 2020, 12:57 PM IST

ಮೈಲಾರಪ್ಪ, ಅಗಸರ ಹೆಸರು ಮುಂಚೂಣಿಯಲ್ಲಿ| ನ.17ರ ಒಳಗೆ ನೇಮಕ ಸಾಧ್ಯತೆ| ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಆಪ್ತವಾಗಿರುವ ಪ್ರೊ.ಮೈಲಾರಪ್ಪ ಅವರನ್ನೇ ಕುಲಪತಿಯಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚು| ಸರ್ಕಾರದಿಂದ ಹೆಸರುಗಳು ರಾಜ್ಯಪಾಲರಿಗೆ ಶಿಫಾರಸು| 


ಬೆಂಗಳೂರು(ನ.13):ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಬೆಂಗಳೂರು ವಿವಿಯ ಮಾಜಿ ಕುಲಸಚಿವ ಹಾಗೂ ಕಲಾ ವಿಭಾಗದ ಹಾಲಿ ಡೀನ್‌ ಪ್ರೊ.ಬಿ.ಸಿ. ಮೈಲಾರಪ್ಪ ಹಾಗೂ ಪ್ರೊ.ದಯಾನಂದ ಅಗಸರ ಅವರ ಹೆಸರು ಮುಂಚೂಣಿಯಲ್ಲಿದ್ದು, ನವೆಂಬರ್‌ 17ರೊಳಗೆ ಕುಲಪತಿ ನೇಮಕವಾಗುವ ಸಾಧ್ಯತೆ ಇದೆ.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಆಪ್ತವಾಗಿರುವ ಪ್ರೊ.ಮೈಲಾರಪ್ಪ ಅವರನ್ನೇ ಕುಲಪತಿಯಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇದರ ನಡುವೆ ಕುಲಪತಿ ಸ್ಥಾನದ ಮತ್ತೊಬ್ಬ ಪ್ರಬಲ ಆಕಾಂಕ್ಷಿ ಇದೇ ವಿವಿಯ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ದಯಾನಂದ ಅಗಸರ ಅವರು ಕೂಡ ಆರ್‌ಎಸ್‌ಎಸ್‌ನ ಪ್ರಭಾವಿ ಮುಖಂಡರೊಬ್ಬರ ಮೂಲಕ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರಿದ್ದಾರೆ. ಆದರೆ, ಮುಖ್ಯಮಂತ್ರಿ ಕಚೇರಿ ಮೂಲಗಳ ಪ್ರಕಾರ ಮೈಲಾರಪ್ಪ ಅವರ ಹೆಸರೇ ಮುಂದಿದೆ. ಸದ್ಯದಲ್ಲೇ ಸರ್ಕಾರದಿಂದ ಹೆಸರುಗಳು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದು ಎನ್ನಲಾಗುತ್ತಿದೆ.

Tap to resize

Latest Videos

ಅಂತೂ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ : ಯಾವಾಗಿಂದ ಶುರು..?

ಗುಲ್ಬರ್ಗಾ ವಿವಿಯ ಕುಲಪತಿ ಸ್ಥಾನಕ್ಕೆ ಇತ್ತೀಚೆಗೆ ಮಹಾರಾಣಿ ಕ್ಲಸ್ಟರ್‌ ವಿವಿ ಕುಲಪತಿಯಾಗಿ ನೇಮಕಗೊಂಡಿರುವ ಪ್ರೊ.ಗೋಮತಿ ದೇವಿ, ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಪ್ರೊ.ಅಶೋಕ್‌ ಕುಮಾರ್‌ ಸೇರಿದಂತೆ ಹಲವರು ಪ್ರಬಲ ಆಕಾಂಕ್ಷಿಗಳಾಗಿದ್ದರು. ಇದೀಗ ವಿವಿ ಆಯ್ಕೆಗೆ ನೇಮಕಗೊಂಡಿದ್ದ ಶೋಧನಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿರುವ ಮೂರು ಹೆಸರುಗಳಲ್ಲಿ ಗೋಮತಿ ದೇವಿ ಅವರ ಹೆಸರೂ ಕೂಡ ಇದೆ. ಆದರೆ, ಈಗಾಗಲೇ ಅವರನ್ನು ಕ್ಲಸ್ಟರ್‌ ವಿವಿಗೆ ನೇಮಕ ಮಾಡಿರುವುದರಿಂದ ಮೈಲಾರಪ್ಪ ಅವರ ಹಾದಿ ಸುಗಮವಾಗಿದೆ ಎಂದು ಮೂಲಗಳು ತಿಳಿಸಿವೆ.
 

click me!