Gadag: ಲಿಂಗಾಯತ ಧರ್ಮ ಎಂದಿಗೂ ವೈದಿಕ ಧರ್ಮದ ಭಾಗವಲ್ಲ: ಅಶೋಕ ಬರಗುಂಡಿ

Published : Jun 02, 2022, 08:18 PM IST
Gadag: ಲಿಂಗಾಯತ ಧರ್ಮ ಎಂದಿಗೂ ವೈದಿಕ ಧರ್ಮದ ಭಾಗವಲ್ಲ: ಅಶೋಕ ಬರಗುಂಡಿ

ಸಾರಾಂಶ

ಪಠ್ಯ ಪರಿಷ್ಕರಣೆ ನೆಪದಲ್ಲಿ ಸಮ ಸಮಾಜದ ಹರಿಕಾರ ಬಸವಣ್ಣವರ ಬಗ್ಗೆ ಸುಳ್ಳು ಮಾಹಿತಿಯನ್ನು ಪಠ್ಯದಲ್ಲಿ ಸೇರಿಸುವ ಮೂಲಕ ಮಕ್ಕಳಲ್ಲಿ ಜಾತಿವಾದ ಬಿತ್ತುವುದರ ಜೊತೆಗೆ ಶರಣ ಸಂಸ್ಕೃತಿ, ಸಮ ಸಮಾಜ ನಿರ್ಮಾಣ ನಾಶಕ್ಕೆ ಹುನ್ನಾರ ನಡೆಯುತ್ತಿದೆ ಎಂದು ಬಸವ ಅನುಯಾಯಿ ಅಶೋಕ ಬರಗುಂಡಿ ಹೇಳಿದರು.

ಗದಗ (ಜೂ.02): ಪಠ್ಯ ಪರಿಷ್ಕರಣೆ ನೆಪದಲ್ಲಿ ಸಮ ಸಮಾಜದ ಹರಿಕಾರ ಬಸವಣ್ಣವರ ಬಗ್ಗೆ ಸುಳ್ಳು ಮಾಹಿತಿಯನ್ನು ಪಠ್ಯದಲ್ಲಿ ಸೇರಿಸುವ ಮೂಲಕ ಮಕ್ಕಳಲ್ಲಿ ಜಾತಿವಾದ ಬಿತ್ತುವುದರ ಜೊತೆಗೆ ಶರಣ ಸಂಸ್ಕೃತಿ, ಸಮ ಸಮಾಜ ನಿರ್ಮಾಣ ನಾಶಕ್ಕೆ ಹುನ್ನಾರ ನಡೆಯುತ್ತಿದೆ ಎಂದು ಬಸವ ಅನುಯಾಯಿ ಅಶೋಕ ಬರಗುಂಡಿ ಹೇಳಿದರು. ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಬಸವಣ್ಣನವರು ತಮ್ಮ 8ನೇ ವಯಸ್ಸಿನಲ್ಲಿ ನಡೆಯುವ ಉಪನಯನ ವೇಳೆ ಅಕ್ಕನಿಗೆ ಉಪನಯನ ಮಾಡಲಿಲ್ಲ ಅನ್ನೋ ವಿಚಾರವನ್ನ ಖಂಡಿಸಿದ್ದಲ್ಲದೇ ಉಪನಯನ ಧಿಕ್ಕರಿಸಿ, ಸಮ ಸಮಾಜ ನಿರ್ಮಾಣಕ್ಕೆ ಸಾಮಾಜಿಕ ಕ್ರಾಂತಿಯನ್ನೇ ಮಾಡಿದವರು. ಆ ವೇಳೆ ಮನೆಯನ್ನು ತೊರೆದವರು ಬಸವಣ್ಣ. ಆದರೆ, ರೋಹಿತ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ, ‘ಬಸವಣ್ಣ ಸಂಸ್ಕೃತ ಮತ್ತು ಕನ್ನಡ ಕಲಿತು, ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆ ಪಡೆದರು. ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು’ ಎಂಬ ಅಂಶವನ್ನು ಉಲ್ಲೇಖಿಸುವ ಮೂಲಕ ಮೂಲ ಆಶಯವನ್ನೇ ತಿರುಚಿದ್ದಾರೆ ಎಂದು ಕಿಡಿಕಾರಿದರು. 

ಪಠ್ಯದಲ್ಲಿ ಬಸವಣ್ಣನ ಕೆಲ ಅಂಶಗಳಿಗೂ ಕತ್ತರಿ, ಹೋರಾಟದ ಎಚ್ಚರಿಕೆ ನೀಡಿದ ಸ್ವಾಮೀಜಿ

ಸಂವಿಧಾನಕ್ಕೆ ಪೂರಕವಾಗಿರುವ ಲಿಂಗಾಯತ ಧರ್ಮ ಎಂದಿಗೂ ವೈದಿಕ ಧರ್ಮದ ಭಾಗವಲ್ಲ. ಆದರೆ, ಲಿಂಗಾಯತ ಸಮುದಾಯಕ್ಕೆ ಸೇರಿದವರೊಬ್ಬರು ಮುಖ್ಯಮಂತ್ರಿಯಿದ್ದಾಗಲೇ ಇಂತಹ ಕೆಲಸ ಮಾಡುವುದರ ಹಿಂದೆ ಲಿಂಗಾಯತ ಧರ್ಮವನ್ನು ಮತ್ತೆ ಶೈವ ಧರ್ಮದ ವ್ಯವಸ್ಥೆಗೆ ಸೇರಿಸಿ, ಲಿಂಗಾಯತರನ್ನು ಮತ್ತೆ ಶೂದ್ರರನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಲಿಂಗಾಯತ ಧರ್ಮ ಶೈವ ಧರ್ಮದ ಭಾಗವಾಗಿದ್ದಿದ್ದರೆ ‘ಕಲ್ಯಾಣದ ಹತ್ಯಾಕಾಂಡ ನಡೆಸಿದ್ದೇಕೆ’ ಎಂದು ಪ್ರಶ್ನಿಸಿದ ಅವರು, ಲಿಂಗಾಯತರ ಗೊಡವೆಗೆ ಬರಬೇಡಿ ಎಂದು ಮನವಿ ಮಾಡಿದ ಅವರು, ಇಂತಹ ನಡೆ ಸಂವಿಧಾನ ವಿರೋಧಿಯೂ ಹೌದು ಎಂದು ಹೇಳಿದರು.

ಬಸವಣ್ಣ ಪಠ್ಯ ವಿರುದ್ಧ ಶ್ರೀಗಳ ಹೋರಾಟ ಎಚ್ಚರಿಕೆ: ಲಿಂಗಾಯತ ಧರ್ಮ ಗುರು ಬಸವಣ್ಣನವರ ಬಗ್ಗೆ ಪಠ್ಯದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಮಠಾಧಿಪತಿಗಳು ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ. ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ಭಾಲ್ಕಿಯ ಡಾ.ಬಸವಲಿಂಗ ಸ್ವಾಮೀಜಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನವರನ್ನು ಕುರಿತ ಪಾಠದಲ್ಲಿ ಕೆಲ ಬದಲಾವಣೆ ಮಾಡಿ ಪ್ರಕಟಿಸಿರುವುದು ಕುಚೋದ್ಯದ ಸಂಗತಿಯಾಗಿದೆ. 

ಬಸವಣ್ಣ ಕರ್ಮಭೂಮಿಯಲ್ಲೂ ಈಗ ಮಸೀದಿ ವಿವಾದ ಆರಂಭ..!

ಈ ಅನೈತಿಕ ತಪ್ಪುಗಳನ್ನು ಸರಿಪಡಿಸಿ ಪ್ರಕಟಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಉಪನಯನದ ನಂತರ ಬಸವಣ್ಣ ಕೂಡಲ ಸಂಗಮಕ್ಕೆ ನಡೆದರು ಎಂದು ಬರೆಯಲಾಗಿದೆ. ಇದು ತಪ್ಪು. ತಮ್ಮ ಸಹೋದರಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿ ಕೂಡಲ ಸಂಗಮಕ್ಕೆ ಹೋಗಿದ್ದು ಇದು ಐತಿಹಾಸಿಕ ಸಂಗತಿಯಾಗಿದೆ. ಶೈವ ಗುರುಗಳ ಸಾನಿಧ್ಯದಲ್ಲಿ ಬಸವಣ್ಣ ಲಿಂಗ ದೀಕ್ಷೆ ಪಡೆದರು ಎಂದಿದೆ. ಇದು ಸರಿಯಲ್ಲ. ಶೈವ ಗುರುಗಳು ಗುಡಿ-ಗುಂಡಾರಗಳಲ್ಲಿರುವ ಸ್ಥಾವರ ಲಿಂಗಾರಾಧಕರು. ಇವರು ಹೇಗೆ ಲಿಂಗ ದೀಕ್ಷೆ ಕೊಡುತ್ತಾರೆ? ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿ ಬಂದಿದ್ದು ಎಂದು ವಿವರಿಸಿದ್ದಾರೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ