ಬೆಂಗಳೂರು ಈಗ UPSC ಹಬ್ ಆಗಿದೆ; ರಾಜ್ಯದ ಟಾಪರ್ ಅವಿನಾಶ್

By Suvarna News  |  First Published Jun 2, 2022, 6:22 PM IST

ಪ್ರಸ್ತುತ ದಿನಗಳಲ್ಲಿ ಹಣ ಕೊಟ್ಟು ಕೋಚಿಂಗ್ ಗೆ ಹೋಗುವ ಅವಶ್ಯಕತೆ ಇಲ್ಲ. ಇಂಟರ್ ನೆಟ್, ಗೂಗಲ್ ನಲ್ಲಿ ಎಲ್ಲಾ ವಿಚಾರಗಳು ಸಿಗುತ್ತದೆ‌‌. ಬೆಂಗಳೂರಲ್ಲು ಉತ್ತಮ ಕೋಚಿಂಗ್ ಸೆಂಟರ್ ಗಳಿದ್ದು ಉತ್ತಮ ಕಲಿಕಾ ವಾತವರಣ ಇದೆ ಎಂದು ಅವಿನಾಶ್ ಹೇಳಿದ್ದಾರೆ.


ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜೂ.2): ಕಠಿಣ ಪರಿಶ್ರಮ,ಸತತ ಅಭ್ಯಾಸ ನನ್ನ ಸಾಧನೆಗೆ ಕಾರಣವಾಗಿದೆ ಎಂದು ಯುಪಿಎಸ್ ಸಿಯಲ್ಲಿ 31 ನೇ ರ‍್ಯಾಂಕ್‌ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಅವಿನಾಶ್ ವಿ ರಾವ್ ತಮ್ಮ ಅನಿಸಿಕೆ ಹಂಚಿಕೊಂಡರು. ದಾವಣಗೆರೆಯ ಜಿಲ್ಲಾ ವರದಿಗಾರರ ಕೂಟದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡ  ಅವರು ಉನ್ನತ ಪರೀಕ್ಷೆ ಬರೆಯುವ ಯಾರೇ ಅಗಲಿ ನಮ್ಮಲ್ಲಿನ ಪೂರ್ವಾಗ್ರಹ ಪೀಡಿತ ಭಯ ಬಿಟ್ಟು, ಅಂಜಿಕೆಗಳನ್ನು ಬದಿಗೊತ್ತಿ ಸತತ ಶ್ರಮ, ಸಂಪೂರ್ಣ ಮಾಹಿತಿ ಹೊಂದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ಯಶಸ್ಸು ಶತಸಿದ್ದ ಎಂದರು.

Tap to resize

Latest Videos

ಪರೀಕ್ಷೆ ಎದುರಿಸುವ ಮೊದಲು ಯಾವ ರೀತಿ ಪರೀಕ್ಷೆಗೆ ಯಾವ ತಯಾರಿ ನಡೆಸಬೇಕು. ಯಾವ ಮಟ್ಟದಲ್ಲಿ ತರಬೇತಿ ಪಡೆಯಬೇಕೆನ್ನುವ ಬಗ್ಗೆ ಮೊದಮೊದಲು ನನ್ನ ಮನಸ್ಸನಲ್ಲೂ ಗೊಂದಲ ಇತ್ತು. ಆದರೆ ಅದನ್ನೇಲ್ಲಾ ಸಮರ್ಥವಾಗಿ ನಿಭಾಯಿಸಿದೆ‌‌. ದಿನ ನಿತ್ಯದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯಬೇಕು.

ದಿನಪತ್ರಿಕೆ, ದೃಶ್ಯ ಮಾಧ್ಯಮಗಳಿಂದಲೂ ಉತ್ತಮ ಮಾಹಿತಿ ಸಿಕ್ಕಿದೆ ಎಂದು ಹೇಳಿದರು.ಕೊರೊನಾ‌ ಸಂಕಷ್ಟದ ವೇಳೆಯಲ್ಲಿ ಜನರು ಅನುಭವಿಸಿದ ನೋವು ನನ್ನಲ್ಲಿ ಏನನ್ನಾದರೂ ಮಾಡಬೇಕೆಂಬ ಛಲ ಹುಟ್ಟಿತು.

NAS Survey; 2017ಕ್ಕಿಂತ ಕಳಪೆ ಸಾಧನೆ ಮಾಡಿದ ದಕ್ಷಿಣ ಭಾರತದ ವಿದ್ಯಾರ್ಥಿಗಳು!

 ಉಕ್ರೇನ್ - ರಷ್ಯಾ ನಡುವಿನ ಯುದ್ಧದ ವೇಳೆ ಭಾರತೀಯರನ್ನು ಮರಳಿ ತರುವಲ್ಲಿ ವಿದೇಶಾಂಗ ಇಲಾಖೆ ಮಹತ್ವದ ಪಾತ್ರ ವಹಿಸಿತ್ತು. ಇದರಲ್ಲಿ ವಿದೇಶದಲ್ಲಿರುವ ಭಾರತೀಯ ರಾಯಭಾರಿಗಳ ಪಾತ್ರ ಹೆಚ್ಚು. ನಾನು ಸಹ ವಿದೇಶಾಂಗ ಇಲಾಖೆಯಲ್ಲಿ ಸೇರಿ ಸೇವೆ ಮಾಡಬೇಕೆಂಬ ಆಸೆಯಿಂದ ಆಯ್ಕೆ ಮಾಡಿಕೊಂಡಿದ್ದೇನೆ. 

ದಿನಕ್ಕೆ ಕನಿಷ್ಠ ಆರು ಗಂಟೆಗಳಾದ್ರು ಓದಲೇ ಬೇಕು: ದಿನಕ್ಕೆ ಕೇವಲ ಆರು ಗಂಟೆಯಾದರೂ ಓದಬೇಕು. ಬೇರೆ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಬೇಕು. ವಿದ್ಯಾರ್ಥಿ ದಿಸೆಯಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡಿದ್ದರೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಪೋಷಕರ ಒತ್ತಡಕ್ಕೆ ಮಣಿದು ಯುಪಿಎಸ್ ಸಿ ಬರೆಯುವುದಕ್ಕಿಂತ  ಅವರೇ ಸ್ವ ಇಚ್ಛೆಯಿಂದ ಓದಬೇಕು‌. ಆಸಕ್ತಿ ಇರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. 

Koppala ಟಿಸಿಗಾಗಿ ತಾಳಿ ಮಾರಲು ಸಿದ್ದವಾಗಿದ್ದ ತಾಯಿ!

ಲಕ್ಷಾಂತರ ಮಂದಿ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ಉತ್ತೀರ್ಣರಾಗೋದು ಕಡಿಮೆ. ರಾಜ್ಯದಲ್ಲಿ ನೂರು ರ‍್ಯಾಂಕ್‌ ಒಳಗೆ ಇಬ್ಬರು ಮಾತ್ರ ಬಂದಿದ್ದಾರೆ. ಬೇರೆ ರಾಜ್ಯಗಳಲ್ಲಿ ಇದರ ಸರಾಸರಿ ಜಾಸ್ತಿ ಇದೆ ರಾಜ್ಯದಲ್ಲು ಆ ಪ್ರಮಾಣದ ಪಲಿತಾಂಶ ಬರಬೇಕು. ಇಲ್ಲಿನವರು ಹೆಚ್ಚಾಗಿ ಪರೀಕ್ಷೆ ಬರೆಯುವಂತಾಗಬೇಕು ಎಂದು ಹೇಳಿದರು. 

ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವರಾಗಿದ್ದಾಗ ನಾನು ದೆಹಲಿಯಲ್ಲಿ ತರಬೇತಿಯೊಂದರಲ್ಲಿ ಪಾಲ್ಗೊಂಡಿದ್ದೆ. ಆಗ ಅವರು ಮಾಡುತ್ತಿದ್ದ ವಿದೇಶಾಂಗ ಕಾರ್ಯಗಳು ಗಮನ ಸೆಳೆದವು. ಜೈರಾಂ ರಮೇಶ್, ಪ್ರತಿಭಾ ಪಾಟೀಲ್, ನಾರಾಯಣ್  ಸೇರಿದಂತೆ ಹಲವರ ಕಾರ್ಯ ಸ್ಫೂರ್ತಿ ನೀಡಿತ್ತು.

ಈ ಹಿನ್ನೆಲೆಯಲ್ಲಿ ನಾನು ವಿದೇಶಾಂಗ ಇಲಾಖೆ ಆಯ್ಕೆ ಮಾಡಿಕೊಂಡೆ ಎಂದು ವಿವರಿಸಿದರು. ಯುಪಿಎಸ್ ಸಿಯಲ್ಲಿ  ಮೂರು ಪ್ರಮುಖ ಘಟ್ಟಗಳು  ಇರುತ್ತದೆ‌‌. ಸಂದರ್ಶನದಲ್ಲಿ ನಾವು ವಿಫಲರಾದರೆ ಮತ್ತೆ ಹೊಸದಾಗಿ ಮೊದಲಿನಿಂದಲೇ ಪರೀಕ್ಷೆ ಎದುರಿಸಬೇಕಾಗುತ್ತದೆ. 

ಜೂ.24ರಿಂದ 28ರೊಳಗೆ 2ನೇ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು ಸಹ ಯುಪಿಎಸ್ ಸಿ ಹಬ್ ಆಗಿದೆ: ಪ್ರಸ್ತುತ ದಿನಗಳಲ್ಲಿ ಹಣ ಕೊಟ್ಟು ಕೋಚಿಂಗ್ ಗೆ ಹೋಗುವ ಅವಶ್ಯಕತೆ ಇಲ್ಲ. ಇಂಟರ್ ನೆಟ್, ಗೂಗಲ್ ನಲ್ಲಿ ಎಲ್ಲಾ ವಿಚಾರಗಳು ಸಿಗುತ್ತದೆ‌‌. ದೆಹಲಿ ಚನ್ನೈ ಹೈದಾರಬಾದ್ ಗೆ ಹೋಗಿ ಓದುವ ಕಾಲವು ಒಂದಿತ್ತು. ಇದೀಗ ಬೆಂಗಳೂರಲ್ಲು ಉತ್ತಮ ಕೋಚಿಂಗ್ ಸೆಂಟರ್ ಗಳಿದ್ದು ಉತ್ತಮ ಕಲಿಕಾ ವಾತವರಣ ಇದೆ.

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ನಾನು  ಶೇಕಡಾ 92 ರಷ್ಟು ಅಂಕ ಬಂದಿತ್ತು. ನಾನು ಕಠಿಣ ಪರಿಶ್ರಮ ಪಟ್ಟೆ. ಹಾಗಾಗಿ ಸಾಧನೆ ಮಾಡಲು ಸಾಧ್ಯವಾಯ್ತು ಎಂದು ತಿಳಿಸಿದರು.ಒಳ್ಳೆಯ ಮಾರ್ಗದರ್ಶನ ಇದ್ದರೆ ಒಂದೂವರೆ ವರ್ಷ ಸಾಕಾಗುತ್ತದೆ. 

ಯಾಕೆ ಪರೀಕ್ಷೆ ಬರೆಯುತ್ತೇನೆ ಎಂಬುದರ ಬಗ್ಗೆ ನಿಖರತೆ ಇರಬೇಕು. ಆರರಿಂದ ಏಳು ಗಂಟೆ ಕಾಲ ಓದುತ್ತಿದ್ದೆ. ಯೋಗ, ಧ್ಯಾನ, ಬೇರೆ ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ‌‌. ಹೈಕೋರ್ಟ್, ಸುಪ್ರೀಂಕೋರ್ಟ್ ಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ ಬಳಿಕ ಯುಪಿಎಸ್ ಸಿ ಬರೆಯಬೇಕೆಂದುಕೊಂಡಿದ್ದೆ. ಆದರೆ ವಿದ್ಯಾಭ್ಯಾಸ ಮುಗಿದ ಬಳಿಕ ಪರೀಕ್ಷೆ ತೆಗೆದುಕೊಂಡೆ ಎಂದು ಹೇಳಿದರು‌.

ದಾವಣಗೆರೆಯಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆಯಲು ಇಚ್ಚಿಸುವವರಿಗೆ ಸಲಹೆ ನೀಡಲು ಸಿದ್ಧನಿದ್ದೇನೆ. ಸೇವೆ ಮಾಡಬೇಕೆಂಬ ಆಸೆ ಇರಬೇಕು. ಸಾಹಿತ್ಯ, ಕಾನೂನು ಸೇರಿದಂತೆ ಯಾವುದೇ ವಿಷಯವಾದರೂ  ಆಳವಾದ ಅಧ್ಯಯನ ಬೇಕು. ನನ್ನ ಪೋಷಕರ ಸಹಕಾರ, ಹಣ ಸೇರಿದಂತೆ ಎಲ್ಲಾ ರೀತಿಯ ಅವಶ್ಯಕತೆ ಇದ್ದೇ ಇರುತ್ತದೆ. ದೇವರ ಆಶೀರ್ವಾದ ಹಾಗೂ ಪೋಷಕರು ಬೆನ್ನೆಲಬಾಗಿದ್ದರಿಂದ ಯುಪಿಎಸ್ ಸಿಯಲ್ಲಿ 31 ನೇ ರ‍್ಯಾಂಕ್‌ ಪಡೆಯಲು ಸಾಧ್ಯವಾಯಿತು.

ವಿದ್ಯಾರ್ಥಿ ದಿಸೆಯಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ದಿನನಿತ್ಯದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತಿರಬೇಕು. ಮಕ್ಕಳಿಗೆ ಐಎಎಸ್ ಮತ್ತು ಐಪಿಎಸ್ ಓದಿ ಪಾಸ್ ಆದವರನ್ನು ಕರೆಸಿ ಸಂವಾದ ನಡೆಸಬೇಕು. ಓದಲು ಪಠ್ಯ ಸಿಗುತ್ತೆ. ಆದರೆ ಯಾವ ರೀತಿ ಓದಬೇಕು, ಯಾವ ರೀತಿ ಬರೆಯಬೇಕು ಎಂಬ ಬಗ್ಗೆ ತರಬೇತಿ ಬೇಕು.ಉತ್ತಮ ಮಾರ್ಗದರ್ಶನವಿದ್ದರೆ ಅನುಕೂಲ ಆಗುತ್ತದೆ.

ಅವಿನಾಶ್ ತಂದೆ ವಿಠಲ್ ರಾವ್ ಮಾತನಾಡಿ, ನನ್ನ ಮಗ ರಾಜ್ಯಕ್ಕೆ ಮೊದಲಿಗನಾಗಿ ಬಂದಿರುವುದು ಸಂತೋಷ ತಂದಿದೆ.  ದಾವಣಗೆರೆ ಜನರಿಗೆ ಒಳ್ಳೆಯದು ಮಾಡಲಿ. ಇಲ್ಲಿನವರಿಗೆ ಸಹಾಯ ಮಾಡಲಿ ಮಗ ಬಿ. ಕಾಂ.‌ಓದಿದ ನಂತರ ಹೊಟೇಲ್ ಉದ್ಯಮಕ್ಕೆ ಬರಬೇಕೆಂಬ ಆಸೆ ಇತ್ತು. ಇದೀಗ ಅವರು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯೆನಿಸುತ್ತಿದೆ ಎಂದರು.

click me!