ಬನಾರಸ್‌ ಹಿಂದೂ ವಿವಿ ಜಿಹಾದಿ ಪರವಾಗಿದ್ಯಾ..? ಹೋಳಿ ಆಚರಣೆ ನಿಷೇಧ ಆದೇಶಕ್ಕೆ ವಿಎಚ್‌ಪಿ ಪ್ರಶ್ನೆ

By BK Ashwin  |  First Published Mar 5, 2023, 3:05 PM IST

ವಿಶ್ವವಿದ್ಯಾನಿಲಯವು ರಂಜಾನ್ ಸಮಯದಲ್ಲಿ ಇಫ್ತಾರ್ ಕೂಟಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಈಗ ಹೋಳಿ ಆಚರಣೆಯನ್ನು ತಿರಸ್ಕರಿಸುತ್ತಿದೆ ಎಂದು ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದರು.


ವಾರಾಣಸಿ (ಮಾರ್ಚ್‌ 5, 2023): ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) ಕ್ಯಾಂಪಸ್‌ನಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಿ ಆದೇಶ ನೀಡಿತ್ತು. ಆದರೆ, 
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಬಿಎಚ್‌ಯು ಕ್ಯಾಂಪಸ್‌ನಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸುವ ತನ್ನ ವಿವಾದಾತ್ಮಕ ಆದೇಶವನ್ನು ಹಿಂಪಡೆದಿದೆ.

ಈ ಬಗ್ಗೆ ಮಾಹಿತಿ ನೀಡಿದ  ಬನಾರಸ್ ಹಿಂದೂ ವಿಶ್ವವಿದ್ಯಾಲಯದ (Banaras Hindu University) ಮುಖ್ಯ ಪ್ರಾಕ್ಟರ್‌ (Chief Proctor),  "ಹೋಳಿ (Holi) ಆಚರಿಸಲು ಸಾರ್ವಜನಿಕ ಸ್ಥಳದಲ್ಲಿ (Public Place) ಸೇರುವ ಬಗ್ಗೆ, ಫೆಬ್ರವರಿ 28, 2023 ರಂದು ಹೊರಡಿಸಲಾದ ಆದೇಶವನ್ನು (Order) ಸಾಮಾಜಿಕ ಮಾಧ್ಯಮ ಮತ್ತು ಇತರ ಸಂವಹನ ವಿಧಾನಗಳ ಮೂಲಕ ಸ್ವೀಕರಿಸಿದ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಹಿಂತೆಗೆದುಕೊಳ್ಳಲಾಗುತ್ತಿದೆ. ಪ್ರತಿಯೊಬ್ಬರೂ ಸೌಹಾರ್ದಯುತ ವಾತಾವರಣದಲ್ಲಿ ಸರಿಯಾದ ಘನತೆಯೊಂದಿಗೆ ಬಣ್ಣಗಳ ಹಬ್ಬವನ್ನು (Colourful Festival) ಆಚರಿಸುವ ನಿರೀಕ್ಷೆಯಿದೆ’’ ಎಂದು ಹೇಳಿದರು.

Tap to resize

Latest Videos

ಇದನ್ನು ಓದಿ: ತವರಿಗೆ ಕರ್ಕೊಂಡೋಗಿಲ್ಲ ಅಂತ ಹೆಂಡ್ತಿ ಸಿಟ್ಟಾಗಿದ್ದಾಳೆ; ಹೋಳಿ ಹಬ್ಬಕ್ಕೆ 10 ದಿನ ರಜೆ ಕೇಳಿದ ಪೊಲೀಸಪ್ಪ..!
 

ಫೆಬ್ರವರಿ 28 ರಂದು, BHU ನ ಮುಖ್ಯ ಪ್ರಾಕ್ಟರ್ ಅವರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೋಳಿ ಆಡುವುದನ್ನು ಅಥವಾ ಸಂಗೀತ ನುಡಿಸುವುದನ್ನು ನಿಷೇಧಿಸಲಾಗಿದೆ ಮತ್ತು ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಅಲ್ಲದೆ, ಎಲ್ಲಾ ನಿರ್ದೇಶಕರು, ಅಧ್ಯಾಪಕರು ಮತ್ತು ಆಡಳಿತ ಮುಖ್ಯಸ್ಥರಿಗೆ ಈ ಆದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು ಮತ್ತು ಆದೇಶದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ತಿಳಿಸಲಾಯಿತು.

ಇನ್ನು, ಬಣ್ಣದ ಹಬ್ಬ ಆಚರಣೆಗೆ ಕಡಿವಾಣ ಹಾಕಿ ಆದೇಶ ಹೊರಡಿಸಿದ್ದಕ್ಕೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆಕ್ರೋಶಕ್ಕೆ ಗುರಿಯಾಗಿತ್ತು. ವಿಎಚ್‌ಪಿ ಕೂಡ ಈ ಆದೇಶವನ್ನು ಖಂಡಿಸಿದೆ. ವಿಶ್ವವಿದ್ಯಾನಿಲಯವು ರಂಜಾನ್ ಸಮಯದಲ್ಲಿ ಇಫ್ತಾರ್ ಕೂಟಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಈಗ ಹೋಳಿ ಆಚರಣೆಯನ್ನು ತಿರಸ್ಕರಿಸುತ್ತಿದೆ ಎಂದು ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದರು.

ಇದನ್ನೂ ಓದಿ: Holi 2023: ಹಬ್ಬದಲ್ಲಿ ಈ ಬಣ್ಣಗಳನ್ನು ನೀವು ಬಳಸಲೇಬೇಕು, ಏಕೆ ಗೊತ್ತಾ?

ಅಲ್ಲದೆ, "ಇದು ಸುತ್ತೋಲೆಯೇ ಅಥವಾ ತುಘಲಕ್‌ ಆದೇಶವೇ? ಕಾಶಿಯ ಹಿಂದೂ ವಿಶ್ವವಿದ್ಯಾನಿಲಯವು ಜಿಹಾದಿ ಜಾಮಿಯಾ ಮಾರ್ಗವನ್ನು ಅನುಸರಿಸಲು ಪ್ರಾರಂಭಿಸಿದೆಯೇ? ಜಾಮಿಯಾದಲ್ಲಿ ಹೋಳಿಗೆ ಜಿಹಾದಿಗಳು ವಿರೋಧಿಸುತ್ತಾರೆ. ಕಾಶಿ ಮತ್ತು ಅದರ ಶಿಕ್ಷಾ ಮಂದಿರದಲ್ಲಿ ಸಂಗೀತ ನುಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ? ಹೋಳಿ ಕೇವಲ ಹಬ್ಬವಲ್ಲ, ಅದು ಜಗತ್ತಿನಾದ್ಯಂತ ಸಾಮಾಜಿಕ ಸೌಹಾರ್ದತೆಯ ಮಂತ್ರವೂ ಆಗಿದೆ" ಎಂದು ವಿನೋದ್ ಬನ್ಸಾಲ್ ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ, ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಹೋಳಿ ನಿಷೇಧಿಸುವ ಆದೇಶವನ್ನು ಹಿಂತೆಗೆದುಕೊಂಡ ನಂತರ, ಬನಾರಸ್‌ ಹಿಂದೂ ವಿವಿಯ ಮುಖ್ಯ ಪ್ರಾಕ್ಟರ್, ಕ್ಯಾಂಪಸ್‌ನಲ್ಲಿ ಕೇವಲ ಮೂರು ಸ್ಥಳಗಳು ಅಂದರೆ ಆಸ್ಪತ್ರೆ, ವಿಶ್ವನಾಥನ ನೂತನ ದೇವಾಲಯ ಮತ್ತು ರಸ್ತೆಗಳು ಸಾರ್ವಜನಿಕ ಸ್ಥಳಗಳಾಗಿವೆ. ಈ ಸ್ಥಳಗಳಲ್ಲಿ ಮಾತ್ರ ಹೋಳಿ ಆಚರಣೆಯನ್ನು ನಿಷೇಧಿಸುವ ಹಿಂದಿನ ಆದೇಶವು ಜಾರಿಯಲ್ಲಿತ್ತು ಎದು ಸ್ಪಷ್ಟನೆ ನೀಡಿದ್ದಾರೆ. 

ಇದನ್ನೂ ಓದಿ: Holi 2023: ಹೊಸದಾಗಿ ಮದುವೆಯಾಗಿದೀರಾ? ಹೋಳಿ ಸಮಯದಲ್ಲಿ ಅತ್ತೆ ಮನೆಯಲ್ಲಿರೋ ತಪ್ಪು ಮಾಡ್ಬೇಡಿ!

ಅಲ್ಲದೆ, ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಹೋಳಿ ಆಡುತ್ತಿದ್ದಾರೆ, ಇದರಿಂದ ಯಾವುದೇ ತೊಂದರೆ ಇಲ್ಲ ಮತ್ತು ಇದುವರೆಗೆ ಯಾವುದೇ ವಿದ್ಯಾರ್ಥಿಯಿಂದ ನಮಗೆ ಯಾವುದೇ ದೂರು ಬಂದಿಲ್ಲ. ಕಾಶಿಯ ಹೋಳಿ ವಿಶ್ವವಿಖ್ಯಾತವಾಗಿದೆ. ಆದ್ದರಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಹೋಳಿ ಆಚರಣೆ ಇಲ್ಲದಿರುವುದನ್ನು ಯಾರೂ ಊಹಿಸಲು ಸಾಧ್ಯವಿಲ್ಲಅಲ್ಲದೆ, ಹಿಂದಿನ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದೂ ಬನಾರಸ್‌ ಹಿಂದೂ ವಿವಿಯ ಮುಖ್ಯ ಪ್ರಾಕ್ಟರ್‌ ಹೇಳಿದರು. 

click me!