ಮುಂದಿನ ವರ್ಷ ಶಾಲಾರಂಭ ದಿನವೇ ಸಮವಸ್ತ್ರ, ಪಠ್ಯಪುಸ್ತಕ?

By Kannadaprabha News  |  First Published Mar 5, 2023, 1:18 PM IST

1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪೂರೈಸಬೇಕಿರುವ ಪಠ್ಯಪುಸ್ತಕದಲ್ಲಿ ಶೇ.60 ಕ್ಕೂ ಅಧಿಕ ಭಾಗ ಮುದ್ರಣವಾಗಿದೆ. ಇದರಲ್ಲಿ ಶೇ.40 ಕ್ಕೂ ಅಧಿಕ ಪುಸ್ತಕಗಳು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದೆ. ಮುಂದಿನ ತಿಂಗಳಾಂತ್ಯದಲ್ಲಿ ಮುದ್ರಣ ಮತ್ತು ಸರಬರಾಜು ಎರಡೂ ಮುಗಿಯಲಿವೆ.

ಬೆಂಗಳೂರು(ಮಾ.05):  ಕಳೆದ ವರ್ಷ ಸಮವಸ್ತ್ರ ಮತ್ತು ಪಠ್ಯಪುಸ್ತಕವನ್ನು ಸಕಾಲಕ್ಕೆ ಪೂರೈಸದೇ ಟೀಕೆ ಎದುರಿಸಿದ್ದ ಶಿಕ್ಷಣ ಇಲಾಖೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ತಲುಪಿಸಲು ಈಗಾಗಲೇ ಕಾರ್ಯ ನಿರತವಾಗಿದೆ.

1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪೂರೈಸಬೇಕಿರುವ ಪಠ್ಯಪುಸ್ತಕದಲ್ಲಿ ಶೇ.60 ಕ್ಕೂ ಅಧಿಕ ಭಾಗ ಮುದ್ರಣವಾಗಿದೆ. ಇದರಲ್ಲಿ ಶೇ.40 ಕ್ಕೂ ಅಧಿಕ ಪುಸ್ತಕಗಳು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದೆ. ಮುಂದಿನ ತಿಂಗಳಾಂತ್ಯದಲ್ಲಿ ಮುದ್ರಣ ಮತ್ತು ಸರಬರಾಜು ಎರಡೂ ಮುಗಿಯಲಿವೆ.

Tap to resize

Latest Videos

ಸಮವಸ್ತ್ರ ವಿತರಣೆಗೆ ಸರ್ಕಾರದ ನಿರ್ಲಕ್ಷ್ಯ: ಅಧಿಕಾರಿಯನ್ನ ಜೈಲಿಗೆ ಕಳಿಸ್ತೇವೆ; ಹೈಕೋರ್ಟ್ ಎಚ್ಚರಿಕೆ

ಇನ್ನೂ ಮಕ್ಕಳಿಗೆ ಮೊದಲ ಜೊತೆ ಸಮವಸ್ತ್ರ ನೀಡಲೂ ಟೆಂಡರ್‌ ಕರೆದು ಕಾರ್ಯಾದೇಶ ನೀಡಲಾಗಿದೆ. ಇದರಿಂದಾಗಿ ಉತ್ಪಾದನೆಯ ಜೊತೆಗೆ ಪೂರೈಕೆಯೂ ನಡೆಯುವುದರಿಂದ ಈ ತಿಂಗಳಾಂತ್ಯದಲ್ಲಿ ಸಮವಸ್ತ್ರವೂ ಸಿದ್ಧವಾಗಲಿವೆ. ಆದರೆ ಎರಡನೇ ಜೊತೆ ಸಮವಸ್ತ್ರ ನೀಡುವುದು ಸ್ವಲ್ಪ ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್‌, ‘ಸಮಯಕ್ಕೆ ಸರಿಯಾಗಿ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ತಲುಪುವಂತೆ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ’ ಎಂದು ತಿಳಿಸಿದ್ದಾರೆ.

click me!