ಟೀ ಮಾರ್ತಿದ್ದ ವ್ಯಕ್ತಿಯ ಪುತ್ರಿ ಸಿಎ ಪಾಸ್‌: ಮಗಳ ಸಾಧನೆಗೆ ಭಾವುಕನಾದ ಅಪ್ಪ

Published : Jul 23, 2024, 08:13 PM ISTUpdated : Jul 23, 2024, 08:16 PM IST
ಟೀ ಮಾರ್ತಿದ್ದ ವ್ಯಕ್ತಿಯ ಪುತ್ರಿ ಸಿಎ ಪಾಸ್‌:  ಮಗಳ ಸಾಧನೆಗೆ ಭಾವುಕನಾದ ಅಪ್ಪ

ಸಾರಾಂಶ

ದೆಹಲಿಯ ಸ್ಲಮ್‌ವೊಂದರಲ್ಲಿ ಹುಟ್ಟಿ ಬೆಳೆದ ಅಮಿತಾ ಪ್ರಜಾಪತಿ ಸಾಧಿಸುವ ಛಲವಿದ್ದರೆ, ಸಾಧನೆಗೆ ಯಾವುದು ಕೂಡ ಅಡ್ಡಿಯಾಗದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ನವದೆಹಲಿ: ಕೆಲವು ಮಕ್ಕಳಿಗೆ ಪೋಷಕರು ಎಷ್ಟು ಸವಲತ್ತು ಮಾಡಿ ಕೊಟ್ಟರೂ ಪ್ರತಿಷ್ಠಿತ ವಸತಿ ಶಾಲೆಗಳಲ್ಲಿ ಓದಿಸಿದರೂ,  ಕೋಚಿಂಗ್ ಟ್ಯೂಷನ್ ಅಂತ ಲಕ್ಷಾಂತರ ಹಣ ವೆಚ್ಚ ಮಾಡಿದರೂ ಮಕ್ಕಳು ಮಾತ್ರ ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಾರೆ. ಆದರೆ ಯಾವುದೇ ಸವಲತ್ತುಗಳಿಲ್ಲದಿದ್ದರೂ ಕೆಲ ಮಕ್ಕಳು ತಮ್ಮ ಸ್ವಂತ ಪರಿಶ್ರಮ ಏಕಾಗ್ರತೆ ಸಾಧಿಸುವ ಛಲದಿಂದ ಕಷ್ಟಪಟ್ಟು ಓದಿ ಒಳ್ಳೆಯ ಸಾಧನೆ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬರು ಟೀ ಮಾರುವ ವ್ಯಕ್ತಿಯ ಪುತ್ರಿ ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎನಿಸಿರುವ ಸಿಎ(ಚಾರ್ಟೆಡ್‌ ಅಕೌಂಟೆಂಟ್) ಪರೀಕ್ಷೆಯನ್ನು ಪಾಸು ಮಾಡಿ ಸಾಧನೆ ಮಾಡಿದ್ದಾರೆ. ಮಗಳ ಈ ಅದ್ಭುತ  ಸಾಧನೆಗೆ ಅಪ್ಪನೂ ಭಾವುಕರಾಗಿದ್ದಾರೆ. 

ಈ ಅಪ್ಪ ಮಗಳ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಹೀಗೆ ಕಷ್ಟದಿಂದಲೇ ಮೇಲೆ ಬಂದು ಸಿಎ ಪಾಸ್ ಮಾಡಿದ ಯುವತಿಯ ಹೆಸರು ಅಮಿತಾ ಪ್ರಜಾಪತಿ, ಈಕೆ ಈಗ ಭಾರತದಾದ್ಯಂತ ಲಕ್ಷಾಂತರ ಸಿಎ ಹುದ್ದೆ ಆಕಾಂಕ್ಷಿಗಳಿಗೆ ಪ್ರೇರಣೆ ಆಗಿದ್ದಾರೆ. ದೆಹಲಿಯ ಸ್ಲಮ್‌ವೊಂದರಲ್ಲಿ ಹುಟ್ಟಿ ಬೆಳೆದ ಅಮಿತಾ ಪ್ರಜಾಪತಿ ಸಾಧಿಸುವ ಛಲವಿದ್ದರೆ, ಸಾಧನೆಗೆ ಯಾವುದು ಕೂಡ ಅಡ್ಡಿಯಾಗದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

19 ವರ್ಷಕ್ಕೆ ಸಿಎ ಟಾಪರ್ ಆದ ನಂದಿನಿ: ಗಿನ್ನೆಸ್‌ ವಿಶ್ವ ದಾಖಲೆಯ ಒಡತಿ

ಅಲ್ಲದೇ ತಮ್ಮ ಈ ಸಾಧನೆಗಾಗಿ 10 ವರ್ಷ ಮಾಡಿದ ಪರಿಶ್ರಮದ ತಪಸ್ಸಿನ ಬಗ್ಗೆ ಬಗ್ಗೆ ಲಿಂಕ್ಡಿನ್‌ನಲ್ಲಿ ಮಾಹಿತಿ ನೀಡಿದ್ದಾರೆ. ನಾನು ಈ ಸಾಧನೆ ಮಾಡಲು ಸುಮಾರು 10 ವರ್ಷ ಹಿಡಿದವು, ಪ್ರತಿದಿನವೂ ಇದೊಂದನ್ನು ಸಾಧಿಸಬೇಕು ಎಂದು ಕನಸು ಕಾಣುತ್ತಿದ್ದೆ. ಇದು ಕನಸ ಅಥವಾ ಇದು ನನಸಾಗಲಿದೆಯೇ ಎಂದು ನಾನು ಪ್ರತಿದಿನವೂ ನನ್ನನ್ನು ಪ್ರಶ್ನಿಸಿಕೊಳ್ಳುತ್ತಿದೆ. ಕಡೆಯದಾಗಿ ಜುಲೈ 11 ರಂದು ನನ್ನ ಬಹುವರ್ಷಗಳ ಕನಸು ನನಸಾಯ್ತು. 

ಈ ಸಂದರ್ಭದಲ್ಲೆಲ್ಲಾ ಜೀವನೋಪಾಯಕ್ಕಾಗಿ ಟೀ ಮಾರುತ್ತಿದ್ದ ನನ್ನ ತಂದೆಗೆ ಅನೇಕರು, ನೀನು ಚಹಾ ಮಾರಿ ಆಕೆಯ ಶಿಕ್ಷಣದ ವೆಚ್ಚವನ್ನು ಪೂರೈಸಲು ಸಾಧ್ಯವಿಲ್ಲ, ಅದರ ಬದಲು ಹಣ ಉಳಿಸಿ ಮನೆಕಟ್ಟು, ಬೆಳೆದಿರುವ ಮಗಳ ಜೊತೆ ಎಷ್ಟು ದಿನ ಅಂತ ನೀನು ಬೀದಿಯಲ್ಲಿ ಬದುಕುವೆ? ಎಷ್ಟೇ ಆದರೂ ಅವರು  ಬೇರೆಯವರ ಆಸ್ತಿಯಾಗಿರುವುದರಿಂದ ಅವರು ಬಿಟ್ಟು ಹೋಗುತ್ತಾರೆ? ಹಾಗೂ ನಿನ್ನ ಬಳಿ ಕಡೆಗೆ ಏನು ಉಳಿಯುವುದಿಲ್ಲ ಎಂದು ಹೇಳುತ್ತಿದ್ದರು. ಹೌದು ಖಂಡಿತವಾಗಿಯೂ, ನಾನು ಸ್ಲಮ್‌ನಲ್ಲಿ ವಾಸ ಮಾಡುತ್ತಿದ್ದಾನೆ. (ತುಂಬಾ ಕಡಿಮೆ ಜನರಿಗೆ ಈ ಬಗ್ಗೆ ಗೊತ್ತು), ಆದರೆ ನನಗೆ ಈಗ ಆ ವಿಚಾರದ ಬಗ್ಗೆ ನಾಚಿಕೆ ಇಲ್ಲ ಎಂದು ಹೇಳಿಕೊಂಡಿದ್ದಾರೆ ಅಮಿತಾ ಪ್ರಜಾಪತಿ. 

ಸಿಎ ಪಾಸ್ ಮಾಡಿದ ತರಕಾರಿ ಮಾರೋ ಮಹಿಳೆ ಮಗ: ಖುಷಿಯಿಂದ ಹಿರಿಹಿರಿ ಹಿಗ್ಗಿದ ಅಮ್ಮ

ಅಲ್ಲದೇ ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳದೇ ತನ್ನನ್ನು ಬೆಂಬಲಿಸಿದ, ತನ್ನ ಸಾಧನೆಯ ಮೇಲೆ ನಂಬಿಕೆ ಇರಿಸಿದ್ದ ಪೋಷಕರಿಗೆ ಅಮಿತಾ ಕೃತಜ್ಞತೆ ಸಲ್ಲಿಸಿದ್ದಾರೆ. ಇವತ್ತು ನಾನೇನಾಗಿದ್ದೇನೋ ಅದಕ್ಕೆ ನನ್ನ ಅಪ್ಪ ಅಮ್ಮ ಕಾರಣ, ಅವರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇರಿಸಿದ್ದರು. ಅಲ್ಲದೇ ನಾನು ಮುಂದೊಂದು ದಿನ ಮನೆಬಿಟ್ಟು ಹೋಗುವೆ ಎಂಬಂತಹ ಯೋಚನೆಯನ್ನು ಅವರು ಮಾಡಲಿಲ್ಲ, ಅದರ ಬದಲಾಗಿ ನಾನು ನನ್ನ ಮಗಳನ್ನು ಓದಿಸುತ್ತಿದ್ದೇನೆ ಎಂಬಂತಹ ಯೋಚನೆ ಮಾತ್ರ ಅವರಲ್ಲಿತ್ತು ಎಂದು ಹೇಳಿಕೊಂಡಿದ್ದಾರೆ ಅಮಿತಾ.

ಅಮಿತಾ ಅವರ ಈ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗ್ತಿದೆ. ಜೊತೆಗೆ ಆಕೆ ಅಪ್ಪ ತಾನು ಸಿಎ ಪಾಸ್ ಮಾಡಿದೆ ಎಂದು ಹೇಳುತ್ತಿರುವ ವೀಡಿಯೋವೊಂದು ಸಾಕಷ್ಟು ವೈರಲ್ ಆಗ್ತಿದೆ. 

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ