ಒಸಾಟ್‌ ಕಟ್ಟಿದ ಶಾಲೆಗಳು ಐವತ್ತು; ಒಂದು ಸಲಕ್ಕೆ ಒಂದು ಶಾಲೆ ಯೋಜನೆಯ ಯಶಸ್ವೀ ಕಾರ್ಯಾಚರಣೆ!

By Suvarna News  |  First Published Nov 29, 2020, 9:40 AM IST

ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ದತ್ತು ಪಡೆದು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಆರಂಭಿಸಿ ಇತ್ತೀಚೆಗಷ್ಟೆ1400 ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ನೀಡಿದೆ. ಇಲ್ಲೊಂದು ಸ್ವಯಂ ಸೇವಾ ಸಂಸ್ಥೆ ಸದ್ದಿಲ್ಲದೆ ಕಟ್ಟಡ ಹಾಳಾಗಿ ದುಸ್ಥಿಯಲ್ಲಿರುವ ಒಂದೊಂದೇ ಸರ್ಕಾರಿ ಶಾಲೆಗಳನ್ನು ಕೆಡವಿ ಮೂಲಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿಕೊಡುವ ಮೂಲಕ ಸರ್ಕಾರಿ ಶಾಲೆಗಳ ಕಾಯಕಲ್ಪ ನೀಡುತ್ತಿದೆ.


ಅದು ಒನ್‌ ಸ್ಕೂಲ್‌ ಅಟ್‌ ಎ ಟೈಮ್‌ (ಒಸಾಟ್‌) ಎಂಬ ಸ್ವಯಂ ಸೇವಾ ಸಂಸ್ಥೆ. ಒಸಾಟ್‌ ಎಜುಕೇಷನಲ್‌ ಚಾರಿಟಬಲ್‌ ಟ್ರಸ್ಟ್‌ ಇದೊಂದು ಅಮೇರಿಕಾ ಮೂಲದ ಭಾರತೀಯ ಸ್ವಯಂ ಸೇವಾ ಸಂಸ್ಥೆಯಾಗಿದ್ದು. ಕರ್ನಾಟಕದಲ್ಲೇ ಇದುವರೆಗೂ 35 ಶಾಲೆಗಳನ್ನು ಈಗಾಗಲೇ ನಿರ್ಮಾಣ ಮಾಡಿರುವ ಒಸಾಟ್‌ ಬೇರೆ ಬೇರೆ ರಾಜ್ಯಗಳೂ ಸೇರಿ ಒಟ್ಟು 49 ಶಾಲೆಗಳನ್ನು ನಿರ್ಮಾಣ ಮಾಡಿದೆ. ಪ್ರಸ್ತುತ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹುಬ್ಬರವಾಡಿ ಗ್ರಾಮದ ಸರ್ಕಾರಿ ಶಾಲೆ ನಿರ್ಮಾಣಕ್ಕೆ ನ.20 ರಂದು ಗುದ್ದಲಿ ಪೂಜೆ ನೆರವೇರಿಸಿದೆ. ಇದು ಒಸಾಟ್‌ ಸಂಸ್ಥೆ ನಿರ್ಮಾಣ ಮಾಡುತ್ತಿರುವ 50 ನೇ ಸರ್ಕಾರಿ ಶಾಲೆಯಾದರೆ, 51ನೇ ಶಾಲೆಯಾಗಿ ಕೊಡಗುಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಮಾಯಮುಡಿ ಗ್ರಾಮದ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಮುಂದಿನ ವಾರ ಭೂಮಿ ಪೂಜೆ ನೆರವೇರಿಸುವುದಾಗಿ ಘೋಷಿಸಿದೆ.

 

Tap to resize

Latest Videos

undefined

ಅಮೇರಿಕಾದಲ್ಲಿ 2003 ರಲ್ಲಿ ಕೆಲ ಸ್ವಯಂ ಸೇವಕರಿಂದ ಜನ್ಮತಾಳಿದ ಒಸಾಟ್‌ 2011ರಲ್ಲಿ ಭಾರತಕ್ಕೂ ವಿಸ್ತರಿಸಿತು. ಪ್ರತೀ ವರ್ಷ ಅಮೇರಿಕಾ ಮತ್ತು ಭಾರತೀಯ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ದೇಶದ ಗ್ರಾಮೀಣ ಭಾಗದ ಶಾಲೆಗಳಿಗೆ ಹಂತ ಹಂತವಾಗಿ ಹೊಸ ಕಟ್ಟಡ ನಿರ್ಮಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಪುನರುಜ್ಜೀವನ ಕಾರ್ಯದಲ್ಲಿ ತೊಡಗಿದೆ.

ತರಗತಿ ನಡೆಸಲೂ ಸಾಧ್ಯವಾಗದಷ್ಟುಸ್ಥಿತಿಗೆ ತಲುಪಿರುವ ಶಾಲೆಗಳನ್ನು ಗುರುತಿಸುವ ಸಂಸ್ಥೆ ಆ ಶಾಲೆ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅನುಮತಿ ಪಡೆದು ದೇಣಿಗೆ ಹಣದಲ್ಲಿ ಒಂದು ಸಲಕ್ಕೆ ಒಂದು ಶಾಲೆ ಎಂಬ ಘೋಷವಾಕ್ಯದೊಂದಿಗೆ ಶಾಲೆಗಳ ಪುನರ್‌ ನಿರ್ಮಾಣ ಮಾಡಿಕೊಂಡು ಬರುತ್ತಿದೆ.

ಮಕ್ಕಳಿಗಾಗಿ ವಿದೇಶದಿಂದ ದೇಣಿಗೆ ಪಡೆದು ಬಳಸದ ಕರ್ನಾಟಕದ 45 ಎನ್‌ಜಿಒಗಳು!

ಮಾಲೂರು ಸರ್ಕಾರಿ ಶಾಲೆ ಅತಿ ದೊಡ್ಡ ಯೋಜನೆ!

ಒಸಾಟ್‌ ಎಜುಕೇಷನಲ್‌ ಚಾರಿಟಬಲ್‌ ಟ್ರಸ್ಟ್‌ ಇದುವರೆಗೂ ನಿರ್ಮಿಸಿರುವ ಶಾಲೆಗಳ ಪೈಕಿ ಕೋಲಾರ ಜಿಲ್ಲೆ ಮಾಲೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯದ್ದು ದೊಡ್ಡ ಬಜೆಟ್‌ ಯೋಜನೆಯಾಗಿದೆ. 70 ವರ್ಷ ಹಳೆಯದಾಗಿದ್ದ ಈ ಶಾಲಾ ಕಟ್ಟಡ ಕೆಡವಿ 95 ಲಕ್ಷ ರು.ಗಳಲ್ಲಿ ಒಟ್ಟು ಎಂಟು ಶಾಲಾ ತರಗತಿ ಕೊಠಡಿಗಳಿರುವ ಎರಡು ಹಂತದ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಫ್ಲೈಓವರ್‌ಗೆ ‘ಸಾವರ್ಕರ್‌’ ಹೆಸರೇ ಅಂತಿಮ! 

50 ನೇ ಶಾಲೆಗೆ ಶಂಕು:

ಪ್ರಸ್ತುತ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹುಬ್ಬರವಾಡಿ ಗ್ರಾಮದ ಸರ್ಕಾರಿ ಶಾಲೆ ನಿರ್ಮಾಣಕ್ಕೆ ನ.20 ರಂದು ಶಾಲಾ ಮಕ್ಕಳಿಂದಲೇ ಗುದ್ದಲಿ ಪೂಜೆ ನೆರವೇರಿಸಿದೆ. ಇದು ಒಸಾಟ್‌ ಸಂಸ್ಥೆ ನಿರ್ಮಾಣ ಮಾಡುತ್ತಿರುವ 50 ನೇ ಸರ್ಕಾರಿ ಶಾಲೆಯಾಗಿದ್ದು 32 ಲಕ್ಷ ರು. ಅಂದಾಜು ವೆಚ್ಚದಲ್ಲಿ ಎರಡು ಸುಸಜ್ಜಿತ ಶಾಲಾ ಕೊಠಡಿ ಹಾಗೂ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ.

ದಿ.ಅನಂತ್ ಕುಮಾರ್ ಅವರ ಇಬ್ಬರು ಅದಮ್ಯ ಚೇತನರನ್ನು ನೋಡಿದ್ದೀರಾ? 

click me!