ನೀವು ನೀಡೋ ಉಡುಗೊರೆ ಬದುಕು ಬೆಳಗಲಿ..! ಪ್ರೀತಿ, ಕಾಳಜಿ ಜೊತೆ ಚಂದದ್ದೊಂದು ಗಿಫ್ಟ್

By Suvarna NewsFirst Published Nov 28, 2020, 3:10 PM IST
Highlights

ಹಬ್ಬ ಹರಿದಿನಗಳಲ್ಲಿ ಉಡುಗೊರೆ ನೀಡುವುದು ಮಾಮೂಲಿ. ಆದರೆ, ಏನೇನೂ ಉಡುಗೊರೆ ನೀಡುವ ಬದಲು ಅರ್ಥಪೂರ್ಣ ಗಿಫ್ಟ್‌ಗಳನ್ನು ನೀಡಿದರೆ ಹೇಗೆ? ಅಲ್ಲವೇ, ನಾವು ನೀಡುವ ಸಣ್ಣ ಗಿಫ್ಟ್ ಇನ್ನೂಬ್ಬರಿಗೆ ಹೆಲ್ಪ್ ಆದರೆ ಹೇಗಿರುತ್ತದೆ ಅಲ್ವಾ?

ಉಡುಗೊರೆಗಳು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಹಬ್ಬಗಳ ಸಂದರ್ಭದಲ್ಲಿ ಸ್ವೀಟ್ ಬಾಕ್ಸ್, ಬಟ್ಟೆ ಇತ್ಯಾದಿಗಳನ್ನ ತಮ್ಮ ಪ್ರೀತಿಪಾತ್ರರಿಗೆ ಗಿಫ್ಟ್ ಆಗಿ ನೀಡಿ ಖುಷಿ ಪಡಿಸುತ್ತೇವೆ. ಇನ್ನು ಬರ್ತಡೇ, ಮದುವೆ, ಆನಿವರ್ಸಿರಿ ಬಂದಾಗಲೂ ದುಬಾರಿ ಉಡುಗೊರೆಗಳನ್ನ ನೀಡುತ್ತೇವೆ. ಶಾಪಿಂಗ್ ಮಾಲ್, ಶಾಪಿಂಗ್ ವೆಬ್‌ಸೈಟ್‌ಗಳನ್ನು ಹುಡುಕಾಡಿ ಬೆಸ್ಟ್, ಬೊಂಬಾಟ್ ಎನ್ನಿಸೋ ಗಿಫ್ಟ್‌ಗಳನ್ನ ಖರೀದಿಸುತ್ತೇವೆ.

ಆದ್ರೆ ಎಂದಾದ್ರೂ ಅರ್ಥಪೂರ್ಣ ಗಿಫ್ಟ್‌ಗಳ ಬಗ್ಗೆ ಯೋಚಿಸಿದ್ದೀರಾ? ಅಂದರೆ ಶಿಕ್ಷಣ ಉಡುಗೊರೆಯನ್ನು ನೀಡುವ ಬಗ್ಗೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೀವು ಈ ಶೈಕ್ಷಣಿಕ ಉಡುಗೊರೆಯನ್ನು ನೀಡಬಹುದು. ಹಲವು ಮಾರ್ಗಗಳ ಮೂಲಕ ಶಿಕ್ಷಣದ ಉಡುಗೊರೆ ನೀಡೋ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಬಹುದು.

ಸಖತ್ ಸಂಬಳ ನೀಡುವ ವೃತ್ತಿಗಳು ಯಾವವು ಗೊತ್ತಾ?

ವೈಯಕ್ತಿಕವೆಂದು ಪರಿಗಣಿಸಿ

ಉಡುಗೊರೆ ನೀಡಲು ನಿಮ್ಮ ಬಳಿ ಸಾಕಷ್ಟು ಆಯ್ಕೆಗಳಿರುತ್ತವೆ. ಒಂದು ಪರಿಪೂರ್ಣವಾದ ಕೋರ್ಸ್ ಅನ್ನು ನೀವು ಶೈಕ್ಷಣಿಕ ಗಿಫ್ಟ್ ಆಗಿ ನೀಡಬಹುದು.  ನಿನ್ನ ಗೆಳತಿ ಅಥವಾ ಗೆಳಯ, ತಮ್ಮ ಫೋನೋನಲ್ಲಿ ಅದ್ಭುತ ಫೋಟೋಗಳನ್ನ ಕ್ಲಿಕ್ ಮಾಡಿರುತ್ತಾರೆ. ಆದರೆ ಅವರು ಫೋಟೋಗ್ರಫಿಯನ್ನ ಕಲಿತಿರುವುದಿಲ್ಲ. ಅಂಥವರಿಗೆ ಆನ್ ಲೈನ್ ಫೋಟೋಗ್ರಫಿ ಕೋರ್ಸ್ ಅನ್ನು ಉಡುಗೊರೆಯಾಗಿ ನೀಡಿ.  ಮುಂದಿನ ಯೂಟ್ಯೂಬ್ ಸಂವೇದನೆಗಾಗಿ ಕಾಯುತ್ತಿರುವ ಸ್ನೇಹಿತರಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೋರ್ಸ್ ಆರಂಭಿಸಿ. ನಿಮ್ಮ ಉಡುಗೊರೆ ಅವರ ಕನಸುಗಳನ್ನು ವಾಸ್ತವಕ್ಕೆ ಪರಿವರ್ತಿಸುವ ಸೇತುವೆಯಾಗಲಿದೆ.

ಸಹಾಯ ಹಸ್ತ ಚಾಚಿರಿ

ನಿಮ್ಮಂತೆ ಅದೃಷ್ಟವಂತರಲ್ಲದ ಜನರು ನಿಮ್ಮ ಸುತ್ತ ಯಾವಾಗಲೂ ಇದ್ದೇ ಇರುತ್ತಾರೆ. ಒಂದು ಪೀಳಿಗೆಗೆ ಸಿಗುವ ಗುಣಮಟ್ಟದ ಶಿಕ್ಷಣ, ಆ ಇಡೀ ಕುಟುಂಬದ ಅದೃಷ್ಟವನ್ನು ಬದಲಿಸಬಹುದು. ಹೀಗಾಗಿ ಹಬ್ಬದ ಸಂದರ್ಭದಲ್ಲಿ ನಿಮ್ಮ ಮನೆಗೆಲಸದವಳು, ಆಫೀಸ್ ಬಾಯ್ ಅಥವಾ ನಿಮ್ಮ ಕಾರು ಡ್ರೈವರ್ ಮಗು ಇದ್ದರೆ, ಅವರಿಗೆ ಪೆನ್, ನೋಟ್‌ಬುಕ್, ಕ್ರಯೋನ್ಸ್ ಬಾಕ್ಸ್ ಅಥವಾ ಯಾವುದೇ ರೀತಿಯ  ಆನ್‌ಲೈನ್ ಕೋರ್ಸ್‌ನ ಚಂದಾದಾರಿಕೆಯನ್ನು ಕೊಡಿಸಿಕೊಡಿ. ಈ ಮೂಲಕ ನೀವು ಅವರ ಅದೃಷ್ಟವನ್ನು ಬದಲಿಸಬಹುದು. ಇದ್ರಿಂದ ನೀವು ಕೇವಲ ಒಬ್ಬ ವಿದ್ಯಾರ್ಥಿಗೆ ಸಹಾಯ ಮಾಡಿದಂತಲ್ಲ. ಇಡೀ ಕುಟುಂಬದ ಭವಿಷ್ಯವನ್ನು ಬದಲಾಯಿಸಿದ್ದೀರಿ ಎಂದು ಅರ್ಥ. 

ಈ ಯುನಿವರ್ಸಿಟೀಲಿ ಕಲಿತರೆ ಉದ್ಯೋಗ ಪಕ್ಕಾ, ಕರ್ನಾಟಕದ್ದು ಇದೆಯಾ?

ನಿಮ್ಮ ಬಜೆಟ್‌ಗೆ ಬದ್ಧವಾಗಿರಿ

ಆನ್‌ಲೈನ್‌ನಲ್ಲಿ ಉಡುಗೊರೆಗಳಿಗಾಗಿ ನೀವು ಶಾಪಿಂಗ್ ಮಾಡುವಾಗ ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ವಿಷಯಗಳು ಬರುತ್ತವೆ. ಸ್ಕ್ರೀನ್ ಮೇಲೆ ಕೆಲವೊಂದು ಆಕರ್ಷಕ ಜಾಹೀರಾತುಗಳು ಪಾಪ್ ಅಪ್ ಆಗುತ್ತವೆ. ಅದರಲ್ಲಿ ಕೆಲವೊಂದು ಉತ್ತಮ ಎನಿಸಿದ್ರೆ, ಇನ್ನು ಕೆಲವು ದುಬಾರಿ ಅನ್ನಿಸುತ್ತದೆ. ಹೀಗಾಗಿ ನೀವು ಗಿಫ್ಟ್ ವಿಚಾರದಲ್ಲಿ ಶಿಕ್ಷಣದ ಉಡುಗೊರೆಯನ್ನ ಆರಿಸಬಹುದು.  ಇದರ ಮೌಲ್ಯವು ಯಾವಾಗಲೂ ಬೆಲೆಗಿಂತ ತುಂಬಾ ಹೆಚ್ಚಿರುತ್ತದೆ.

ರೋಡ್ಸ್ ಸ್ಕಾಲರ್‌ಶಿಫ್ ಗೆದ್ದ ಮೊದಲ ವಿದ್ಯಾರ್ಥಿಗೆ ಶಾಲಾ ಶಿಕ್ಷಕಿಯೇ ಸ್ಫೂರ್ತಿ

ಕಾಳಜಿ ವಹಿಸುತ್ತೇನೆ ಅಂತ ಹೇಳಬೇಡಿ

ನೀವು ಯಾರಿಗಾದರೂ ಉಡುಗೊರೆಯನ್ನು ನೀಡಿದಾಗ, ಅದು ಆ ವ್ಯಕ್ತಿಯ ಬಗ್ಗೆ ನೀವು ಯೋಚಿಸುತ್ತಿದ್ದೀರಿ. ಆ ವ್ಯಕ್ತಿಯನ್ನು ನಿಮಗೆ ಚೆನ್ನಾಗಿ ತಿಳಿದಿದೆ, ನೀವು ಕಾಳಜಿ ವಹಿಸುತ್ತೀರಿ ಎಂದು ಹೇಳುವ ಒಂದು ರೀತಿಯ ಸಂವಹನವಾಗಿದೆ. ಯಾರಿಗಾದರೂ ಸೂಕ್ತವಾದ ಕೋರ್ಸ್ ಅನ್ನು ತೆಗೆದುಕೊಳ್ಳಲು ನೀವು ಕೆಲವು ನಿಮಿಷಗಳನ್ನು ಸ್ಪೆಂಡ್ ಮಾಡುವಾಗ, ಇನ್ನಿತರ ಎಲ್ಲ ವಿಚಾರಗಳನ್ನ ಮರೆಯಬೇಕಾಗುತ್ತದೆ. 

ರಿಟರ್ನ್ ಉಡುಗೊರೆ

ಅಂದಹಾಗೇ ಈ ಶಿಕ್ಷಣದ ಗಿಫ್ಟ್‌ನಲ್ಲಿ ಒಳ್ಳೆಯ ಸ್ವಾರ್ಥವೊಂದಿದೆ. ನೀವು ಯಾರಿಗಾದರೂ ಶಿಕ್ಷಣವನ್ನು ಉಡುಗೊರೆಯಾಗಿ ನೀಡಿದಾಗ, ಹೆಚ್ಚು ಲಾಭ ಪಡೆಯುವ ವ್ಯಕ್ತಿ ನೀವೇ. ನಿಮ್ಮಿಂದ ಫೋಟೋಗ್ರಫಿ ಕಲಿತ ವ್ಯಕ್ತಿ,  ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಸುಂದರ ಚಿತ್ರಗಳನ್ನ ಸೆರೆಹಿಡಿದಿರಬಹುದು. ಇನ್ನು ಕ್ರಯೋನ್‌ಗಳನ್ನು ಉಡುಗೊರೆಯಾಗಿ ಪಡೆದ ಮಗು ಕೆಲವು ವರ್ಷಗಳಲ್ಲಿ ನಿಮ್ಮ ಸ್ಟಾರ್ ಉದ್ಯೋಗಿಯಾಗಬಹುದು. ಹೀಗಾಗಿ ಪ್ರತಿ ಬಾರಿಯೂ ನೀವು ಜ್ಞಾನದ ಉಡುಗೊರೆಯನ್ನು ಹಂಚಿಕೊಂಡಾಗ, ಅದು ನಿಮ್ಮ ಜೀವನವನ್ನು ನೀವು ಊಹಿಸುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಶ್ರೀಮಂತಗೊಳಿಸುತ್ತದೆ.

click me!