ಮೆಡಿಕಲ್‌, ಎಂಜಿನಿಯರಿಂಗ್‌ ಪ್ರವೇಶಕ್ಕೆ ಆ.23 ರವರೆಗೆ ಅವಕಾಶ

By Kannadaprabha News  |  First Published Aug 20, 2023, 3:00 AM IST

2023ನೇ ಸಾಲಿನ ಎರಡನೇ ವರ್ಷ/ ಮೂರನೇ ಸೆಮಿಸ್ಟರ್‌ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಹಗಲು ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು, ಅರ್ಹ ಡಿಪ್ಲೊಮಾ ಅಭ್ಯರ್ಥಿಗಳಿಗೆ ಆ.23ರ ರಾತ್ರಿ 11.59ರವರೆಗೆ ಅವಕಾಶ ನೀಡಲಾಗಿದೆ. 


ಬೆಂಗಳೂರು(ಆ.20): ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಯುಜಿ ನೀಟ್‌, ಸಿಇಟಿಗೆ ಮೊದಲ ಸುತ್ತಿನ ಸಂಯೋಜಿತ ಸೀಟು ಹಂಚಿಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು ಪ್ರವೇಶಾತಿಗೆ ಆ.23 ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಆ.20ರಂದು ಭಾನುವಾರವಾಗಿದ್ದು, ರಜೆ ಹಿನ್ನೆಲೆಯಲ್ಲಿ ದಾಖಲೆ ಸ್ವೀಕರಿಸುವುದಿಲ್ಲ. ಕಾಲೇಜು, ಕೋರ್ಸ್‌ ಆಯ್ಕೆ (ಚಾಯ್ಸ್‌) ಮಾಡಿಕೊಳ್ಳಲು ಆ.22ರಂದು ಬೆಳಿಗ್ಗೆ 11 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ. 

ಶುಲ್ಕ ಪಾವತಿಸಲು ಆ.23ರಂದು ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ಇರುತ್ತದೆ. ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಆ.23ರ ಸಂಜೆ 4 ಗಂಟೆವರೆಗೆ ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಸಿ, ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆ ಶನಿವಾರದಿಂದಲೇ ಆರಂಭವಾಗಿದೆ. ಆ.20ರಂದು ರಜೆ ಇರುವ ಕಾರಣ ಮೂಲ ದಾಖಲೆಗಳ ಸ್ವೀಕಾರ ಇರುವುದಿಲ್ಲ. ವೈದ್ಯಕೀಯ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಸಲ್ಲಿಸುವ ಬಾಂಡ್‌ನಲ್ಲಿ ಮೊದಲನೇ ಪಾರ್ಟಿ ‘ಅಭ್ಯರ್ಥಿ’, ಎರಡನೇ ಪಾರ್ಟಿ ‘ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ಸರ್ಕಾರ’ ಎಂದು ನಮೂದಿಸಬೇಕು.

Tap to resize

Latest Videos

undefined

ವಿದ್ಯಾರ್ಥಿಗಳು ಹೇಗೆ ಓದಬೇಕು ಅಂದ್ರೆ ರಿಸಲ್ಟ್ ದಿನ ಇಡೀ ಕರ್ನಾಟಕವೇ ನಿಮ್ಮ ಬಗ್ಗೆ ಓದಬೇಕು: ಪ್ರದೀಪ್‌ ಈಶ್ವರ್‌

ದಿನಾಂಕ ವಿಸ್ತರಣೆ:

2023ನೇ ಸಾಲಿನ ಎರಡನೇ ವರ್ಷ/ ಮೂರನೇ ಸೆಮಿಸ್ಟರ್‌ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಹಗಲು ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು, ಅರ್ಹ ಡಿಪ್ಲೊಮಾ ಅಭ್ಯರ್ಥಿಗಳಿಗೆ ಆ.23ರ ರಾತ್ರಿ 11.59ರವರೆಗೆ ಅವಕಾಶ ನೀಡಲಾಗಿದೆ. ಈ ಅಂತಿಮ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

click me!