ಕೋಟಾದಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ: ತನಿಖೆಗೆ ವಿಶೇಷ ಸಮಿತಿ ರಚನೆಗೆ ಸಿಎಂ ಆದೇಶ

By Anusha KbFirst Published Aug 19, 2023, 9:19 AM IST
Highlights

ರಾಜಸ್ಥಾನದ ಕೋಟದಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಈ ಬಗ್ಗೆ ತನಿಖೆಗೆ ವಿಶೇಷ ಸಮಿತಿ ರಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.  

ಕೋಟಾ: ರಾಜಸ್ಥಾನದ ಕೋಟದಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಈ ಬಗ್ಗೆ ತನಿಖೆಗೆ ವಿಶೇಷ ಸಮಿತಿ ರಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.  ಕೋಟಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಹೆಸರಾಗಿದ್ದು, ಇಲ್ಲಿ ದೇಶದ ವಿವಿಧೆಡೆಯಿಂದ ಬಂದು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಾರೆ. ನೀಟ್‌ (National Eligibility cum Entrance Test) ಜೆಇಇ (Joint Entrance Examination) ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಈ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳು ಒತ್ತಡ ತಡೆಯಲಾಗದೇ ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಈ ವರ್ಷ ಹೀಗೆ ಮೃತರಾದವರ ಸಂಖ್ಯೆ 22 ಲಕ್ಷಕ್ಕೆ ಏರಿಕೆ ಆಗಿದೆ. ಇದು 8 ವರ್ಷಗಳೇ ಅತೀಹೆಚ್ಚು ಸಾವು ಎನಿಸಿದೆ.  ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳು ಚಿಂತೆಗೀಡಾಗಿದ್ದಾರೆ. ಇದು ಪೋಷಕರನ್ನು ಕೂಡ ಚಿಂತೆಗೀಡು ಮಾಡಿದೆ. ರಾಜ್ಯ ಸರ್ಕಾರವೂ ಕೂಡ ಈಗ ಈ ಬಗ್ಗೆ ಸಮಗ್ರ ತನಿಖೆಗೆ ಮುಂದಾಗಿದ್ದು, ಸಮಿತಿ ರಚನೆಗೆ ಮುಂದಾಗಿದೆ.

ವಿದ್ಯಾರ್ಥಿಗಳ ಸಾವಿನ ತನಿಖೆಗೆ ಸಮಿತಿ ರಚಿಸಲಾಗುವುದು. ಉನ್ನತ ಶಿಕ್ಷಣದ ಕಾರ್ಯದರ್ಶಿ ಭವಾನಿ ದೇಥಾ ಅವರ ಮೇಲ್ವಿಚಾರಣೆಯಲ್ಲಿ ಸಮಿತಿಯನ್ನು ರಚಿಸಲಾಗುವುದು ಮತ್ತು ಕೋಚಿಂಗ್ ಸಂಸ್ಥೆಗಳ ಪ್ರತಿನಿಧಿಗಳು, ಪೋಷಕರು ಮತ್ತು ವೈದ್ಯರು ಸೇರಿದಂತೆ ವಿವಿಧ ಜನರನ್ನು  ಇದು ಒಳಗೊಂಡಿರುತ್ತದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ 15 ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. 

Latest Videos

Bengaluru PES College: ಪರೀಕ್ಷೆಯಲ್ಲಿ ಕಾಪಿ ಮಾಡ್ತಿದ್ದ ವಿದ್ಯಾರ್ಥಿಗೆ ಅವಮಾನ: 14ನೇ ಮಹಡಿಯಿಂದ ಬಿದ್ದು ಸಾವು

ಕೋಟಾ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ನೇತೃತ್ವದಲ್ಲಿ ನಿನ್ನೆ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಾತನಾಡಿದ ಸಿಎಂ ಇಂತಹ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ ಏರಿಕ ಆಗಬಾರದು. ಸುಧಾರಣೆ ಮಾಡುವ ಸಮಯ ಬಂದಿದೆ. ಯುವ ವಿದ್ಯಾರ್ಥಿಗಳು ಸಾಯುವುದನ್ನು ನೋಡಲಾಗದು.  ಪ್ರತಿಯೊಂದು ಮಗುವಿನ ಸಾವು ಕೂಡ ದುರಂತವೇ ಅಲ್ಲದೇ ಇದು ಪೋಷಕರಿಗೆ ದೊಡ್ಡ ನಷ್ಟ ಎಂದು ಅವರು ಹೇಳಿದ್ದಾರೆ. 

ಶಾಲೆಯಲ್ಲಿ ಶಿಕ್ಷಕ, ಹೊರಗಡೆ ಶಿಕ್ಷಕರ ಪುತ್ರನಿಂದ ಕಿರುಕುಳ: 16ರ ಹರೆಯದ ಸಾರಾ ಆತ್ಮಹತ್ಯೆಗೆ ಶರಣು

ಅಲ್ಲದೇ ಮುಂದೆ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಕೋಚಿಂಗ್‌ಗೆ ಪ್ರವೇಶವಿಲ್ಲ, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಹೊರೆಯಾಗುವುದರಿಂದ ಮಕ್ಕಳನ್ನು ಕೋಚಿಂಗ್ ಇನ್ಸ್ಟಿಟ್ಯೂಟ್‌ಗೆ ಸೇರಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ. ನೀವು 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳನ್ನು ಕೋಚಿಂಗ್ ಕ್ಲಾಸ್‌ಗೆ ಸೇರಿಸುವ ಮೂಲಕ ಅಪರಾಧ ಮಾಡುತ್ತಿದ್ದೀರಿ ಇದು ಪೋಷಕರ ದೊಡ್ಡ ತಪ್ಪು. ಬೋರ್ಡ್ ಪರೀಕ್ಷೆಗಳಲ್ಲಿ (Board exam) ಪಾಸಾಗುವ ಹಾಗೂ ಪ್ರವೇಶ ಪರೀಕ್ಷೆಗೆ ತಯಾರಾಗುವ ಹೊರೆಯನ್ನು ಒಟ್ಟೊಟ್ಟಿಗೆ ವಿದ್ಯಾರ್ಥಿಗಳು ಎದುರಿಸುತ್ತಾರೆ ಎಂದು ಅವರು ಹೇಳಿದ್ದಾರೆ. 

ಪ್ರತಿವರ್ಷ, ಭಾರತದ ವಿವಿಧ ಪ್ರದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು (Student) ಪ್ರತಿಷ್ಠಿತ ಭಾರತೀಯ ಕಾಲೇಜುಗಳಿಗೆ ಪ್ರವೇಶ ಪಡೆಯುವ ಕನಸಿನೊಂದಿಗೆ ಕೋಟಾಕ್ಕೆ ಆಗಮಿಸುತ್ತಾರೆ. ಇಲ್ಲಿನ ಕೋಚಿಂಗ್ ಸೆಂಟರ್‌ಗಳಲ್ಲಿ (coaching center) ಸೇರಿ ತರಬೇತಿ ಪಡೆಯುತ್ತಾರೆ. ಆದರೆ ಇತ್ತೀಚೆಗೆ ಪ್ರಕರಣ ಸಾವಿನ ಸರಣಿ ಹೆಚ್ಚಾಗಿದ್ದು, ಇದು ಮಕ್ಕಳು ಎದುರಿಸುವ ದೊಡ್ಡ ಪ್ರಮಾಣದ  ಒತ್ತಡವನ್ನು ತೋರಿಸುತ್ತಿದೆ. ಮಕ್ಕಳನ್ನು ಒತ್ತಡದಿಂದ ಬೇರ್ಪಡಿಸಿ ಯುವ ಜೀವಗಳನ್ನು ಉಳಿಸಲು ಕೆಲವು ದೀರ್ಘಾವಧಿಯ ರಚನಾತ್ಮಕ ಬದಲಾವಣೆಗಳ ಅಗತ್ಯವಿದೆ.

ಮೊನ್ನೆ ಮಂಗಳವಾರ ವಾಲ್ಮೀಕಿ ಜಂಗಿದ್ ಎಂಬ ವಿದ್ಯಾರ್ಥಿ  ಕೋಟಾದಲ್ಲಿ (Kota) ಸಾವಿಗೆ ಶರಣಾಗಿದ್ದ, ವಾಲ್ಮೀಕಿ ಜಂಗಿದ್ ಬಿಹಾರದ ಗಯಾ ಜಿಲ್ಲೆಯನಾಗಿದ್ದು, ಕೋಟಾದಲ್ಲಿ ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದ. ಈತನ ಸಾವಿನ ನಂತರ ಎಚ್ಚೆತ್ತ ಆಡಳಿತ ಈಗ ವಿದ್ಯಾರ್ಥಿಗಳು ಉಳಿಯುವ ಹಾಸ್ಟೆಲ್‌ಗಳಿಗೆ ಆತ್ಮಹತ್ಯೆ ತಡೆಯುವಂತಹ ಸೀಲಿಂಗ್ ಫ್ಯಾನ್ ಅಳವಡಿಸಲು ನಿರ್ಧರಿಸಿದೆ. 

click me!