ಮಾಜಿ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್‌ರಂತೆ, ಬೆಳ್ಳಿ ಸಾರೋಟಿನಲ್ಲಿ ಶಿಕ್ಷಕಿ ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು

By Sathish Kumar KHFirst Published Aug 19, 2023, 6:36 PM IST
Highlights

ಸರ್ವೇಪಲ್ಲಿ ರಾಧಾಕೃಷ್ಣನ್‌ ಅವರಂತೆ ಬಳ್ಳಾರಿಯಲ್ಲಿ ವರ್ಗಾವನೆಗೊಂಡ ಶಿಕ್ಷಕಿಗೆ ವಿದ್ಯಾರ್ಥಿಗಳು ಬೆಳ್ಳಿ ಸಾರೋಟಿನಲ್ಲಿ ಕೂರಿಸಿ ಮೆರವಣಿಗೆ ಮಾಡಿ, ಬೀಳ್ಕೊಟ್ಟಿದ್ದಾರೆ,

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್

ಬಳ್ಳಾರಿ (ಆ.19): ಆಧುನಿಕತೆ ಎಷ್ಟೇ ಬೆಳೆದರೂ ಗುರು ಮತ್ತು ಶಿಷ್ಯರ ಮಧ್ಯೆ ಇರೋ ಸಂಬಂಧ ಮಾತ್ರ  ಕಾಲ ಕಾಲಕ್ಕೂ ಮತ್ತಷ್ಟು ಗಟ್ಟಿಯಾಗುತ್ತಲೇ ಇದೆ ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿಯಾಗಿದೆ. ಶಿಕ್ಷಕರು ಶಾಲೆಯಿಂದ ವರ್ಗಾವಣೆಯಾಗಿ  ಹೋಗೋವಾಗ ಅಥವಾ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಹೋಗುವಾಗ ಕಣ್ಣೀರು ಹಾಕೋದು ಸಾಮಾನ್ಯ. ಆದರೆ, ಬಳ್ಳಾರಿಯಲ್ಲಿ ಜ್ಯೋತಿ ಎನ್ನುವ ಶಿಕ್ಷಕಿ ವರ್ಗಾವಣೆಯಾಗಿ ನಮ್ಮ ದೇಶದ ಮಾಜಿ ರಾಷ್ಟ್ರಪತಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್‌ ಅವರಿಗೆ ಮೈಸೂರಿನ ವಿದ್ಯಾರ್ಥಿಗಳು ಸಾರೋಟಿನಲ್ಲಿ ಮೆರವಣಿಗೆ ಮಾಡಿದಂತೆ,  ಹೋಗೋವಾಗ ಬಳ್ಳಾರಿಯ ವಿದ್ಯಾರ್ಥಿಗಳು ಕೂಡ ಬೆಳ್ಳಿ ರಥದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಿ ಬಿಳ್ಕೋಡಿಗೆ ನೀಡಿದ್ದಾರೆ. 

ಬೆಳ್ಳಿ ರಥದಲ್ಲಿ ಶಿಕ್ಷಕಿನ್ನು ಕಣ್ಣಿರುಡುತ್ತಲೇ ಬಿಳ್ಕೋಡುಗೆ ನೀಡಿದ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕುರುವಳ್ಳಿ ಎನ್ನುವ ಪುಟ್ಟ ಗ್ರಾಮ. ಕಳೆದ ಹದಿನೈದು ವರ್ಷ ಸಲ್ಲಿಸಿದ ಸೇವೆಗೆ ಇಡೀ ಊರಿಗೆ ಊರೇ ಬಂದು ಶಿಕ್ಷಕಿಗೆ ಸತ್ಕಾರ ಮಾಡಿದೆ. ಶಿಕ್ಷಕಿ ಜ್ಯೋತಿ ಕೂಡ ಕಣ್ಣಿರಿಡುತ್ತಲೇ ಗ್ರಾಮದಿಂದ ಹೊರ ನಡೆದಿದ್ದಾರೆ. ಹೌದು, ಹಳ್ಳಿಗಳು ಅದರಲ್ಲೂ ಗಡಿಗ್ರಾಮಗಳ ಶಾಲೆಯಂದ್ರೇ ಸರ್ಕಾರಕ್ಕೆ ಮಾತ್ರವಲ್ಲ ಅಲ್ಲಿ ಕೆಲಸ ಮಾಡೋ ಶಿಕ್ಷಕರಿಗೂ ನಿರ್ಲಕ್ಷ್ಯ ಇರುತ್ತದೆ. ಕಾರಣ  ಇಲ್ಲಿಗೆ ಯಾರು ಬರೋದಿಲ್ಲ. ಬಂದರೂ ನಮ್ಮನ್ನು ಯಾರು ಏನು ಕೇಳೋದಿಲ್ಲ ಅನ್ನೋ ಭಾವನೆ ಇರುತ್ತದೆ.

ಅಮೇರಿಕಾದಲ್ಲಿ ಕನ್ನಡದ ಕುಟುಂಬ ದಾರುಣ ಸಾವು: ಗಂಡ, ಹೆಂಡ್ತಿ ಮಗು ಮೃತ

ಆದರೆ, ಮೂಲತಃ ಕೋಲಾರದವರಾದ ಜ್ಯೋತಿ ಎನ್ನುವ ಶಿಕ್ಷಕಿ ಕಳೆದ ಹದಿನೈದು ವರ್ಷಗಳ ಹಿಂದೆ ಸಿರಗುಪ್ಪ ತಾಲೂಕಿನ ಕುರುವಳ್ಳಿ ಎನ್ನುವ ಪುಟ್ಟ ಗ್ರಾಮಕ್ಕೆ ಶಿಕ್ಷಕಿಯಾಗಿ ಬಂದು ಇಡೀ ಶಾಲೆಯ ವಾತವರಣವನ್ನೇ ಬದಲಾಯಿಸಿದ್ದರು. ಕೇವಲ ಪಾಠಕ್ಕೆ ಸೀಮಿತವಾಗದೇ  ಮಕ್ಕಳಲ್ಲಿನ  ಪಠ್ಯತರ ಚಟುವಟಿಕೆ ಗುರುತಿಸಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿದ್ದರು. ದುಸ್ತಿತಿಯಲ್ಲಿರೋ ಶಾಲೆಯನ್ನು ಸರ್ಕಾರ ಮತ್ತು ಸ್ಥಳೀಯರ ಸಹಾಯ ಸಹಕಾರದಿಂದ ಮಾದರಿ ಶಾಲೆಯನ್ನಾಗಿ ಮಾಡಿದ್ದರು. ಹೀಗಾಗಿ ಅವರ ವರ್ಗಾವಣೆಯಾಗಿದ್ದರಿಂದ ಇಲ್ಲಿಯ ಮಕ್ಕಳಿಗಷ್ಟೇ ಅಲ್ಲದೇ ಗ್ರಾಮಸ್ಥರಿಗೂ ಬೇಸರವನ್ನು ಮೂಡಿಸಿತ್ತು.

ಕಣ್ಣಿರಿಡುತ್ತಲೇ ಶಿಕ್ಷಕಿಯ ಸೇವೆ ಗುಣಗಾನ ಮಾಡಿದ ವಿದ್ಯಾರ್ಥಿಗಳು: ಇನ್ನು ಶಿಕ್ಷಕಿ ಮೂಲತಃ ಕೋಲಾದವರಾದರೂ ಹೈದ್ರಬಾದ ಕರ್ನಾಟಕದ ಅದರಲ್ಲೂ ಆಂಧ್ರ ಗಡಿಯಲ್ಲಿಯ ಈ ಗ್ರಾಮದಲ್ಲಿನ ಭಾಷೆ, ಜನರಿಗೆ ಹೊಂದಿಕೊಂಡು ಇಲ್ಲಿ ಸೇವೆ  ಮಾಡಿದ್ದಾರೆ. ಇಲ್ಲಿನ ಸ್ಥಳ, ಜನ, ವಿದ್ಯಾರ್ಥಿಗಳು ಹೊಸಬರಾದರೂ ಇಲ್ಲಿ ಸುದೀರ್ಘವಾಗಿ  15 ವರ್ಷಗಳ ಕಾಲ ಕೆಲಸ ಮಾಡಿ ಮಕ್ಕಳಷ್ಟೇ ಅಲ್ಲದೇ ಇಡೀ ಗ್ರಾಮದಲ್ಲಿನ ಜನರ ಮೆಚ್ಚನ ಶಿಕ್ಷಕಿಯಾಗಿದ್ದರು. ಬೆಂಗಳೂರು ಭಾಗದಿಂದ ವರ್ಗವಣೆಯಾಗಿ ಬಂದವರು ಬಂದ ದಿನದಿಂದಲೇ ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪರದಾಡುತ್ತಿರುತ್ತಾರೆ.

ಆದರೆ, ಜ್ಯೋತಿ ಮಾತ್ರ ನಿರಂತರವಾಗಿ ಹದಿನೈದು ವರ್ಷಗಳ ಕಾಲ ಸೇವೆ ಮಾಡೋ ಮೂಲಕ  ಇದೀಗ ರಾಮನಗರ ಜಿಲ್ಲೆಯ ಚೆನ್ನಪಟ್ಟಣಕ್ಕೆ ವಗರ್ವಾಣೆಯಾಗಿ ಹೋಗುತ್ತಿದ್ದಾರೆ. ಇಲ್ಲಿ ಮಕ್ಕಳು ಮತ್ತು ಗ್ರಾಮವೇ ತಮ್ಮ ಪ್ರಪಂಚವೆಂದು ಕೊಂಡಿದ್ದ ಶಿಕ್ಷಕಿ 2009ರಲ್ಲಿ ಬಂದ ಜಲ ಪ್ರವಾಹದ ಸಮಯದಲ್ಲಿ ಜನರ ಜೊತೆ ಇದ್ದು, ಹಗಲಿರುಳು ಕೆಲಸ ಮಾಡಿದ್ದು, ಅವಿಸ್ಮರಣಿಯವಾಗಿದೆ ಎಂದು ಸಹ ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿಗಳು ಹೇಳುತ್ತಾರೆ. ಈ ಊರಿನ ನೆನಪು ಸದಾ ಅವರ ಮನದಲ್ಲಿರಲಿ ಎಂದು ಬೆಳ್ಳಿ ರಥದಲ್ಲಿ ಹತ್ತಾರು ಕಲಾ ತಂಡಗಳ ಮೂಲಕ ಮೆರವಣಿಗೆ ಮಾಡಿ ಬಿಳ್ಕೋಡುಗೆ ನೀಡಿದ್ದಾರೆ.

ಬೆಂಗಳೂರು ಮೆಟ್ರೋಗೆ ಕಾಲಿಟ್ಟ ಒನ್‌ ನೇಷನ್‌ ಒನ್‌ ಕಾರ್ಡ್‌: ದೇಶದೆಲ್ಲೆಡೆ ಬಳಸಲು ಅನುಕೂಲ

ಊರಿನ ಜನರಿಂದಲೇ ದೊಡ್ಡ ಮಟ್ಟದ ಮೆರವಣಿಗೆ: ಶಿಕ್ಷಕರೆಂದ್ರೇ ಪಾಠ ಮಾಡೋದು ಬಿಟ್ಟು ರಾಜಕೀಯ ಮಾಡುತ್ತಾರೆನ್ನುವ ಅದೆಷ್ಟೋ ಶಿಕ್ಷಕರು ಇದ್ದಾರೆ. ಅಂಥದ್ದರ ಮಧ್ಯೆ ಮಾದರಿಯಾಗಿ ಕೆಲಸ ಮಾಡೋ ಮೂಲಕ ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಮನೆ ಮನದಲ್ಲಿ ನಿರಂತರವಾಗಿ ಉಳಿಯೋ ಕೆಲಸ ಮಾಡಿರೋ ಶಿಕ್ಷಕಿ ಜ್ಯೋತಿ ಅವರ ಕೆಲಸ  ಮಾತ್ರ ನಿಜಕ್ಕೂ ಶ್ಲಾಘನೀಯವಾಗಿದೆ. ಇನ್ನು ಪ್ರತಿವರ್ಷ ಶಿಕ್ಷಕರ ದಿನಾಚರಣೆಯನ್ನು ನಮ್ಮ ಮಾಜಿ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್‌ ಸ್ಮರಣಾರ್ಥ ಆಚರಿಸುತ್ತೇನೆ. ರಾಧಾಕೃಷ್ಣನ್‌ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದಾಗ ಅವರನ್ನೂ ಕೂಡ ಸ್ಥಳೀಯ ವಿದ್ಯಾರ್ಥಿಗಳು ಇದೇ ಮಾದರಿಯಲ್ಲಿ ಸಾರೋಟಿನಲ್ಲಿ ಮೆರವಣಿಗೆ ಮಾಡಿ ಕಳುಹಿಸಿಕೊಟ್ಟಿದ್ದರು. ಈಗ ಶಿಕ್ಷಕಿ ವರ್ಗಾವಣೆಯ ವೇಳೆಯೂ ಹೀಗೆ ಮೆರವಣಿಗೆ ಮಾಡಿ ಕಳುಹಿಸಿದ್ದು, ಮುನ್ನೆಲೆಗೆ ಬಂದಂತಿದೆ. 

click me!