ಶೈಕ್ಷಣಿಕವಾಗಿ ಹಾಗೂ ಆಯಾ ಕ್ಷೇತ್ರಗಳಲ್ಲಿನ ಯಶಸ್ಸಿಗೆ ವಿದ್ಯಾರ್ಥಿಗಳ ತಯಾರಿಸುವ ಆಚಾರ್ಯ

Published : May 31, 2025, 02:55 PM IST
Acharya

ಸಾರಾಂಶ

ಆಚಾರ್ಯ ಕಾಲೇಜು ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ, ಪೂರಕ ಪರಿಸರ ಒದಗಿಸುವ ಮೂಲಕ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಇಲ್ಲಿ ವಿದ್ಯಾರ್ಥಿಗಳ ಅಕಾಡೆಮಿಕ್ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಮಾನ ಮಹತ್ವ ನೀಡಲಾಗುತ್ತದೆ.

ಶೈಕ್ಷಣಿಕೆ ಮಟ್ಟದಲ್ಲಿ ಸರಿಯಾದ ಕಾಲೇಜು, ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ಎದುರಾಗುವ ಅತೀ ದೊಡ್ಡ ಸವಾಲು. ಕಾರಣ ಭಾರತದಲ್ಲಿ ಅತೀ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು ಲಭ್ಯವಿದೆ. ಇದರಲ್ಲಿ ಉತ್ತಮ ಕಾಲೇಜು ಆಯ್ಕೆ ಮಾಡುವುದು ಸುಲಭದ ಮಾತಲ್ಲ. ಈ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆಯಾಗಿ ಹಾಗೂ ಭರವಸೆಯ ಬೆಳಕಾಗಿ ಸಮಗ್ರ ಶಿಕ್ಷಣ ಸಂಸ್ಥೆಯಾಗಿ ಆಚಾರ್ಯ ಬೆಳೆದು ನಿಂತಿದೆ. ಆಚಾರ್ಯ ಕಾಲೇಜು ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ, ಪೂರಕ ಪರಿಸರ ಒದಗಿಸುವ ಮೂಲಕ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಇಲ್ಲಿ ವಿದ್ಯಾರ್ಥಿಗಳ ಅಕಾಡೆಮಿಕ್ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಮಾನ ಮಹತ್ವ ನೀಡಲಾಗುತ್ತದೆ. ಬೆಂಗಳೂರಿನ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿರುವ ಆಚಾರ್ಯ ಉನ್ನತ ಶಿಕ್ಷಣದ ಹೊಸ ಭಾಷ್ಯ ಬರೆದ ಶಿಕ್ಷಣ ಸಂಸ್ಥೆಯಾಗಿದೆ. ಕೇವಲ ಅಕಾಡೆಮಿಕ್ ಸಾಧನೆ ಮಾತ್ರವಲ್ಲದೇ, ಕೈಗಾರಿಕಾ ಅಗತ್ಯಗಳಿಗೆ ವಿದ್ಯಾರ್ಥಿಗಳನ್ನು ತಯಾರಿಸುವ ಕೋರ್ಸ್ಗಳನ್ನು ಬೋಧಿಸಲಾಗುತ್ತದೆ.

ವಿದ್ಯಾರ್ಥಿಗಳನ್ನು ಶೈಕ್ಷಣಿಕ ಹಾಗೂ ಕೈಗಾರಿಕಾ ಅಗತ್ಯತೆಗಳಿಗೆ ಸಜ್ಜುಗೊಳಿಸಲು ಹಲವು ವಿಶೇಷ ಹಾಗೂ ಹೊಸ ಕಲಿಕಾ ವಿಧಾನಗಳನ್ನು ಅನುಸರಿಸಲಾಗುತ್ತದೆ. ಪ್ರಾಯೋಗಿಕ ಕಲಿಕೆ, ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕೈಗಾರಿಕಾ ಆಧಾರಿತ ಪಠ್ಯಕ್ರಮ, ಪ್ರಾಯೋಗಿಕ ತರಬೇತಿ ಮತ್ತು ಇಂಟರ್ನ್ಶಿಪ್ಗಳು ಪ್ರಸ್ತುತ ಜಗತ್ತಿನ ಬೇಡಿಕೆಗೆ ತಕ್ಕಂತೆ ಇರಲಿದೆ. ಇದರಿಂದ ವೃತ್ತಿಪರತೆ ಹಾಗೂ ಶೈಕ್ಷಕಣಿಕೆ ಕಲಿಗೆ ನಡುವಿನ ಅಂತರವನ್ನು ಕಡಿಮೆ ಮಾಡುತ್ತವೆ.

1. ಮೌಲ್ಯವರ್ಧಿತ ಪ್ರಮಾಣಪತ್ರ ಕಾರ್ಯಕ್ರಮಗಳು

ಆಚಾರ್ಯ ಶಿಕ್ಷಣ ಸಂಸ್ಥೆ ಗೂಗಲ್, ಮೈಕ್ರೋಪಾಶ್ಟ್, ಐಬಿಎಂಪ, ಗ್ರ್ಯಾಂಡ್ ಥಾರ್ಟೊನ್, AWS, ಒರಾಕಲ್ ಮುಂತಾದ ಕೈಗಾರಿಕಾ ದಿಗ್ಗಜರ ಜೊತೆ ಸಹಕಾರದಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಮೌಲ್ಯವರ್ಧಿತ ಪ್ರಮಾಣಪತ್ರ ಕೋರ್ಸ್ಗಳನ್ನು ನೀಡಲಾಗುತ್ತದೆ. ಈ ಕೋರ್ಸ್ಗಳು ವಿದ್ಯಾರ್ಥಿಗಳ ಅಕಾಡೆಮಿಕ್ ಅಧ್ಯಯನಕ್ಕೆ ಜೊತೆಯಾಗುವಂತೆ ಪ್ರಾಯೋಗಿಕ ಕೌಶಲ್ಯ ಮತ್ತು ಮಾನ್ಯತೆಗಳನ್ನು ನೀಡುತ್ತವೆ. ಈ ಪ್ರಮಾಣಪತ್ರಗಳು ವಿದ್ಯಾರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಉಸ್ತುವಾರಿ ಪಡೆಯಲು ಸಹಾಯ ಮಾಡುತ್ತವೆ.

ಈ ಕೋರ್ಸ್ಗಳು ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳೊಂದಿಗೆ ಹೊಂದಾಣಿಕೆಯಾಗುವಂತೆ ರೂಪುಗೊಂಡಿದ್ದು, ಪ್ರೊಡಕ್ಟ್ ಲೈಫ್ ಸೈಕಲ್ ಮ್ಯಾನೇಜ್ಮೆಂಟ್( Product Life Cycle Management), ಸೈಬರ್ ಸೆಕ್ಯೂರಿಟಿ(Cyber Security), ಕ್ರೌಲ್ಡ್ ಹಾಗೂ ಫುಲ್ ಸ್ಟಾಕ್( Cloud & Full Stack), ಆರ್ಟಿಫೀಶಿಯಲ್ ಇಂಟಲಿಜೆನ್ಸ್ ( Artificial Intelligence),ಬ್ಯೂಸಿನೆಸ್ ಆನಾಲಿಸಿಸ್( Business Analytics) ಮುಂತಾದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ ನೀಡುವಲ್ಲಿ ನೆರವಾಗುತ್ತದೆ. ಇದರಿಂದ ವೃತ್ತಿಪರ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಆಕರ್ಷಕ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ.

2. ಔದ್ಯೋಗಿಕ ತರಬೇತಿ ಮತ್ತು ನೇಮಕಾತಿ

ಆಚಾರ್ಯ ಕಾಲೇಜು ತಂತ್ರಜ್ಞಾನ ದಿಗ್ಗಜರು ಹಾಗೂ ಪ್ರತಿಷ್ಠಿತ ಕಂಪನಿ ಜೊತೆಗಿನ ಬಲವಾದ ಸಹಕಾರದ ಫಲವಾಗಿ ವಿದ್ಯಾರ್ಥಿಗಳು ತಮ್ಮ ಆಯ್ಕೆ ಕ್ಷೇತ್ರಗಳಲ್ಲಿ ಉತ್ತಮ ವೇತನದ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಪ್ರತಿ ವರ್ಷ 550 ಕ್ಕೂ ಹೆಚ್ಚು ಕಂಪನಿಗಳು ಆಚಾರ್ಯ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುತ್ತಿದ್ದು, ಸಂಸ್ಥೆಯ ಪ್ಲೇಸ್ಮೆಂಟ್ ಸೆಲ್ ಅತ್ಯಂತ ಬಲಿಷ್ಠವಾಗಿದೆ. ಪ್ಲೇಸ್ಮೆಂಟ್ ಸಹಾಯ ಕಾರ್ಯಕ್ರಮದ ಮೂಲಕ ವೃತ್ತಿಪರ ಸಲಹೆ, ರೆಸ್ಯೂಮೆ ನಿರ್ಮಾಣ ಕಾರ್ಯಾಗಾರ, ಮಾಕ್ ಸಂದರ್ಶನಗಳು ಹಾಗೂ ಸಾಫ್ಟ್ ಸ್ಕಿಲ್ಸ್ ತರಬೇತಿ ನೀಡಲಾಗುತ್ತದೆ.

3. ತಂತ್ರಜ್ಞಾನ ಆಧಾರಿತ ಶಿಕ್ಷಣ

ಈ ದಿನಗಳಲ್ಲಿ ತಂತ್ರಜ್ಞಾನವು ಶಿಕ್ಷಣದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ವಿದ್ಯಾರ್ಥಿಗಳು ಹೇಗೆ ಕಲಿಯುತ್ತಾರೆ ಮತ್ತು ಶಿಕ್ಷಕರು ಹೇಗೆ ಬೋಧಿಸುತ್ತಾರೆ ಎಂಬುದರಲ್ಲಿ ದೊಡ್ಡ ಬದಲಾವಣೆ ತಂದಿದೆ. ಆಚಾರ್ಯ ಅವರು ವಿದ್ಯಾರ್ಥಿಗಳಿಗೆ ಅವರ ಕೋರ್ಸ್ಗೆ ಅನುಗುಣವಾಗಿ ಲ್ಯಾಪ್ಟಾಪ್ಗಳನ್ನು ನೀಡುತ್ತಿದ್ದು, ಇದರಲ್ಲಿ ಲೈಸೆನ್ಸ್ ಮಾಡಲಾದ ಸಾಫ್ಟ್ವೇರ್ ಮತ್ತು ವೇಗದ Wi-Fi ಲಭ್ಯವಿದೆ. ಈ ಮೂಲಕ ವಿದ್ಯಾರ್ಥಿಗಳು ಬಹುಬೇಗನೆ ವಿಷಗಳನ್ನು ಗ್ರಹಿಸಿಕೊಳ್ಳಲು ಹಾಗೂ ಮಾಹಿತಿ ಕಲೆಹಾಕಲು ಸಾಧ್ಯವಾಗುತ್ತದೆ. ಸಹಪಾಠಿಗಳೊಂದಿಗೆ ಸಹಕಾರದಿಂದ ಕಾರ್ಯನಿರ್ವಹಿಸುತ್ತಾರೆ ಹಾಗೂ ಆನ್ಲೈನ್ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

4. ಲಿಂಕ್ಡ್ಇನ್ ಲರ್ನಿಂಗ್

ಆಚಾರ್ಯ ಸಂಸ್ಥೆ ವಿದ್ಯಾರ್ಥಿಗಳಿಗೆ ಲಿಂಕ್ಡ್ಇನ್ ಲರ್ನಿಂಗ್( LinkedIn Learning) ಅನಿಯಮಿತ ಪ್ರವೇಶವನ್ನು ನೀಡುತ್ತದೆ. ಇದರಲ್ಲಿ ಅವರು ಆನ್ಲೈನ್ ಕೋರ್ಸ್ಗಳು, ಪ್ರಮಾಣಪತ್ರಗಳು ಮತ್ತು ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳಿಂದ ಕಲಿಕಾ ಸಂಪನ್ಮೂಲಗಳಿಂದ ಮಾಹಿತಿ ಪಡೆಯುತ್ತಾರೆ. ಬಿಸಿನೆಸ್, ತಂತ್ರಜ್ಞಾನ, ಮತ್ತು ಕ್ರಿಯೇಟಿವ್ ಸ್ಕಿಲ್ಸ್ನಿಂದ ಆರಂಭಿಸಿ ಹಲವಾರು ಕ್ಷೇತ್ರಗಳಲ್ಲಿ ತಜ್ಞರ ಮೂಲಕ ಬೋಧನೆ ನೀಡಲಾಗುತ್ತದೆ.

5. ಶೈಕ್ಷಣಿಕಕ್ಕಿಂತ ಮಿಗಿಲಾದ ಕಲಿಕೆ

ಆಚಾರ್ಯ ಕಾಲೇಜು 120 ಎಕರೆಗಳಲ್ಲಿ ಹರಡಿರುವ ಅತ್ಯಾಧುನಿಕ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪ್ರಯೋಗಾಲಯಗಳು, ಕ್ರೀಡಾ ಸೌಲಭ್ಯಗಳು ಮತ್ತು ಉತ್ಸಾಹಭರಿತ ವಿದ್ಯಾರ್ಥಿ ಸಮುದಾಯದ ಮೂಲಕ ಹೊಸದಾಗಿ ಕಲಿಯಲು ಸಾಕಷ್ಟು ಅವಕಾಶ ನೀಡುತ್ತದೆ. ಇಲ್ಲಿ 10,000 ಆಸನಗಳಿರುವ ಸ್ಟೇಡಿಯಂ, 20+ ಕ್ರೀಡೆಗಳ ಆಯ್ಕೆ, ಹಲವಾರು ವಿಶ್ವವಿದ್ಯಾನಿಲಯ ಮಟ್ಟದ ವಿಜೇತರು, 10+ ಕ್ಲಬ್ಗಳು ಸೇರಿದಂತೆ ಹಲವು ಸೌಲಭ್ಯ ಲಭ್ಯವಿದೆ. ಸಂಸ್ಥೆಯ NCC ಪಾತ್ರವು ಪ್ರಮುಖವಾಗಿದ್ದು, ಗಣರಾಜ್ಯೋತ್ಸವ ಪೆರೇಡ್ಗಳು ಮತ್ತು ಇತರ ಶಿಬಿರಗಳಲ್ಲಿ ಬಹುಮಾನ ಗಳಿಸಿರುವ ವಿದ್ಯಾರ್ಥಿಗಳನ್ನು ಒಳಗೊಂಡಿದೆ.

ಆಚಾರ್ಯ ಹಬ್ಬ( Acharya Habba) ಎಂಬ ಬೆಂಗಳೂರು ನಗರದ ಅತಿ ದೊಡ್ಡ ಅಂತರ ಕಾಲೇಜು ಉತ್ಸವ ಆಯೋಜನೆ ಮಾಡಲಾಗುತ್ತದೆ. 75+ ರಾಷ್ಟ್ರಗಳ 12,000+ ವಿದ್ಯಾರ್ಥಿಗಳೊಂದಿಗೆ 1000+ ತಜ್ಞ ಅಧ್ಯಾಪಕರು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಕೈಗಾರಿಕಾ ವಲಯ, ವೃತ್ತಿ ವಲಯದಲ್ಲಿನ ದಿಗ್ಗಜರು ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ಅನುಭವ ಹಾಗೂ ಕಲಿಕಾ ಪ್ರಪಂಚವನ್ನು ತೆರೆದಿಡುತ್ತಾರೆ.

6. ಮನೆಯಿಂದ ದೂರದಲ್ಲಿರುವ ಮನೆ

ಆಚಾರ್ಯ ಕಾಲೇಜಿನ ಹಾಸ್ಟೆಲ್ಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಆಧುನಿಕ ಅಡುಗೆ ಮನೆ, ಶುದ್ಧ ಕುಡಿಯುವ ನೀರು, ಬ್ಯಾಕ್ಅಪ್ ವಿದ್ಯುತ್, Wi-Fi, ಭದ್ರತೆ ಮತ್ತು ಆನ್ ಕ್ಯಾಂಪಸ್ ವೈದ್ಯಕೀಯ ಸಹಾಯವನ್ನು ಒದಗಿಸುತ್ತವೆ. ಇದು ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಮನೆಯನ್ನು ಹೋಲುವಂತಹ ಕಲಿಕಾ ಪರಿಸರವನ್ನು ಒದಗಿಸುತ್ತದೆ.

ಕೊನೆಯದಾಗಿ ಆಚಾರ್ಯ ಕೇವಲ ಒಂದು ಶಿಕ್ಷಣ ಸಂಸ್ಥೆಯಷ್ಟೇ ಅಲ್ಲ, ಅದು ವಿದ್ಯಾರ್ಥಿಗಳ ಶೈಕ್ಷಣಿಕ, ವೃತ್ತಿಪರ ಮತ್ತು ವೈಯಕ್ತಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಪೋಷಕ ವಾತಾವರಣವಾಗಿದೆ. ನಾವೀನ್ಯತೆಯ ಕಾರ್ಯಕ್ರಮಗಳು, ಕೈಗಾರಿಕಾ ಸಹಕಾರಗಳು ಮತ್ತು ವಿದ್ಯಾರ್ಥಿ ಕೇಂದ್ರಿತ ಉಪಕ್ರಮಗಳ ಮೂಲಕ, ಆಚಾರ್ಯ ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕರೆನಿಸಿಕೊಳ್ಳುವಂತೆ ತಯಾರಿಸುತ್ತಿದ್ದಾರೆ. ಶಿಕ್ಷಣ ಮತ್ತು ಕೈಗಾರಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ಆಚಾರ್ಯ ನಾಳೆಯ ನಾಯಕತ್ವವನ್ನು ರೂಪಿಸುತ್ತಿದೆ.

contact : +91 740-6644-449

ಅಡ್ಮಿಷನ್‌ ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ