AnantU Climate Technologies: ಅಹಮದಾಬಾದ್‌ನಲ್ಲಿನ ವಿವಿಯಿಂದ ಹವಾಮಾನ ಸಂಬಂಧ ಕೋರ್ಸ್!

Suvarna News   | Asianet News
Published : Mar 23, 2022, 06:12 PM IST
AnantU  Climate Technologies: ಅಹಮದಾಬಾದ್‌ನಲ್ಲಿನ ವಿವಿಯಿಂದ ಹವಾಮಾನ ಸಂಬಂಧ ಕೋರ್ಸ್!

ಸಾರಾಂಶ

*ಅಹಮದಾಬಾದ್‌ನ ಅನಂತ ವಿವಿಯಿಂದದ ಹವಾಮಾನಕ್ಕೆ ಸಂಬಂಧಿಸಿದ ಕೋರ್ಸ್ ಆರಂಭ *ಹವಾಮಾನ ಸಂಬಂಧ ಇದೇ ದೇಶದಲ್ಲಿ ಮೊದಲ ಕೋರ್ಸ್ ಎಂದು ವಿವಿ ಹೇಳಿಕೊಂಡಿದೆ.

ಕಾಲಕಾಲಕ್ಕೆ ತಕ್ಕಂತೆ ಹೊಸ ಬೆಳವಣಿಗೆ, ಹೊಸ ಉದ್ಯಮಗಳು ಉದ್ಭವಿಸುತ್ತವೆ. ದಶಕದ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ (Software Engineer)ಗೆ ಬಹಳ ಬೇಡಿಕೆಯಿತ್ತು. ಇದೀಗ ಬದಲಾದ ಕಾಲಕ್ಕೆ ತಕ್ಕಂತೆ, ಹವಾಮಾನ (Climate) ಅನ್ನೋದು ಒಂದು ದೊಡ್ಡ ವಿಷಯವಾಗಿ ಬದಲಾಗಿದೆ. ಹವಾಮಾನವೇ ಬಹುದೊಡ್ಡ ಅಧ್ಯಯನವಾಗಿ ಮಾರ್ಪಡುತ್ತಿದೆ. ಮುಂದಿನ ವರ್ಷಗಳಲ್ಲಿ ಈ ವಲಯದಲ್ಲೇ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ ಅಹಮದಾಬಾದ್‌ನ Anant ವಿವಿಯು, ಹವಾಮಾನ ಅಧ್ಯಯನವನ್ನು ಕೇಂದ್ರೀಕರಿಸುವ UG ಕೋರ್ಸ್ ಅನ್ನು ಪ್ರಾರಂಭಿಸಿದೆ. ಅಹಮದಾಬಾದ್‌ನ ಅನಂತ್ ನ್ಯಾಷನಲ್ ಯೂನಿವರ್ಸಿಟಿ (ANU) ಯು ಹವಾಮಾನ (Climate) ಕ್ರಿಯೆಯನ್ನು ಕೇಂದ್ರೀಕರಿಸುವ ಭಾರತದ ಮೊದಲ ಪದವಿ ಕೋರ್ಸ್ ಪ್ರಾರಂಭಿಸಿದೆ. ಇದು  ನಾಲ್ಕು ವರ್ಷಗಳ ಕೋರ್ಸ್ ಆಗಿದೆ. ಈ ಖಾಸಗಿ ವಿಶ್ವವಿದ್ಯಾನಿಲಯವು ಹವಾಮಾನ ತಂತ್ರಜ್ಞಾನಗಳಲ್ಲಿ ಇದು ಸೂಪರ್-ಸ್ಪೆಷಲೈಸೇಶನ್ ಎಂದು ಹೇಳಿಕೊಂಡಿದೆ.

ಪ್ರಸ್ತುತ IISc ಬೆಂಗಳೂರು ಹವಾಮಾನ ವಿಜ್ಞಾನದಲ್ಲಿ MTech ಮತ್ತು PhD ಕಾರ್ಯಕ್ರಮಗಳನ್ನು ನೀಡುತ್ತಿದೆ.  ನವದೆಹಲಿಯ TERI, ಹವಾಮಾನ ವಿಜ್ಞಾನ ಮತ್ತು ನೀತಿಯಲ್ಲಿ ಸ್ನಾತಕೋತ್ತರ ಪದವಿಯನ್ನು ನೀಡುತ್ತಿದೆ. ಹಾಗೆಯೇ, IIT ಮುಂಬೈ ಡಾಕ್ಟರೇಟ್ ಮಟ್ಟದಲ್ಲಿ ಮಾತ್ರ ಹವಾಮಾನ ಅಧ್ಯಯನದಲ್ಲಿ ಅಂತರಶಿಸ್ತೀಯ ಕಾರ್ಯಕ್ರಮವನ್ನು ನಡೆಸುತ್ತಿದೆ. IIT ಹೈದರಾಬಾದ್,  ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕೆಲವು ಕೋರ್ಸ್‌ಗಳನ್ನು ನೀಡುತ್ತಿದೆ. ಆದ್ರೆ ANU ಮಾತ್ರ ದೇಶದಲ್ಲೇ ಹವಾಮಾನ ವಿಷಯ ಕುರಿತು ಮೊದಲ ಬಾರಿಗೆ ಪದವಿ ಕೋರ್ಸ್ ಪ್ರಾರಂಭಿಸಿದೆ.

ಪಠ್ಯದಲ್ಲಿ Bhagavad Gita ಅಳವಡಿಸಲು ಸಮಿತಿ ರಚನೆ

ಹವಾಮಾನ ಬದಲಾವಣೆಗೆ ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ರಚಿಸಲು ಮಹತ್ವಾಕಾಂಕ್ಷಿ ಎಂಜಿನಿಯರ್‌ಗಳಿಗೆ ವಿನ್ಯಾಸ ಚಿಂತನೆಯ ತತ್ವಗಳ ಬಳಕೆಯನ್ನು ANU ಕಲಿಸಿಕೊಡಲಿದೆ. ಆನ್-ಕ್ಯಾಂಪಸ್ ಹವಾಮಾನ ಪ್ರಯೋಗಾಲಯವು ಹವಾಮಾನ ಸಿಮ್ಯುಲೇಶನ್‌ಗಳನ್ನು ಚಲಾಯಿಸಲು ಇತ್ತೀಚಿನ ಸಾಫ್ಟ್‌ವೇರ್‌ನೊಂದಿಗೆ ಸಿದ್ಧಗೊಂಡಿದೆ. ಹವಾಮಾನ ಮಾಪನಗಳು, ಸೌರ ವಿಕಿರಣಗಳು, ಪಿವಿ ವ್ಯವಸ್ಥೆಗಳ ಅನುಕರಣೆ, ಪರೀಕ್ಷೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಸ್ಥಾಪನೆಗೆ ವಿವಿಧ ಉಪಕರಣಗಳು ಮತ್ತು ತಾಂತ್ರಿಕ ಉಪಕರಣಗಳ ಬಳಕೆ ಮಾಡಲಾಗುತ್ತದೆ. ಹವಾಮಾನದ ಪ್ರಭಾವವನ್ನು ತಗ್ಗಿಸಲು ಅಗತ್ಯವಿರುವ ಕೈಗಾರಿಕೆಗಳಲ್ಲಿನ ಸ್ಥಾನಗಳಿಗೆ ಮತ್ತು ಹವಾಮಾನ ಮಾಡೆಲಿಂಗ್, ಸಮೀಪ-ಅವಧಿಯ ಹವಾಮಾನ ವಿಶ್ಲೇಷಣೆ ಮತ್ತು ಮುನ್ಸೂಚನೆಗಳು, ನೀತಿಯನ್ನು ಮಾಡಲು ಸೇವೆ ಸಲ್ಲಿಸುವ ಸರ್ಕಾರಿ ಏಜೆನ್ಸಿಗಳಲ್ಲಿನ ಸ್ಥಾನಗಳು ಮತ್ತು ಹವಾಮಾನ ಸಂಶೋಧನೆ ನಡೆಸುವ ಸ್ವತಂತ್ರ ಪ್ರಯೋಗಾಲಯಗಳಲ್ಲಿ ಸ್ಥಾನಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಗುರಿಯನ್ನು ಈ ಪದವಿ ಹೊಂದಿದೆ. 

ಪ್ರಸ್ತುತ ಜಾಗತಿಕವಾಗಿ ಹವಾಮಾನ ಉದ್ಯಮದಲ್ಲಿ ಅಪಾರ ಪ್ರಮಾಣದ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ. ಆದ್ರೆ ತಾಂತ್ರಿಕವಾಗಿ ಉದ್ಯಮದಲ್ಲಿ ನುರಿತ ಜನರ ಕೊರತೆಯಿದೆ.   2030 ರ ವೇಳೆಗೆ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹವಾಮಾನ-ಸ್ಥಿತಿಸ್ಥಾಪಕ ಮೂಲಸೌಕರ್ಯದಲ್ಲಿ $2.5 ಟ್ರಿಲಿಯನ್ ಅವಕಾಶಗಳನ್ನ ನಿರೀಕ್ಷಿಸಲಾಗಿದೆ ಎಂದು ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಅಂದಾಜಿಸಿದೆ.

ಪ್ರತಿ ಸೆಮಿಸ್ಟರ್ (ಒಟ್ಟು 6) ಹವಾಮಾನ ಸಿಮ್ಯುಲೇಶನ್, ಎಂಜಿನಿಯರಿಂಗ್ ಗಣಿತ, ಪರಿಸರ ಎಂಜಿನಿಯರಿಂಗ್, ಹವಾಮಾನ ರಸಾಯನಶಾಸ್ತ್ರ, ಶಕ್ತಿ ಮತ್ತು ತಂತ್ರಜ್ಞಾನ, ವಿನ್ಯಾಸ ಚಿಂತನೆ, ತಂತ್ರಜ್ಞಾನ ಮತ್ತು ಸಮಾಜ - ಹಾಗೆಯೇ ಕ್ಲೈಮೇಟ್ ಲ್ಯಾಬ್‌ನಲ್ಲಿ ಅನ್ವಯಿಕ ಸಂಶೋಧನಾ ಯೋಜನೆಗಳು ಮತ್ತು ಹವಾಮಾನ ತಂತ್ರಜ್ಞಾನದ ಸ್ಟ್ರೀಮ್‌ಗಳಲ್ಲಿ ಹೆಚ್ಚುತ್ತಿರುವ ಹಂತವನ್ನು ಒದಗಿಸುವ ರೀತಿಯಲ್ಲಿ ಪದವಿ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ANU ಹೇಳುತ್ತದೆ. 

NCEE survey: ಲಾಕ್‌ಡೌನ್‌ ನಂತರ ಮೂಲಭೂತ ಕೌಶಲ್ಯ ಕಳೆದುಕೊಂಡ ಮಕ್ಕಳು!

ಅಂತಿಮ 2 ಸೆಮಿಸ್ಟರ್‌ಗಳು ವಿಶೇಷತೆ ಮತ್ತು ಪೂರ್ಣ ಉದ್ಯಮ ಇಮ್ಮರ್ಶನ್‌ನ ಮೇಲೆ ಕೇಂದ್ರೀಕರಿಸಲಾಗುತ್ತದೆ. ಅಂದರೆ ವಿದ್ಯಾರ್ಥಿಗಳನ್ನು ಹವಾಮಾನ ಉದ್ಯಮದಲ್ಲಿ ತೊಡಗಲು ಅನುಕೂಲವಾಗುವಂತೆ ಶೈಕ್ಷಣಿಕ ಮಾರ್ಗದರ್ಶಿ ಮತ್ತು ಉದ್ಯಮ ಪರಿಣಿತರು ಸಹ ಮಾರ್ಗದರ್ಶನ ಮಾಡುತ್ತಾರೆ. ವಾಣಿಜ್ಯೋದ್ಯಮ ಉದ್ಯಮಗಳನ್ನು ಪ್ರೋತ್ಸಾಹಿಸಲು ANU ತನ್ನದೇ ಆದ ಆರಂಭ್ ಎಂಬ ಇನ್ಕ್ಯುಬೇಶನ್ ಕೇಂದ್ರವನ್ನು ಹೊಂದಿದೆ . ANU ಪ್ರತಿ ವರ್ಷ 20 ಸೀಟುಗಳಿಗಾಗಿ 50 ದೇಶಗಳಿಂದ 5,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸುತ್ತದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ