ಶಾಲೆ ಬಿಟ್ಟಿದ್ದ ಬಾಲಕ; ಜಿಲ್ಲಾಧಿಕಾರಿ ವಿಶೇಷ ಕಾಳಜಿಯಿಂದ ಮತ್ತೆ ಶಾಲೆಗೆ!

By Kannadaprabha News  |  First Published Sep 20, 2022, 12:03 PM IST

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಹೂಡಿದ್ದ ಗ್ರಾಮದಲ್ಲಿ ವರ್ಗಾವಣೆ ಪತ್ರ ಸಿಗದೇ ಶಾಲೆಯಿಂದ ಹೊರಗುಳಿದಿದ್ದ ಬಾಲಕನ್ನನ್ನು ಮರಳಿ ಶಾಲೆಗೆ ಸೇರಿಸಿರುವ ಪ್ರಸಂಗ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಪಂ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.


ಚಿಕ್ಕಬಳ್ಳಾಪುರ (ಸೆ.20) : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಹೂಡಿದ್ದ ಗ್ರಾಮದಲ್ಲಿ ವರ್ಗಾವಣೆ ಪತ್ರ ಸಿಗದೇ ಶಾಲೆಯಿಂದ ಹೊರಗುಳಿದಿದ್ದ ಬಾಲಕನ್ನನ್ನು ಮರಳಿ ಶಾಲೆಗೆ ಸೇರಿಸಿರುವ ಪ್ರಸಂಗ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಪಂ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.

ಗ್ರಾಮ ವಾಸ್ತವ್ಯ: ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು; ಡಾ.ಬಿ.ಸಿ.ಸತೀಶ

Tap to resize

Latest Videos

ಕೋವಿಡ್ ಸಂಕಷ್ಟದ ಸಮಯದಲ್ಲಿ ಶಾಲೆ ಬಿಟ್ಟವಿದ್ಯಾರ್ಥಿ ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ವಿಶೇಷ ಕಾಳಜಿಯಿಂದ ಮರಳಿ ಶಾಲೆಗೆ ತೆರಳಲು ವ್ಯವಸ್ಥೆ ಮಾಡಿದ್ದು ಸೋಮವಾರ ಎಲ್ಲೋಡು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಗೆ ಬಾಲಕನ್ನು ದಾಖಲಿಸಿ ಹೂಗುಚ್ಛ ನೀಡಿ ಹೂವಿನ ಸುರಿಮಳೆಯೊಂದಿಗೆ ವಿದ್ಯಾರ್ಥಿಗೆ ಸ್ವಾಗತ ಕೋರಿದರು.

ಆಗಿದ್ದೇನು?:

ಚೌಟಕುಂಟಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ಡೀಸಿ ಎನ್‌.ಎಂ.ನಾಗರಾಜ್‌, ಗ್ರಾಮವಾಸಿಗಳ ಅಹವಾಲನ್ನು ಆಲಿಸಲು ಗ್ರಾಪಂ ವ್ಯಾಪ್ತಿಯ ಅಂಬಾಪುರ ಗ್ರಾಮಕ್ಕೆ ಸಂಜೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಅವಲೋಕಿಸಿದಾಗ ಮಕ್ಕಳ ಗುಂಪಿನಲ್ಲಿದ್ದ ಒಬ್ಬ ಬಾಲಕನನ್ನು ಜಿಲ್ಲಾಧಿಕಾರಿಗಳು ಗಮನಿಸಿ ನೀನು ಯಾವ ತರಗತಿ ಓದುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಪವನ್‌ ಕುಮಾರ್‌ ಎಂಬಾತ ನಾನು ಶಾಲೆಗೆ ಹೋಗುತ್ತಿಲ್ಲಾ, ನನ್ನ ವರ್ಗಾವಣೆ ಪತ್ರ ಬಂದ ಮೇಲೆ ಶಾಲೆಗೆ ಹೋಗುತ್ತೇನೆ. ಈ ಹಿಂದೆ ನಾನು ಬೆಂಗಳೂರಿನ ನಗರದ ಹುಣಸಮಾರನಹಳ್ಳಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೆ. ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ನಾನು ನಮ್ಮ ಊರಿಗೆ ಬಂದೆ. ವರ್ಗಾವಣೆ ಪತ್ರ ಇಲ್ಲದ ಕಾರಣ ಶಾಲೆಗೆ ಹೋಗುತ್ತಿಲ್ಲ ಎಂದಿದ್ದಾನೆ.

ಬಾಲಕನನ್ನು ಶಾಲೆಗೆ ಸೇರಿಸಲು ಸೂಚನೆ: ಕೂಡಲೇ ಜಿಲ್ಲಾಧಿಕಾರಿ ಅವರು ಕಂದಾಯ ಮತ್ತು ಶಿಕ್ಷಣ ಇಲಾಖೆಯ ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿ ಈ ಬಾಲಕನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಆತನಿಗೆ ಬೇಕಾದ ಅಗತ್ಯ ಪಠ್ಯ ಪುಸ್ತಕಗಳು, ಲೇಖನ ಸಾಮಾಗ್ರಿಗಳನ್ನು ಒದಗಿಸಿ ಷರತ್ತು ರಹಿತವಾಗಿ ಶಾಲೆಗೆ ಸೇರಿಸಲು ಕ್ರಮವಹಿಸಬೇಕೆಂದು ಆದೇಶಿಸಿದರು. ಡೀಸಿ ಆದೇಶದಂತೆ ಕಂದಾಯ ನಿರೀಕ್ಷಕ ಆದಿನಾರಾಯಣಪ್ಪ, ಸ್ಥಳೀಯ ಶಾಲಾ ಮುಖೋಪಾಧ್ಯಾಯ ಸಪ್ತಗಿರಿ ಅವರ ಸಹಕಾರದೊಂದಿಗೆ ಸೋಮವಾರ ಎಲ್ಲೋಡು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಗೆ ಬಾಲಕನ್ನು ದಾಖಲಿಸಿದರು.

ಶಾಲೆ ಸೇರದ ಮಕ್ಕಳ ಬಗ್ಗೆ ವರದಿಗೆ ಹೈಕೋರ್ಟ್‌ನಿಂದ 2 ವಾರ ಗಡುವು

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಮುನೇಗೌಡ, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ, ಗ್ರಾಮ ಲೆಕ್ಕಿಗ ಮುನಿರಾಜು, ಶಾಲಾ ಮುಖ್ಯೋಪಾಧ್ಯಾಯ ಸಪ್ತಗಿರಿ, ಎಸ್‌.ಡಿ.ಎಂ.ಸಿ ಅಧ್ಯಕ್ಷ ನಾರಾಯಣ ಸ್ವಾಮಿ, ಸದಸ್ಯರಾದ ಮುತ್ಯಾಲಪ್ಪ, ಶಾಲಾ ಶಿಕ್ಷಕರಾದ ನರಸಿಂಹಮೂರ್ತಿ, ನರಸಿಂಹಪ್ಪ ಮತ್ತಿತರರು ಹಾಜರಿದ್ದರು.

click me!