Karnataka 2nd PU Practical Exams 2022: ಹಿಜಾಬ್‌ ಮಧ್ಯೆ ದ್ವಿತೀಯ PU ಪ್ರಾಯೋಗಿಕ ಪರೀಕ್ಷೆ, ವಿದ್ಯಾರ್ಥಿನಿಯರಿಗೆ ಬಿಗ್‌ಶಾಕ್

By Suvarna News  |  First Published Feb 20, 2022, 5:37 PM IST

2021-22 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಫೆ.21ರಿಂದ ಆರಂಭವಾಗಲಿದ್ದು, ಹಿಜಾಬ್ ಸಂಘರ್ಷದಿಂದ ಕಾಲೇಜಿಗೆ ಹಾಜರಾಗದೇ ದೂರು ಉಳಿದಿರುವ ವಿದ್ಯಾರ್ಥಿನಿಯರಿಗೆ ಬಿಗ್ ಶಾಕ್ ಕಾದಿದೆ. 


ಬೆಂಗಳೂರು(ಫೆ.21): 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ (Practical exam) ಫೆ.21ರಿಂದ ಆರಂಭವಾಗಲಿದ್ದು, ಹಿಜಾಬ್ ಸಂಘರ್ಷದಿಂದ ಕಾಲೇಜಿಗೆ ಹಾಜರಾಗದೇ ದೂರು ಉಳಿದಿರುವ ವಿದ್ಯಾರ್ಥಿನಿಯರಿಗೆ ಬಿಗ್ ಶಾಕ್ ಕಾದಿದೆ. 

ಹಿಜಾಬ್ ಸಂಘರ್ಷದ ನಡುವೆ ರಾಜ್ಯಾದ್ಯಂತ ಸೋಮವಾರದಿಂದ ಪಿಯು ಪ್ರಯೋಗಿಕ ಪರೀಕ್ಷೆಗಳು (Practical exam) ಆರಂಭವಾಗಿದೆ. ಈಗಾಗಲೇ  ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಾಕ್ಟಿಕಲ್ ಪರೀಕ್ಷೆಗೆ ವೇಳಾಪಟ್ಟಿ ನೀಡಿದೆ. ಒಂದೊಮ್ಮೆ ಹಿಜಾಬ್ ಸಂಘರ್ಷದ ಕೋರ್ಟ್ ಆದೇಶದವರೆಗೂ ತರಗತಿಗೆ ಬರುವುದಿಲ್ಲ. ಪರೀಕ್ಷೆ ಹಾಜರಾಗೋದಿಲ್ಲ ಅನ್ನೋವರಿಗೆ ಬಿಗ್ ಶಾಕ್ ಕಾದಿದೆ.

Tap to resize

Latest Videos

ಹಿಜಾಬ್ ಸಂಘರ್ಷದ ನೆಪ ಹೇಳಿ ಪರೀಕ್ಷೆ ಬರೆಯದೆ ಹೋದರೆ ಮತ್ತೆ ಪ್ರಾಕ್ಟಿಕಲ್ ಪರೀಕ್ಷೆ ಬರೆಯಲು ಅವಕಾಶ ಸಿಗುವುದಿಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಗೆ ಗೈರು ಹಾಜರಾದರೆ ಮತ್ತೊಂದು ಅವಕಾಶ ಸಿಗುವುದಿಲ್ಲ.

ಹೀಗಾಗಿ ಹಿಜಾಬ್ ವಿವಾದದ ನೆಪ ಹೇಳಿ  ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಬರೆಯದಿದ್ದರೆ, ದೂರ ಉಳಿದ ವಿದ್ಯಾರ್ಥಿನಿಯರಿಗೆ ಸಂಕಷ್ಟ ತಪ್ಪಿದ್ದಲ್ಲ. ಪ್ರಾಯೋಗಿಕ ಪರೀಕ್ಷೆ ಮುಗಿಸಲು ಮಾರ್ಚ್ 25ರವರೆಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅವಕಾಶ ನೀಡಿದೆ.

ARMY HPCL KASHMIR SUPER 50: ಕಾಶ್ಮೀರ್ ಮಕ್ಕಳ ವೈದ್ಯ ಶಿಕ್ಷಣಕ್ಕೆ ಸೇನೆ ನೆರವು

 ಗಮನಿಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ: ಎಪ್ರಿಲ್/ಮೇ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿಯುಸಿ  (2nd PUC)  ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ  (Karnataka PU Board)  ಪರಿಷ್ಕರಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ. ಪರೀಕ್ಷೆ ಎಂದಿನಂತೆ ಏ.16ರಿಂದ ಮೇ.6ರವರೆಗೆ ನಡೆಯಲಿದೆ. ಏ.21ರಂದು ನಡೆಯಬೇಕಿದ್ದ ಭಾಷಾ ವಿಷಯಗಳಲ್ಲಿ ಉರ್ದು ಮತ್ತು ಅರೇಬಿಕ್ ವಿಷಯಗಳನ್ನು ಪ್ರತ್ಯೇಕಿಸಿ ಪರೀಕ್ಷೆ ನಡೆಸಲಾಗುತ್ತಿದೆ. 

ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವೇಳಾಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://pue.kar.nic.in/ ನಲ್ಲಿ ಚೆಕ್‌ ಮಾಡಬಹುದು. ಇದರ ಪ್ರಕಾರವಾಗಿ ಏ.21ರಂದು ಉರ್ದು ಪರೀಕ್ಷೆ ಎಂದಿಂತೆ ನಡೆಯಲಿದ್ದು, ಈ ಮೊದಲು ರಜೆ ಅವಧಿಯಾಗಿದ್ದ ಏ.29ಕ್ಕೆ ಅರೆಬಿಕ್ ಪರೀಕ್ಷೆ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. 

IGM RECRUITMENT 2022: 10ನೇ ತರಗತಿಯಾದವರಿಗೆ ಬಂಗಾರದಂತಹ ಉದ್ಯೋಗವಕಾಶ!

ಹೊಸ ವೇಳಾಪಟ್ಟಿ ವಿವರ ಇಂತಿದೆ...

  • ಏಪ್ರಿಲ್ 16: ಗಣಿತ, ಶಿಕ್ಷಣ, ಬೇಸಿಕ್ ಗಣಿತ
  • ಏಪ್ರಿಲ್ 18: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
  • ಏಪ್ರಿಲ್ 19: ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್
  • ಏಪ್ರಿಲ್ 20: ಇತಿಹಾಸ, ಭೌತಶಾಸ್ತ್ರ
  • ಏಪ್ರಿಲ್ 21: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • ಏಪ್ರಿಲ್ 22: ಲಾಜಿಕ್, ಬಿಸಿನೆಸ್ ಸ್ಟಡೀಸ್
  • ಏಪ್ರಿಲ್ 23: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ
  • ಏಪ್ರಿಲ್ 25: ಅರ್ಥಶಾಸ್ತ್ರ
  • ಏಪ್ರಿಲ್ 26: ಹಿಂದಿ
  • ಏಪ್ರಿಲ್ 28: ಕನ್ನಡ
  • ಏಪ್ರಿಲ್ 29: ಅರೇಬಿಕ್
  • ಏಪ್ರಿಲ್ 30: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
  • ಮೇ 2: ಭೂಗೋಳ, ಜೀವಶಾಸ್ತ್ರ
  • ಮೇ 4: ಇಂಗ್ಲಿಷ್
  • ಮೇ 6: ಲೆಕ್ಕ ಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ, ಕನ್ನಡ (ಐಚ್ಛಿಕ)

ಈ ಬಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯೇ (PU Board) ಸಿದ್ಧಪಡಿಸಿ ನೀಡಿದ್ದ ಮಧ್ಯವಾರ್ಪಿಕ ಪ್ರಶ್ನೆ ಪತ್ರಿಕೆಗಳಲ್ಲಿ ಲೋಪಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದಲೇ ಆರೋಪಗಳು ಕೇಳಿಬರುತ್ತಿವೆ. ಲೆಕ್ಕಶಾಸ್ತ್ರ, ಇಂಗ್ಲಿಷ್‌ (english) , ಗಣಿತ, ರಸಾಯನಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿ ಈ ರೀತಿಯ ಹಲವು ಲೋಪಗಳು ಕಂಡು ಬಂದಿದ್ದವು.

click me!