ಗದಗ: ಪಿಯು ಪರೀಕ್ಷೆಗೆ ಪ್ರಯಾಣಿಸಬೇಕಿದೆ 40 ಕಿಮೀ ದೂರ!

By Kannadaprabha News  |  First Published Mar 9, 2023, 10:58 AM IST

 ಹೊಳೆಆಲೂರು ಹೋಬಳಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ಪಿಯು ಪರೀಕ್ಷೆ ಬರೆಯಲು 40 ಕಿಮೀ ಸಂಚಾರ ಮಾಡಬೇಕಿದ್ದು, ಬೆಳಗ್ಗೆ 10.30ಕ್ಕೆ ಪರೀಕ್ಷೆ ಕೇಂದ್ರ ತಲುಪುವುದೇ ಹರಸಾಹಸದ ಕೆಲಸವಾಗಿದೆ. ಹೋಬಳಿ ವ್ಯಾಪ್ತಿಯ 16ಕ್ಕೂ ಹೆಚ್ಚು ಗ್ರಾಮಗಳಿಗೆ ಸರಿಯಾದ ಬಸ್‌ ಸೌಲಭ್ಯವಿಲ್ಲ. ಈ ಎಲ್ಲ ವಿದ್ಯಾರ್ಥಿಗಳು ರೋಣ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆಯಬೇಕಾಗಿದೆ.


ಸಂಜೀವಕುಮಾರ ಹಿರೇಮಠ

 ಹೊಳೆಆಲೂರ (ಮಾ.9) : ಹೊಳೆಆಲೂರು ಹೋಬಳಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ಪಿಯು ಪರೀಕ್ಷೆ ಬರೆಯಲು 40 ಕಿಮೀ ಸಂಚಾರ ಮಾಡಬೇಕಿದ್ದು, ಬೆಳಗ್ಗೆ 10.30ಕ್ಕೆ ಪರೀಕ್ಷೆ ಕೇಂದ್ರ ತಲುಪುವುದೇ ಹರಸಾಹಸದ ಕೆಲಸವಾಗಿದೆ. ಹೋಬಳಿ ವ್ಯಾಪ್ತಿಯ 16ಕ್ಕೂ ಹೆಚ್ಚು ಗ್ರಾಮಗಳಿಗೆ ಸರಿಯಾದ ಬಸ್‌ ಸೌಲಭ್ಯವಿಲ್ಲ. ಈ ಎಲ್ಲ ವಿದ್ಯಾರ್ಥಿಗಳು ರೋಣ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆಯಬೇಕಾಗಿದೆ.

Tap to resize

Latest Videos

undefined

2016ರ ವರೆಗೂ ಹೊಳೆಆಲೂರಿನ ಶ್ರೀ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರವಿತ್ತು. ಇದು ಈ ವ್ಯಾಪ್ತಿಯ ದೊಡ್ಡ ಪರೀಕ್ಷಾ ಕೇಂದ್ರವಾಗಿತ್ತು. ಕಲ್ಮೇಶ್ವರ ಕಾಲೇಜು ವಿದ್ಯಾರ್ಥಿಗಳ ಜತೆಗೆ ಯಚ್ಚರೇಶ್ವರ ಕಾಲೇಜು, ಮೆಣಸಗಿ ಲಿಂಗಬಸವೇಶ್ವರ, ಸರ್ವೋದಯ ಕೊನ್ನೂರ, ಕೆಎಸ್‌ಎಸ್‌ ಶಿರೋಳ ಕಾಲೇಜುಗಳ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದರು. 2017ರಲ್ಲಿ ಯಾವುದೋ ನೆಪ ಒಡ್ಡಿ ಪರೀಕ್ಷಾ ಕೇಂದ್ರ ಸ್ಥಳಾಂತರಿಸಲಾಯಿತು. ಅದು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಈಡುಮಾಡಿದೆ.

'ಕಾಂಗ್ರೆಸ್‌ ಗ್ಯಾರಂಟಿ' ಮತ್ತೆ ಮುಳುಗುವುದು ಖಚಿತ: ಸಚಿವ ಸಿ.ಸಿ.ಪಾಟೀಲ್‌

ತಾಲೂಕಿನ ವಿದ್ಯಾರ್ಥಿಗಳು ತಾಲೂಕು ಮಟ್ಟದಲ್ಲೇ ಪರೀಕ್ಷೆ ಬರೆಯಬೇಕು ಎಂದು ಹೇಳುತ್ತಿರುವ ಶಿಕ್ಷಣ ಇಲಾಖೆ, ಇಲ್ಲಿ ಮಾತ್ರ ಆ ನಿಯಮ ಅನುಸರಿಸುತ್ತಿಲ್ಲ. ತಾಲೂಕಿಗೆ 12 ಕಿ.ಮೀ. ದೂರವಿರುವ ನರೇಗಲ್‌ ಹೋಬಳಿಯ ಕಾಲೇಜುಗಳ ವಿದ್ಯಾರ್ಥಿಗಳು ಅಲ್ಲಿಯೇ ಪರೀಕ್ಷೆ ಬರೆಯುತ್ತಾರೆ. ಆದರೆ ಹೊಳೆಆಲೂರು ವಿದ್ಯಾರ್ಥಿಗಳು ಮಾತ್ರ ರೋಣಕ್ಕೆ ಹೋಗಬೇಕಿದೆ.

ರೋಣದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ ಇಲ್ಲ. ಇಲ್ಲಿಯ ಕಲ್ಮೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಯಚ್ಚರೇಶ್ವರ ಪದವಿ ಪೂರ್ವ ಕಾಲೇಜಿನ ಡೆಸ್‌್ಕನ್ನು ಅಲ್ಲಿಗೆ ಕಳುಹಿಸಲಾಗಿದೆ.

ಕಾಲೇಜಿಗೆ ಹೋಗಲೂ ಸಹ ಬಸ್‌ ಸೌಲಭ್ಯವಿಲ್ಲ

ಇಲ್ಲಿಗೆ ಸಮೀಪದ ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್‌. ಬೇಲೇರಿ, ಕುರವಿನಕೊಪ್ಪ ಗ್ರಾಮಗಳಿಂದ ನಿತ್ಯ ವಿದ್ಯಾರ್ಥಿಗಳು ನಡೆದುಕೊಂಡು ತಮ್ಮ ಹತ್ತಿರದ ಕಾಲೇಜುಗಳಿಗೆ ಬರುತ್ತಿದ್ದಾರೆ. ಹೊಳೆಮಣ್ಣೂರ, ಗಾಡಗೊಳಿ, ಮೆಣಸಗಿ ಸೇರಿದಂತೆ ಕೆಲವು ಗ್ರಾಮಗಳಿಗೆ ಸಂಚಾರ ಮಾಡುವುದು ಒಂದೇ ಬಸ್‌. ಇವೆಲ್ಲ ಬಹುತೇಕ ನೆರೆ ಸಂತ್ರಸ್ತ ಗ್ರಾಮಗಳು. ಇಲ್ಲಿಯ ವಿದ್ಯಾರ್ಥಿಗಳು ನಿತ್ಯ ಕಾಲೇಜಿಗೆ ಬಂದುಹೋಗುವುದು ಕಷ್ಟದ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ರೋಣ ಪರೀಕ್ಷೆ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತಲುಪುದು ಕಷ್ಟ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಒತ್ತಡಕ್ಕಿಂತ ಹೋಗಿಬರುವ ಒತ್ತಡದಲ್ಲೇ ಹೈರಾಣಾಗುತ್ತಿದ್ದಾರೆ.

ಹೊಳೆಆಲೂರಿನಲ್ಲೇ ಪರೀಕ್ಷಾ ಕೇಂದ್ರ ತೆರೆಯಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಪರೀಕ್ಷೆ ಕೇಂದ್ರ ಸ್ಥಳಾಂತರಕ್ಕೆ ಕಾರಣ...

ಮೊದಲು ಪಿಯು ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ತಾಲೂಕು ಖಜಾನೆಯಲ್ಲಿ ಇರುತ್ತಿದ್ದವು. ಈಗ ಆ ನಿಯಮ ಬದಲಿಸಲಾಗಿದೆ. ಈಗ ಪ್ರಶ್ನೆಪತ್ರಿಕೆಗಳು ಜಿಲ್ಲಾ ಖಜಾನೆಯಿಂದಲೇ ಬರಬೇಕಿದೆ. ಜಿಲ್ಲಾ ಖಜಾನೆಯಿಂದ ಹೋಬಳಿಗೆ ತರಲು ದೂರವಾಗುತ್ತದೆ ಎನ್ನುವ ನೆಪ ಒಡ್ಡಿ ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷಾ ಕೇಂದ್ರವನ್ನೇ ಸ್ಥಳಾಂತರಿಸಿದ್ದಾರೆ ಎಂದು ಕೆಲವು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೀಪ್ ರೇಟ್ ಅಂತಾ ಬಿಲ್‌ ಇಲ್ಲದ ಕಳ್ಳತನದ ಮೊಬೈಲ್ ಬಳಸೋದು ಇನ್ಮುಂದೆ ಕಷ್ಟ!

ನಾನು ಈಗ ಬಂದು ಒಂದೂವರೆ ತಿಂಗಳು ಆಯಿತು. ನನಗೆ ಅಲ್ಲಿಯ ಸಮಸ್ಯೆಗಳು ಗೊತ್ತಿರಲಿಲ್ಲ. ನಾವು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲೆಂದೇ ಇರುವುದು. ಮುಂದಿನ ಪರೀಕ್ಷೆ ಅಲ್ಲಿಯೇ ನಡೆಸಲು ಕ್ರಮ ಕೈಗೊಳ್ಳುತ್ತೇವೆ.

ಕರಿಬಸಪ್ಪ ಎಸ್‌.ಜಿ. ಉಪನಿರ್ದೇಶಕರು, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ, ಗದಗ

ಮೆಣಸಗಿ ಗ್ರಾಮದಿಂದ ರೋಣಕ್ಕೆ 40 ಕಿ.ಮೀ. ದೂರವಾಗುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯಕ್ಕೆ ತಲುವುದು ಕಷ್ಟವಾಗುತ್ತದೆ. ಮೂಲ ಸೌಲಭ್ಯವಿಲ್ಲದೆ ಯಾಕೆ ಪರೀಕ್ಷಾ ಕೇಂದ್ರ ಮಾಡಬೇಕು? ನಾವು ಡೆÓ್ಕ… ಕೊಟ್ಟು ಮತ್ತು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಬೇಕು. ಹೋಬಳಿಯಲ್ಲಿ ಪರೀಕ್ಷಾ ಕೇಂದ್ರ ಮಾಡಿ. ನಾವು ವಿದ್ಯಾರ್ಥಿಗಳಿಗೆ ಎಲ್ಲ ಅಗತ್ಯ ಸೌಲಭ್ಯ ಒದಗಿಸುತ್ತೇವೆ.

ಅಶೋಕಜ್ಜ ಹಿರೇಮಠ, ಮೆಣಸಗಿ ಲಿಂಗಬಸವೇಶ್ವರ ಕಾಲೇಜು ಅಧ್ಯಕ್ಷ

ನಮ್ಮ ಹೋಬಳಿಯ ಹೊಳೆಆಲೂರು ಕಲ್ಮೇಶ್ವರ ಕಾಲೇಜಿನಲ್ಲಿ ಮೊದಲು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ರೋಣಕ್ಕೆ ಹೋಗಿ ಪರೀಕ್ಷೆ ಬರೆಯುವಂತಾಗಿದೆ. ನಮ್ಮ ಕೆಲವು ನೆರೆ ಸಂತ್ರಸ್ತ ಗ್ರಾಮಗಳಿಗೆ ಬಸ್‌ ಸೌಲಭ್ಯವಿಲ್ಲ.

ವಿದ್ಯಾರ್ಥಿ ಪಾಲಕರು

click me!