ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆ ಆರಂಭಕ್ಕೆ ಮುನ್ನಾ ದಿನವೇ ವಿದ್ಯಾರ್ಥಿನಿ ಆತ್ಮಹತ್ಯೆ!

By Kannadaprabha News  |  First Published Mar 9, 2023, 8:44 AM IST

ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯಾದ್ಯಂತ ಮಾ.9ರಿಂದ ಆರಂಭವಾಗುವ ಮುನ್ನಾ ದಿನವೇ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಹರದ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ವರದಿಯಾಗಿದೆ.


ದಾವಣಗೆರೆ (ಮಾ.9) : ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯಾದ್ಯಂತ ಮಾ.9ರಿಂದ ಆರಂಭವಾಗುವ ಮುನ್ನಾ ದಿನವೇ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಹರದ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ವರದಿಯಾಗಿದೆ.

ಹರಿಹರ ನಗರ(Hariharanagara)ದ ಅಂಬೇಡ್ಕರ್‌ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವರ್ಷಾ(18 ವರ್ಷ) ಆತ್ಮಹತ್ಯೆ(Suicide) ಮಾಡಿಕೊಂಡ ದುರ್ದೈವಿ. ಅಲ್ಲಿನ ಎಸ್‌ಜೆವಿಪಿ ಪಾಲಿಟೆಕ್ನಿಕ್‌ ಪಕ್ಕದ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಇದ್ದ ವರ್ಷ ಹಾಸ್ಟೆಲ್‌ನಿಂದ ಕಾಲೇಜಿಗೆ ಹೋಗಿ ಬರುತ್ತಿದ್ದಳು. ಹಾಸ್ಟೆಲ್‌ನ ಕೊಠಡಿಯಲ್ಲಿ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡು ಆಕೆ ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹರಿಹರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹರಿಹರ ಸಾರ್ವಜನಿಕ ಆಸ್ಪತ್ರೆ ಶವಾಗಾರದ ಬಳಿ ಮೃತಳ ಪಾಲಕರು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

Tap to resize

Latest Videos

ಕೋಲಾರ ಸಂಸದರು, ಪೊಲೀಸರಿಂದ ಕಿರುಕುಳ: ಅಂಬೇಡ್ಕರ್‌ ಸಂಘಟನೆಯ ಸಂದೇಶ್ ಆತ್ಮಹತ್ಯೆಗೆ ಯತ್ನ

ಬಾವಿಯಲ್ಲಿ ಬಿದ್ದು ಯುವಕ ಸಾವು

ಬಸವನಬಾಗೇವಾಡಿ: ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಬಣ್ಣವಾಡಿದ ಬಳಿಕ ಸ್ನಾನ ಮಾಡಲು ಬಾವಿಗೆ ತೆರಳಿದ ಯುವಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಘಟನೆ ಬುಧವಾರ ನಡೆದಿದೆ. ಗ್ರಾಮದ ಸುನೀಲ ಬಸಪ್ಪ ದೊಡ್ಡಮನಿ(21) ಮೃತ ಯುವಕ. ಈ ಯುವಕನಿಗೆ ಈಜಲು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಬಾವಿಯಿಂದ ಯುವಕನನ್ನು ಹೊರಗೆ ತೆಗೆದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಯುವಕ ಅಸುನೀಗಿದ್ದಾನೆ. ಈ ಕುರಿತು ಬಸವನಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bengaluru crimes: ಬಾರ್‌ ಸಪ್ಲೆಯರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ

click me!