ಬಳ್ಳಾರಿ: ಪರೀಕ್ಷೆ ಬರೆಯಲು ಕೇಂದ್ರಕ್ಕೆ ಬಂದು ವಾಪಸ್‌ ಹೋದ 39 ವಿದ್ಯಾರ್ಥಿಗಳು

By Kannadaprabha News  |  First Published Mar 10, 2023, 1:42 PM IST

ಪಟ್ಟಣದ ಎಚ್‌ಪಿಎಸ್‌ ಪಿಯು ಕಾಲೇಜಿನ ಪ್ರಾಚಾರ್ಯರು ಮಾಡಿದ ತಪ್ಪಿನಿಂದ 39 ವಿದ್ಯಾರ್ಥಿಗಳು ಗುರುವಾರ ಆರಂಭವಾದ ದ್ವಿತೀಯ ಪಿಯು ಪರೀಕ್ಷೆಯಿಂದ ಹೊರಗುಳಿದ ಘಟನೆ ಇಲ್ಲಿಯ ಸಪಪೂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಜರುಗಿದೆ.


ಹರಪನಹಳ್ಳಿ (ಮಾ.10) : ಪಟ್ಟಣದ ಎಚ್‌ಪಿಎಸ್‌ ಪಿಯು ಕಾಲೇಜಿನ ಪ್ರಾಚಾರ್ಯರು ಮಾಡಿದ ತಪ್ಪಿನಿಂದ 39 ವಿದ್ಯಾರ್ಥಿಗಳು ಗುರುವಾರ ಆರಂಭವಾದ ದ್ವಿತೀಯ ಪಿಯು ಪರೀಕ್ಷೆಯಿಂದ ಹೊರಗುಳಿದ ಘಟನೆ ಇಲ್ಲಿಯ ಸಪಪೂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಜರುಗಿದೆ.

ಎಚ್‌ಪಿಎಸ್‌ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದ 39 ವಿದ್ಯಾರ್ಥಿಗಳು ತರಗತಿಗಳಿಗೆ ಸುದೀರ್ಘ ಗೈರು ಹಾಜರಾಗಿದ್ದಾರೆ ಎಂದು ಪ್ರಾಚಾರ್ಯ ಬಿ. ಮಂಜುನಾಥ ಅವರು ಪಿಯು ಬೋರ್ಡ್‌ಗೆ ಅಗತ್ಯ ಹಾಜರಾತಿ ಇಲ್ಲ ಎಂದು ಪರೀಕ್ಷೆಗೆ ಅವಕಾಶ ಕೊಡಬಾರದು ಎಂದು ಪತ್ರ ಬರೆದಿದ್ದರು. ಆ ಪ್ರಕಾರ ಸಂಬಂಧಿಸಿದ ವಿದ್ಯಾರ್ಥಿಗಳ ಹೆಸರು ನೋಂದಣಿ ಸಂಖ್ಯೆ ಒಎಂಆರ್‌(Opಠಿಜ್ಚಿa್ಝ ಋa್ಟk ್ಕಛ್ಚಿಟಜ್ಞಜಿಠಿಜಿಟ್ಞ) ಶೀಟ್‌ಗಳು ಬಂದಿಲ್ಲ. ಆದರೆ ಪ್ರಾಚಾರ್ಯ ಮಂಜುನಾಥ ಅವರು ಪ್ರವೇಶ ಪತ್ರಗಳನ್ನು (ಹಾಲ್‌ ಟಿಕೆಟ್‌)ವಾಪಸ್‌ ಪಿಯು ಬೋರ್ಡ್‌ಗೆ ಕಳಿಸುವ ಬದಲು ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

Latest Videos

undefined

ದ್ವಿತೀಯ ಪಿಯು ಪರೀಕ್ಷೆ ಮೊದಲ ದಿನ ಸುಸೂತ್ರ: 95.55% ವಿದ್ಯಾರ್ಥಿಗಳು ಹಾಜರು

ಪ್ರವೇಶ ಪತ್ರ ಪಡೆದ ವಿದ್ಯಾರ್ಥಿಗಳು ನೇರವಾಗಿ ಸಪಪೂ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಕನ್ನಡ ಪರೀಕ್ಷೆ ಬರೆಯಲು ಆಗಮಿಸಿದ್ದಾರೆ. ಆಗ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ವೆಂಕಟೇಶ ಅವರು ಬೋರ್ಡ್‌ನಿಂದ ನನಗೆ ಬಂದಿರುವ ಒಎಆರ್‌ ಶೀಟ್‌ನಲ್ಲಿ ಹೆಸರಿಲ್ಲ, ಆದ್ದರಿಂದ ಪರೀಕ್ಷೆ ಬರೆಯಲು ಅವಕಾಶ ಕೊಡುವುದಿಲ್ಲ ಎಂದು ಹೇಳಿ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಎಚ್‌ಪಿಎಸ್‌ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಅವರನ್ನು ಸಂಪರ್ಕಿಸಿ, ನಮಗೆ ನೀವು ಪ್ರವೇಶ ಪತ್ರ ನೀಡಿದ್ದೀರಿ. ಇದೀಗ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಪಟ್ಟು ಹಿಡಿದು ವಿವಿಧ ಸಂಘಟನೆಗಳ ಮುಖಂಡರ ಜತೆ ಪ್ರತಿಭಟನೆ ನಡೆಸಿದರು.

ಆಗ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ತಹಸೀಲ್ದಾರ್‌ ಡಾ. ಶಿವಕುಮಾರ ಬಿರಾದಾರ, ಹಾಲ್‌ ಟಿಕೆಟ್‌ ಕೊಟ್ಟು ಪ್ರಮಾದ ಎಸಗಿದ ಪ್ರಾಚಾರ್ಯ ಮಂಜುನಾಥ, ಪಿಎಸ್‌ಐ ಶಾಂತರಾಜ ಈ ಕುರಿತು ಚರ್ಚೆ ಮಾಡಿ ಪಿಯು ಉಪನಿರ್ದೆಶಕರನ್ನು ಸಂಪರ್ಕಿಸಿ ಅಂತಿಮವಾಗಿ ಪ್ರವೇಶ ಪತ್ರದ ಸಂಖ್ಯೆಯ ಒಎಂಆರ್‌ ಶೀಟ್‌ಗಳು ಬೋರ್ಡ್‌ನಿಂದ ಬರದೇ ಇರುವುದರಿಂದ ಪರೀಕ್ಷೆಗೆ ಕೂರಲು ಅವಕಾಶವಿಲ್ಲ ಎಂಬ ತೀರ್ಮಾನಕ್ಕೆ ಬಂದರು.

ಪ್ರಾಚಾರ್ಯ ಬಿ. ಮಂಜುನಾಥ ಮಾತನಾಡಿ, ಈ ವಿದ್ಯಾರ್ಥಿಗಳು ಅಗತ್ಯ ಹಾಜರಾತಿ ಇಲ್ಲದ ಕಾರಣ ಪಿಯು ಬೋರ್ಡ್‌ಗೆ ಪರೀಕ್ಷೆಗೆ ಈ ವಿದ್ಯಾರ್ಥಿಗಳಿಗೆ ಅವಕಾಶ ಕೊಡದಂತೆ ತಡೆ ಹಿಡಿಯಲು ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.

ಪಿಯು ಬೋರ್ಡ್‌ಗೆ ಪರೀಕ್ಷೆಗೆ ಅವಕಾಶ ಕೊಡದಂತೆ ಪ್ರಸ್ತಾವನೆ ಸಲ್ಲಿಸಿದ ಮೇಲೆ ಪ್ರಾಚಾರ್ಯರರ ಎಡವಟ್ಟಿನಿಂದ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಅನ್ಯ ಮಾರ್ಗವಿಲ್ಲದೆ ವಾಪಸ್‌ ಮನೆಗೆ ಹೋಗಬೇಕಾಯಿತು.

ವಿದ್ಯಾರ್ಥಿಗಳ ಪರವಾಗಿ ವಿವಿಧ ಸಂಘಟನೆಗಳ ಮುಖಂಡರಾದ ಸಂದೇರ ಪರಶುರಾಮ, ಲಿಂಬ್ಯಾನಾಯ್ಕ, ತಾಪಂ ಮಾಜಿ ಉಪಾಧ್ಯಕ್ಷ ಮಂಜ್ಯನಾಯ್ಕ ಸೇರಿದಂತೆ ಇತರರು ಇದ್ದರು.

ಹರಪನಹಳ್ಳಿಯ ಎಚ್‌ಪಿಎಸ್‌ ಪಿಯು ಕಾಲೇಜಿನ ಪ್ರಾಚಾರ್ಯರು ಅಗತ್ಯ ಹಾಜರಾತಿ ಇಲ್ಲದಿದ್ದರೆ ಪ್ರವೇಶ ಪತ್ರಗಳನ್ನು ನೀಡದೆ ಇಲಾಖೆಗೆ ವಾಪಸ್‌ ಕಳಿಸಬೇಕಾಗಿತ್ತು. ಆದರೆ ಅವುಗಳನ್ನು ವಿದ್ಯಾರ್ಥಿಗಳಿಗೆ ನೀಡಿರುವುದು ತಪ್ಪು. ಈ ವಿದ್ಯಾರ್ಥಿಗಳು ಮುಂದಿನ ವರ್ಷದವರೆಗೂ ಕಾಯಬೇಕು.

ಸುಗೇಂದ್ರ, ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ವಿಜಯನಗರ ಜಿಲ್ಲೆ

ಪರೀಕ್ಷೆಯಿಂದ ಹೊರಗುಳಿದಿರುವ ವಿದ್ಯಾರ್ಥಿಗಳ ಹಾಜರಾತಿ ಅಗತ್ಯಕ್ಕೆ ತಕ್ಕಂತೆ ಇಲ್ಲ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತಿಳಿಸಿದರೂ ಸಂಘಟನೆಗಳ ಮುಖಂಡರ ಒತ್ತಡಕ್ಕೆ ಮಣಿದು ಪ್ರವೇಶ ಪತ್ರಗಳನ್ನು ನೀಡಿದ್ದೆ. ಆದರೆ ಬೋರ್ಡ್‌ನಿಂದ ಬಂದಿರುವ ಒಎಂಆರ್‌ ಶೀಟ್‌ನಲ್ಲಿ ಅವರ ಹೆಸರುಗಳು ಇರಲಿಲ್ಲ.

ಬಿ. ಮಂಜುನಾಥ, ಪ್ರಾಚಾರ್ಯ, ಎಚ್‌ಪಿಎಸ್‌ ಪಿಯು ಕಾಲೇಜು, ಹರಪನಹಳ್ಳಿ

click me!