ಭಾರತದಲ್ಲಿ ಪಡೆದ ಪದವಿಗೆ ಆಸ್ಪ್ರೇಲಿಯಾದಲ್ಲಿ ಮಾನ್ಯತೆ!

By Kannadaprabha News  |  First Published Mar 10, 2023, 10:04 AM IST

ಭಾರತದಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳುವ ಪದವಿಗಳಿಗೆ ಆಸ್ಪ್ರೇಲಿಯಾದಲ್ಲಿ ಮಾನ್ಯತೆ ನೀಡಲಾಗುವುದು ಎಂದು ಆಸ್ಪ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ಘೋಷಣೆ ಮಾಡಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ಭಾರತ ಮತ್ತು ಆಸ್ಪ್ರೇಲಿಯಾದ ಶೈಕ್ಷಣಿಕ ಸಂಬಂಧ ಕಾರ್ಯಕ್ರಮದಲ್ಲಿ ಅವರು ಈ ಭರವಸೆ ನೀಡಿದ್ದಾರೆ.


ಅಹಮದಾಬಾದ್‌: ಭಾರತದಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳುವ ಪದವಿಗಳಿಗೆ ಆಸ್ಪ್ರೇಲಿಯಾದಲ್ಲಿ ಮಾನ್ಯತೆ ನೀಡಲಾಗುವುದು ಎಂದು ಆಸ್ಪ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ಘೋಷಣೆ ಮಾಡಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ಭಾರತ ಮತ್ತು ಆಸ್ಪ್ರೇಲಿಯಾದ ಶೈಕ್ಷಣಿಕ ಸಂಬಂಧ ಕಾರ್ಯಕ್ರಮದಲ್ಲಿ ಅವರು ಈ ಭರವಸೆ ನೀಡಿದ್ದಾರೆ.

ಆಸ್ಪ್ರೇಲಿಯಾ-ಭಾರತ ಶೈಕ್ಷಣಿಕ ಅರ್ಹತೆ ಮಾನ್ಯತಾ ವ್ಯವಸ್ಥೆಯ ಘೋಷಣೆ ಮಾಡಿದ ಅಲ್ಬನೀಸ್‌, ಈ ವ್ಯವಸ್ಥೆಯ ಪ್ರಕಾರ ಆಸ್ಪ್ರೇಲಿಯಾದಲ್ಲಿ (Austrelia) ಪಡೆದ ಪದವಿಗಳಿಗೆ ಭಾರತದಲ್ಲಿ ಹಾಗೂ ಭಾರತದಲ್ಲಿ ಪಡೆದ ಪದವಿಗಳಿಗೆ ಆಸ್ಪ್ರೇಲಿಯಾದಲ್ಲಿ ಮಾನ್ಯತೆ ನೀಡಲಾಗುತ್ತದೆ ಎಂದರು. ಅಲ್ಲದೇ ಇದೇ ವೇಳೆ ಭಾರತದಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ವಿಶ್ವವಿದ್ಯಾಲಯವೊಂದು ಭಾರತದಲ್ಲಿ ತನ್ನ ಶಾಖೆಯನ್ನು ತೆರೆದಿದ್ದು, ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಒದಗಿಸಲಿದೆ. ಹಾಗೆಯೇ ಆಸ್ಪ್ರೇಲಿಯಾದ ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ‘ಮಂತ್ರಿ’ ವಿದ್ಯಾರ್ಥಿವೇತನವನ್ನು (scholarship) 4 ವರ್ಷಗಳ ಕಾಲ ಮುಂದುವರೆಸಲಾಗುವುದು ಎಂದು ಹೇಳಿದರು.

Tap to resize

Latest Videos

ವಿದೇಶದಲ್ಲಿ ಓದುವ ಮೊದಲು Education Loan ಬಗ್ಗೆ ತಿಳಿದ್ಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಉನ್ನತ ಶಿಕ್ಷಣ (Higher Education) ಕೈಗೆಟುಕದ ನಕ್ಷತ್ರವಾಗಿದೆ. ಉನ್ನತ ಶಿಕ್ಷಣದ ವೆಚ್ಚ (Cost) ವನ್ನು ಭರಿಸೋದು ಸುಲಭದ ಮಾತಲ್ಲ. ಉನ್ನತ ಶಿಕ್ಷಣ ಪಡೆಯಬೇಕು ಎನ್ನುವ ಮಕ್ಕಳು ಸಾಮಾನ್ಯವಾಗಿ  ಎಜ್ಯುಕೇಷನ್ ಲೋನ್ ಮೊರೆ ಹೋಗ್ತಾರೆ. ಶಿಕ್ಷಣ (Education) ಕ್ಕಾಗಿ ಸಾಲ ಪಡೆದು ಅಧ್ಯಯನ (Study) ಮುಂದುವರೆಸುವ ಮಕ್ಕಳ (Children) ಸಂಖ್ಯೆ ಸಾಕಷ್ಟಿದೆ. ಮಕ್ಕಳು ಉನ್ನತ ಅಧ್ಯಯನದ ಕನಸನ್ನು ನನಸು ಮಾಡಿಕೊಳ್ಳಲು ಎಜ್ಯುಕೇಷನ್ ಲೋನ್ ಸಹಕಾರಿಯಾಗಿದೆ.

ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಶಿಕ್ಷಣ: ಶಾಸಕ

ಶಿಕ್ಷಣ ಪೈಪೋಟಿಯಾಗಿದೆ. ಇಲ್ಲಿ ಅತಿ ಹೆಚ್ಚು ಸ್ಪರ್ಧೆ (Competition) ಯಿದೆ. ಉತ್ತಮ ಉದ್ಯೋಗ ಪಡೆಯಬೇಕೆಂದ್ರೆ ಉನ್ನತ ಶಿಕ್ಷಣ ಪಡೆಯುವುದು ಬಹುಮುಖ್ಯವಾಗಿದೆ. ಆದರೆ ಉನ್ನತ ಶಿಕ್ಷಣಕ್ಕಾಗಿ ವಿದೇಶ (Abroad) ಕ್ಕೆ ಹೋಗುವುದು ಪ್ರತಿಯೊಬ್ಬರ ಬಜೆಟ್‌ (Budget) ನಲ್ಲಿ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ಸಾಲದ ಮಹತ್ವ ಹೆಚ್ಚುತ್ತದೆ. ಉನ್ನತ ಶಿಕ್ಷಣದ ಲಾಭ ಪಡೆಯಲು ಅನೇಕ ವಿದ್ಯಾರ್ಥಿಗಳ ಮುಂದೆ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಬರುತ್ತದೆ. ನಿಮ್ಮ ಮನೆಯಲ್ಲಿಯೂ ಉತ್ತಮ ಶಿಕ್ಷಣಕ್ಕಾಗಿ ಯಾರಾದರೂ ಶಿಕ್ಷಣ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ, ಅದಕ್ಕೂ ಮೊದಲು ಅದಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯ. 

5, 8ನೇ ಕ್ಲಾಸ್‌ ಬೋರ್ಡ್‌ ಪರೀಕ್ಷೆಯಲ್ಲಿ ಎಲ್ರೂ ಪಾಸ್‌: ಹೈಕೋರ್ಟ್‌ನಲ್ಲಿ ಸರ್ಕಾರ ವಾದ

ಭಾರತದಲ್ಲಿ ಎಜ್ಯುಕೇಷನ್ ಲೋನ್ ಗೆ ಸಂಬಂಧಿಸಿದಂತೆ ಕೆಲ ನಿಯಮಗಳಿವೆ. ಹಾಗೆಯೇ ಅದನ್ನು ವಿಭಾಗಿಸಲಾಗಿದೆ.  ಭಾರತದಲ್ಲಿ ಸಾಮಾನ್ಯವಾಗಿ 4 ವಿಧದ ವಿದ್ಯಾರ್ಥಿ ಸಾಲ ಸಿಗುತ್ತದೆ. 

ವೃತ್ತಿ ಶಿಕ್ಷಣ ಸಾಲ :  ಒಬ್ಬ ವಿದ್ಯಾರ್ಥಿಯು ಸರ್ಕಾರಿ ಸಂಸ್ಥೆಯಿಂದ ಶಿಕ್ಷಣದ ಮೂಲಕ ವೃತ್ತಿಜೀವನವನ್ನು ಶುರು ಮಾಡಲು ಬಯಸಿದ್ದರೆ ಅವನು ಇದಕ್ಕಾಗಿ ವೃತ್ತಿ ಶಿಕ್ಷಣ ಸಾಲವನ್ನು ತೆಗೆದುಕೊಳ್ಳಬಹುದು.

ವೃತ್ತಿಪರ ಪದವೀಧರ ವಿದ್ಯಾರ್ಥಿ ಸಾಲ :  ಪದವಿ ಮುಗಿದ ನಂತರ, ವಿದ್ಯಾರ್ಥಿಗಳು ತಮ್ಮ ಮುಂದಿನ ಅಧ್ಯಯನವನ್ನು ಮುಂದುವರಿಸಲು ಬಯಸಿದಾಗ, ಇದಕ್ಕಾಗಿ ಅವರು ವೃತ್ತಿಪರ ಪದವೀಧರ ವಿದ್ಯಾರ್ಥಿ ಸಾಲವನ್ನು ಪಡೆಯಬಹುದು. 

ಪೋಷಕರ ಸಾಲ : ಪೋಷಕರು ತಮ್ಮ ಮಕ್ಕಳ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಲವನ್ನು ತೆಗೆದುಕೊಂಡಾಗ ಅದನ್ನು ಪೋಷಕ ಸಾಲ ಎಂದು ಕರೆಯಲಾಗುತ್ತದೆ. 

ಪದವಿಪೂರ್ವ ಸಾಲ : ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಂತರ, ದೇಶ ಮತ್ತು ವಿದೇಶಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಲು ಬಯಸಿದರೆ, ಇದಕ್ಕಾಗಿ ಪದವಿಪೂರ್ವ ಸಾಲದ ಪ್ರಯೋಜನವನ್ನು ಪಡೆಯಬಹುದು.

click me!