Vijayanagara: ಹೊಸಪೇಟೆ ಸರ್ಕಾರಿ ಕಾಲೇಜಿನಲ್ಲಿ 3 ಕೋಟಿ ರೂಪಾಯಿ ಗುಳುಂ!

By Suvarna News  |  First Published May 28, 2022, 6:11 PM IST
  • ಹಳೇ ಪ್ರಿನ್ಸಿಪಾಲ್ ಮತ್ತು ಹೊಸ ಪ್ರಿನ್ಸಿಪಾಲ್ ಮಧ್ಯೆ ಸಮನ್ವಯ ಕೊರತೆ 
  • ದೂರು ಕೊಡಲು ಮುಂದಾದ ಕಾಲೇಜು ಆಡಳಿತ ಮಂಡಳಿ 
  • ಶಾಲಾಭಿವರದ್ಧಿಗೆ ಖರ್ಚು ಮಾಡಿದ್ದಾರೆ ಆದ್ರೇ ಲೆಕ್ಕಾ ತೋರಿಸುತ್ತಿಲ್ಲ

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ವಿಜಯನಗರ (ಮೇ.28) : ಅದು ಹೊಸಪೇಟೆ (Hosapete) ಪ್ರತಿಷ್ಟಿತ ಸರ್ಕಾರಿ ಕಾಲೇಜು (government College). ಖಾಸಗಿ ಕಾಲೇಜಿಗೆ ಸೆಡ್ಡು ಹೊಡೆಯೋ ರೀತಿಯಲ್ಲಿ ಇಷ್ಟು ದಿನಗಳ ಕಾಲ ನಡೆದುಕೊಂಡು ಬಂದಿದೆ. ಆದ್ರೀಗ ವಿದ್ಯಾರ್ಥಿಗಳಿಗೆ (Student) ನೀತಿ ಪಾಠ ಹೇಳಬೇಕಾದ ಜ್ಞಾನ ದೇಗುಲದಲ್ಲಿ ದೊಡ್ಡವರಿಂದಲೇ ಅಕ್ರಮ ಅನಾಚಾರ ನಡೆದಿದೆ ಎನ್ನಲಾಗ್ತಿದೆ. ‌ಕಾಲೇಜಿನ 16 ಬ್ಯಾಂಕ್ (Bank) ಅಕೌಂಟ್ ನಿಂದ ಮೂರು ಕೋಟಿ ರೂಪಾಯಿ ಮಂಗಮಯಾವಾಗಿದೆ. ಆದ್ರೇ ಇಲ್ಲಿ ಯಾಕೆ ಹೀಗಾಯ್ತು ಅನ್ನೋದು ಮಾತ್ರ ನಿಗೂಢವಾಗಿದೆ. ಇನ್ನೂ ಪ್ರಾಂಶುಪಾಲರಿಗೆ ಮತ್ತು ಆಡಳಿತ ಮಂಡಳಿಗೆ ಗೊತ್ತಿದ್ದೇ ನಡೆದಿದೆಯೋ ಅಥವಾ ಅವರಿಗೆ ಗೊತ್ತಿಲ್ಲದೆ ನಡೆಯಿತೋ.? ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. 
 
ಅಂತರಿಕ ಕಚ್ಚಾಟದಿಂದ ಹೊರ ಬಂದ ಪ್ರಕರಣ:
ಕಳೆದ ಹದಿನೈದು ವರ್ಷಗಳ ಹಿಂದೆ ಹೊಸಪೇಟೆಯಲ್ಲಿ  ಖಾಸಗಿ ಕಾಲೇಜಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಶಂಕರ್ ಆನಂದ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಅನ್ನು ನಿರ್ಮಾಣ ಮಾಡಲಾಯಿತು. ಉದ್ದೇಶಕ್ಕೆ ತಕ್ಕಂತೆ ಜನಮಾನಸದಲ್ಲಿ ಉಳಿದ ಕಾಲೇಜಿನಲ್ಲಿಂದು ಪ್ರಾಂಶುಪಾಲರೊಬ್ಬರು ಮಾಡಿದ ಎಡವಟ್ಟು ಭಾರಿ ಚರ್ಚೆಗೆ ಗ್ರಾಸವಾಗಿದೆ.

Latest Videos

undefined

PSI RECRUITMENT SCAM ಕಿಂಗ್‌ಪಿನ್ ಆರ್.ಡಿ ಪಾಟೀಲ್ ಮನೆ ಕೆಲಸದಾಳು ಅರೆಸ್ಟ್!

ಈ ಹಿಂದೆ ಇದ್ದ ಪ್ರಾಂಶುಪಾಲ ಕನಕೇಶ್ ಮೂರ್ತಿ ಎನ್ನುವವರು ಎಪ್ರಿಲ್ 30 ನಿವೃತ್ತಿಯಾಗಿದ್ದಾರೆ. ಅವರು ನಿರ್ಗಮಿಸೋ ಮುನ್ನ ಕಾಲೇಜಿನ ವಿವಿಧ 16 ಅಕೌಂಟ್ಗಳಲ್ಲಿ ಮೂರು ಕೋಟಿಯಷ್ಟು ಹಣವಿತ್ತಂತೆ ಆದ್ರೇ, ಇದೀಗ ಇದು ಇಲ್ಲ ಎನ್ನಲಾಗ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೇ, ಎಲ್ಲವನ್ನು ಅಭಿವೃದ್ಧಿಗಾಗಿ ಬಳಸಿದ್ದೇನೆ ಎನ್ನುತ್ತಿದ್ದಾರಂತೆ ಕನಕೇಶ್ ಮೂರ್ತಿ.  ಆದ್ರೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಹಣದ ವಹಿವಾಟಿನ ಅನುಮಾನ ಹೆಚ್ಚಾಗಿದೆ. ಅಲ್ಲದೇ ಯಾವುದೇ ಹಣ ಅಭಿವೃದ್ಧಿಗೆ ಬಳಸಬೆಕಾದ್ರೇ ಅದನ್ನು ಆಡಳಿತ ಮಂಡಳಿ ಗಮನಕ್ಕೆ ತರಬೇಕು ಆದ್ರೇ ಈ ಕೆಲಸವನ್ನು ಮಾಡದೇ ಇದ್ದದ್ದೇ ಇಷ್ಟೇಲ್ಲ ಅವಾಂತರಕ್ಕೆ ಕಾರಣವಾಯ್ತು ಎನ್ನಲಾಗಿದೆ.

Chikkamagaluru ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿ ಶಿವಮೊಗ್ಗದಲ್ಲಿ ಬಂಧನ
 
ಆಡಿಟ್ ಮಾಡಿದ್ರೆ ಸತ್ಯಾಸತ್ಯತೆ ಹೊರ ಬರುತ್ತದೆ: ಇನ್ನು ಮೇ 1ರಂದು ನಟರಾಜ್ ಪಾಟೀಲ್ ಎನ್ನುವ ಹೊಸ ಪ್ರಾಂಶುಪಾಲರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಧಿಕಾರ ಸ್ವೀಕಾರ ಮಾಡುವಾಗ ಹಣದ ಬಗ್ಗೆ ಗೊತ್ತಾಗಿಲ್ಲ ನಂತರ ಪರೀಶಿಲಿಸಿದಾಗ ಗೊತ್ತಗಿದೆ. ಹಳೇ ಪ್ರಾಂಶುಪಾಲರು (Principal) ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ ಎನ್ನುತ್ತಿದ್ರೇ, ಹೊಸ ಪ್ರಾಂಶುಪಾಲರು ಮಾತ್ರ ಈ ಬಗ್ಗೆ ನನಗೆ ಗೊತ್ತಿಲ್ಲ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದೇನೆ ಎನ್ನುತ್ತಿದ್ದಾರೆ. ಆದ್ರೆ ಆಡಿಟ್ ಮಾಡಿದ್ರೆ ಮಾತ್ರ ಸತ್ಯಾಸತ್ಯತೆ ಹೊರ ಬೀಳುತ್ತದೆ ಅಷ್ಟಕ್ಕೂ ಮೊದಲು ಏನನ್ನು ಹೇಳಲಾಗದು ಎನ್ನುತ್ತಿದ್ದಾರೆ.

Udupi: ಕಳೆದುಹೋದ ಚಿನ್ನ ತಂದುಕೊಟ್ಟ ಕುಟುಂಬ ದೈವ, ಜಾರಂದಾಯ ಪವಾಡ!
 
ತನಿಖೆ ಬಳಿಕ‌ ಮಾತ್ರ ಸತ್ಯಾಸತ್ಯತೆ ಹೊರಬರಲಿದೆ: ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡೋ ಬಗ್ಗೆ ಚರ್ಚೆ ನಡೆಸುತ್ತಿದೆ. ಆದ್ರೇ, ತಮ್ಮದೇನು ತಪ್ಪಿಲ್ಲ ಅಂದ್ರೇ, ಹೊಸ ಪ್ರಾಂಶುಪಾಲರೇಕೆ ಹೊರಗೆ ಬರುತ್ತಿಲ್ಲ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಅದೇನೇ ಇರಲಿ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾದವರು ಇದೀಗ ತಲೆ ತಗ್ಗಿಸುವಂತ ಕೆಲಸ ಮಾಡಿರೋದು ಮಾತ್ರ ನಾಚೀಕೆಗೇಡಿನ ಸಂಗತಿಯಾಗಿದೆ.

click me!