ಅತ್ತ ಚಿಕ್ಕಮಗಳೂರಿನಲ್ಲಿ 6 ಖಾಸಗಿ ಶಾಲೆಗಳಿಗೆ ಅನುಮತಿ, ಇತ್ತ 105 ಸರ್ಕಾರಿ ಶಾಲೆಗಳಿಗೆ ಬೀಗ

By Suvarna NewsFirst Published Aug 4, 2022, 9:17 PM IST
Highlights

ಒಂದೆಡೆ ರಾಜ್ಯ ಸರ್ಕಾರ ಹೊಸ-ಹೊಸ ಶಾಲೆಗಳನ್ನ ಮಂಜೂರು ಮಾಡುತ್ತಿದೆ. ಆದ್ರೆ, ಮತ್ತೊಂದೆಡೆ ಸರ್ಕಾರಿ ಶಾಲೆಗಳನ್ನು ಬಂದ್  ಮಾಡಿ
ಖಾಸಗಿ ಶಾಲೆಗಳಿಗೆ ಅನುಮತಿ ನೀಡುತ್ತಿದೆ.  

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು .


ಚಿಕ್ಕಮಗಳೂರು, (ಆಗಸ್ಟ್.04) :
ಪೋಷಕರ ಇಂಗ್ಲೀಷ್ ವ್ಯಾಮೋಹವೋ, ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಪೈಪೋಟಿ ನಿಡೋದಕ್ಕೆ ಸಾಧ್ಯವಾಗ್ತಿಲ್ವೋ ಅಥವಾ ಸರ್ಕಾರ ಕೇಳ್ದೋರ್ಗೆಲ್ಲಾ ಖಾಸಗಿ ಶಾಲೆಗಳಿಗೆ ಅನುಮತಿ ನಿಡ್ತಿರೋದ್ರಿಂದ್ಲೋ ಗೊತ್ತಿಲ್ಲ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಬೀಗ ಬೀಳ್ತಾನೆ ಇದೆ.

ಮಕ್ಕಳಿಗೆ ಬಿಸಿಯೂಟ, ಹಾಲು, ಮೊಟ್ಟೆ, ಪುಸ್ತಕ ಸೇರಿದಂತೆ ಸರ್ಕಾರದಿಂದಲೇ ಪಬ್ಲಿಕ್ ಶಾಲೆ ಅಂತೆಲ್ಲಾ ವಿವಿಧ ಯೋಜನೆಗಳನ್ನ ಜಾರಿಗೆ ತಂದ್ರು ಕನ್ನಡ ಶಾಲೆಗಳನ್ನ ಉಳಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಕಾಫಿನಾಡಲ್ಲಿ ಈ ವರ್ಷ 26 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದ್ದು 6 ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. 

95 ಹಿರಿಯ ಪ್ರಾಥಮಿಕ ಶಾಲೆಗಳು ಇನ್ನು ಹೈಸ್ಕೂಲ್‌, ಸರ್ಕಾರ ಮಹತ್ವದ ಆದೇಶ

ಕಾಫಿನಾಡಿನಲ್ಲಿ 105 ಶಾಲೆಗಳು ಬಂದ್
 

ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದ್ಬೇಕು ಅನ್ನೋ ಪೋಷಕರ ಬಯಕೆಯೋ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡೋದಕ್ಕೆ ಆಗ್ತಿಲ್ವೋ  ಅಥವ ಸರ್ಕಾರ ಕೇಳ್ದೋರ್ಗೆಲ್ಲಾ ಖಾಸಗಿ ಶಾಲೆಗೆ ಅನುಮತಿ ನೀಡ್ತಿರೋದ್ರಿಂದ್ಲೋ ಏನೋ. 2011ರಿಂದ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ  105ಕನ್ನಡ ಶಾಲೆಗಳು ಬಂದ್ ಆಗಿವೆ. ಶೂನ್ಯ ದಾಖಲಾತಿ ಹಿನ್ನಲೆಯಲ್ಲಿ ಶಾಲೆಗಳಿಗೆ ಬೀಗ ಹಾಕಿದ್ದು ಈವರ್ಷವೂ 26 ಶಾಲೆಗಳಿಗೆ ಬೀಗ ಬಿದ್ದಿದೆ. ಸರ್ಕಾರ ಮಧ್ಯಾಹ್ನ ಬಿಸಿಯೂಟ, ಮೊಟ್ಟೆ-ಹಾಲು, ಜೊತೆಗೆ ಸರ್ಕಾರಿದಂದಲೇ ಪಬ್ಲಿಕ್ ಶಾಲೆ, ಇಂಗ್ಗೀಷ್ ಮಾಧ್ಯಮ ಶಾಲೆ,  ಅಂತೆಲ್ಲಾ ಹತ್ತಾರು ಯೋಜನೆಗಳನ್ನ ಜಾರಿಗೆ ತಂದ್ರು ಹೆತ್ತವರು ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರ್ಸೋಕೆ ಮೂಗು ಮುರಿಯುತ್ತಿದ್ದಾರೆ. 

ಇದರಿಂದ ಕಾಫಿನಾಡಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಬೀಗ ಬೀಳ್ತಿರೋ ಪ್ರಮಾಣ ಕೂಡ ಹೆಚ್ಚಿದೆ. ಸರ್ಕಾರ ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡ್ತಿರೋದ್ರಿಂದಲೇ ಸರ್ಕಾರಿ ಶಾಲೆಗಳಿಗೆ ಈ ಸ್ಥಿತಿ ಬಂದಿದೆ ಅಂತ  ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ  ಹೆಚ್ ಎಸ್ ಪುಟ್ಟಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. 

ಕನ್ನಡ ಶಾಲೆ ಮುಚ್ಚಿದರೆ ಮಾತೃಭಾಷೆಗೆ ಕುತ್ತು: ಡಾ.ಮಹೇಶ್‌ ಜೋಷಿ

ಸರ್ಕಾರಿ ಶಾಲೆ ಬಂದ್ ನಡುವೆ ಆರು ಖಾಸಗಿ ಶಾಲೆಗಳಿಗೆ ಅನುಮತಿ 
ಬರೋಬ್ಬರಿ 105 ಶಾಲೆಗಳ ಸ್ಥಿತಿಗತಿ ಪ್ರಸ್ತುತ ಅಧೋಗತಿ ತಲುಪಿದೆ. ಗ್ರಾಮೀಣ ಭಾಗದ ಮಕ್ಕಳಿಗೂ ಸುಸಜ್ಜಿತ ಶಾಲಾ ಪರಿಸರ ಕಲ್ಪಿಸಿಕೊಡುವ ಉದ್ದೇಶದಿಂದ ಸರ್ವ ಶಿಕ್ಷ ಅಭಿಯಾನ ಯೋಜನೆಯಡಿ ನಿರ್ಮಿಸಲಾಗಿರುವ ಶಾಲಾ ಕಟ್ಟಡಗಳು, ಸುಸಜ್ಜಿತ ಅಡುಗೆ ಮನೆಗಳು, ಶೌಚಾಲಯಗಳ ಕಟ್ಟಡಗಳು ಕಳೆದ ಮೂರ್ನಾಲ್ಕು ವರ್ಷಗಳಿಂದ ಪಾಳು ಬಿದ್ದಿವೆ.ಸರ್ಕಾರಿ ಶಾಲೆಗೆ ಬೀಗ ಹಾಕ್ಸೋದ್ರಲ್ಲಿ ಸರ್ಕಾರದ ಪಾತ್ರವೂ ಪ್ರಮುಖ ಪಾತ್ರ ವಹಿಸಿದೆ ಎಂಬ ಮಾತುಗಳು ಕೇಳಿ ಬರ್ತಿದೆ. ಸರ್ಕಾರ ಬೇಕಾಬಿಟ್ಟಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡ್ತಿರೋದ್ರಿಂದ ಸರ್ಕಾರಿ ಶಾಲೆಗಳು ಅವನತಿಯ ಅಂಚಿನಲ್ಲಿವೆ. ಈ ವರ್ಷ 26 ಶಾಲೆಗಳಿಗೆ ಬೀಗ ಬಿದ್ರೆ ಹೊಸದಾಗಿ 6 ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಡಿಡಿಪಿಐ ರಂಗನಾಥ್ ಸ್ವಾಮಿ ತಿಳಿಸಿದ್ದಾರೆ. 

ಬೀರೂರು, 8 ಚಿಕ್ಕಮಗಳೂರು, 36, ಕಡೂರು 4, ಮೂಡಿಗೆರೆ  12, ಕೊಪ್ಪ 13,  ಎನ್ ಆರ್ ಪುರ 15,  ಶೃಂಗೇರಿ 13, ತರೀಕರೆ 4 ಒಟ್ಟು : 105

ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆ ಪ್ರದೇಶವಾದ ಬೀರೂರು, ತರೀಕರೆ, ಕಡೂರಿನಲ್ಲಿ 16 ಶಾಲೆಗಳು ಬಂದ್ ಆದ್ರೆ ಜಿಲ್ಲೆಯ ಮಲೆನಾಡಿನ ಪ್ರದೇಶವಾದ ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ,  ಶೃಂಗೇರಿಯಲ್ಲಿ ಒಟ್ಟು 89 ಶಾಲೆಗಳಿಗೆ ಬೀಗ ಹಾಕಲಾಗಿದೆ ಶಿಕ್ಷಣ ಇಲಾಖೆಯ ಅಂಕಿ ಅಂಶಗಳ ಪ್ರಕಾರವೇ ಮಲೆನಾಡಿನಲ್ಲಿ ಅತೀ ಹೆಚ್ಚು ಶಾಲೆಗಳು ಶೂನ್ಯ ದಾಖಲಾತಿಯಿಂದ ಬಂದ್ ಆಗಿರುವದು ಆಘಾತಕಾರಿ ಸಂಗತಿಯೇ ಸರಿ. ಒಟ್ಟಾರೆ ಒಂದೆಡೆ ಸರ್ಕಾರಿ ಶಾಲೆಗೆ ವಿವಿಧ ಯೋಜನೆಗಳನ್ನ ಜಾರಿಗೆ ತರೋದು. ಮತ್ತೊಂದೆಡೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡೋದು.

ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವೆ ಕಣ್ಣಾಮುಚ್ಚಾಲೆ ಆಟವಾಡ್ತಿರೋ ಸರ್ಕಾರಗಳ ನಡೆಯಿಂದಲೇ ಸರ್ಕಾರಿ ಶಾಲೆಗಳು ಬೀಗ ಕಾಣ್ತಿವೆಯಾ ಎಂದು ಸರ್ಕಾರದ ಮೇಲೆ ಅನುಮಾನ ಮೂಡ್ತಿದೆ. ಇನ್ನಾದ್ರು ಸರ್ಕಾರ, ಸರ್ಕಾರಿ ಕನ್ನಡ ಶಾಲೆಗಳನ್ನ ಉಳಿಸೋ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತಾ ಕಾದುನೋಡ್ಬೇಕು.

click me!