SSLC Result 2023: 3823 ಶಾಲೇಲಿ ಶೇ.100ರ ಸಾಧನೆ

By Kannadaprabha NewsFirst Published May 9, 2023, 12:51 PM IST
Highlights

ರಾಜ್ಯದ 15335 ಪ್ರೌಢ ಶಾಲೆಗಳ ಪೈಕಿ ಈ ಬಾರಿ 3823 ಶಾಲೆಗಳಲ್ಲಿ ಎಲ್ಲ ಮಕ್ಕಳೂ ಪಾಸಾಗಿ ಶೇ.100ರಷ್ಟುಫಲಿತಾಂಶ ದಾಖಲಾಗಿದೆ. ಈ ಪೈಕಿ 1824 ಅನುದಾನ ರಹಿತ ಖಾಸಗಿ ಶಾಲೆಗಳು, 1517 ಸರ್ಕಾರಿ, 482 ಅನುದಾನಿತ ಖಾಸಗಿ ಶಾಲೆಗಳಾಗಿವೆ. ಇನ್ನು, 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು ಇವುಗಳಲ್ಲಿ 23 ಅನುದಾನ ರಹಿತ ಶಾಲೆಗಳು, 11 ಅನುದಾನಿತ ಖಾಸಗಿ ಶಾಲೆಗಳಾಗಿವೆ.

ಬೆಂಗಳೂರು(ಮೇ.09):  ಜಿಲ್ಲಾವಾರು ಈ ಬಾರಿ ಚಿತ್ರದುರ್ಗದಲ್ಲಿ ಶೇ.98.8 ರಷ್ಟು ಫಲಿತಾಂಶದ ಮೂಲಕ ಪ್ರಥಮ ಸ್ಥಾನಕ್ಕೇರಿದೆ. ಮಂಡ್ಯ ಶೇ.96.74 ಮತ್ತು ಹಾಸನ ಶೇ.96.68ರಷ್ಟುಫಲಿತಾಂಶದ ಮೂಲಕ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿವೆ. ಶೇ.75.49ರಷ್ಟು ಫಲಿತಂಶ ಪಡೆದಿರುವ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ. ಇನ್ನು, 35 ಶೈಕ್ಷಣಿಕ ಜಿಲ್ಲೆಗಳಲ್ಲಿ 23 ಜಿಲ್ಲೆಗಳಲ್ಲಿ ಶೇ.75ರಿಂದ 100ರಷ್ಟುಫಲಿತಾಂಶ ಪಡೆದು ‘ಎ’ ಶ್ರೇಣಿ ಪಡೆದರೆ, 12 ಜಿಲ್ಲೆಗಳು ಶೇ.60ರಿಂದ ಶೇ.75ರಷ್ಟು ಫಲಿತಾಂಶ ಪಡೆದು ‘ಬಿ’ ಗ್ರೇಡ್‌ ಪಡೆದಿವೆ. ‘ಸಿ’ಗ್ರೇಡ್‌ನಲ್ಲಿ ಯಾವುದೇ ಜಿಲ್ಲೆ ಇಲ್ಲ. ವಿಶೇಷವೆಂದರೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಟಾಪ್‌ 4 ಸ್ಥಾನದಲ್ಲಿರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕ್ರಮವಾಗಿ 19, 18, 13 ಮತ್ತು 9ನೇ ಸ್ಥಾನ ಪಡೆದಿವೆ.

3823 ಶಾಲೇಲಿ ಶೇ.100ರ ಸಾಧನೆ, 34 ಶಾಲೆಯಲ್ಲಿ ಶೂನ್ಯ ಫಲಿತಾಂಶ

ರಾಜ್ಯದ 15335 ಪ್ರೌಢ ಶಾಲೆಗಳ ಪೈಕಿ ಈ ಬಾರಿ 3823 ಶಾಲೆಗಳಲ್ಲಿ ಎಲ್ಲ ಮಕ್ಕಳೂ ಪಾಸಾಗಿ ಶೇ.100ರಷ್ಟು ಫಲಿತಾಂಶ ದಾಖಲಾಗಿದೆ. ಈ ಪೈಕಿ 1824 ಅನುದಾನ ರಹಿತ ಖಾಸಗಿ ಶಾಲೆಗಳು, 1517 ಸರ್ಕಾರಿ, 482 ಅನುದಾನಿತ ಖಾಸಗಿ ಶಾಲೆಗಳಾಗಿವೆ. ಇನ್ನು, 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು ಇವುಗಳಲ್ಲಿ 23 ಅನುದಾನ ರಹಿತ ಶಾಲೆಗಳು, 11 ಅನುದಾನಿತ ಖಾಸಗಿ ಶಾಲೆಗಳಾಗಿವೆ.

ಸಾಧನೆಗೆ ಬಡತನ ಅಡ್ಡಿಯೆಂಬುದು ಸುಳ್ಳು: ಗೌಂಡಿ ಕೆಲಸದಾತನ ಮಗಳಿಗೆ ಡಿಸ್ಟಿಂಕ್ಷನ್‌!

59 ಸಾವಿರ ವಿದ್ಯಾರ್ಥಿಗಳಿಗೆ ಗ್ರೇಸ್‌ ಅಂಕ

ಕಳೆದ ಸಾಲಿನಲ್ಲಿ 55 ಸಾವಿರದಷ್ಟಿದ್ದ ಗ್ರೇಸ್‌ ಅಂಕ ಪಡೆದು ಪಾಸಾದವರ ಸಂಖ್ಯೆ ಈ ಬಾರಿ 59 ಸಾವಿರಕ್ಕೆ ಏರಿದೆ. ಈ ಮಕ್ಕಳಿಗೆ ಗರಿಷ್ಠ ಮೂರು ವಿಷಯಗಳಲ್ಲಿ ತಲಾ ಶೇ.10ರಷ್ಟು ಕೃಪಾಂಕ ನೀಡಲಾಗಿದೆ ಎಂದು ಇದೇ ವೇಳೆ ಮಂಡಳಿ ಅಧ್ಯಕ್ಷ ಆರ್‌.ರಾಮಚಂದ್ರನ್‌ ವಿವರಿಸಿದರು.

ನಿಯಮಾನುಸಾರ ಗರಿಷ್ಠ ಎರಡು ವಿಷಯಗಳಲ್ಲಿ ಮಾತ್ರ ಶೇ.5ರಷ್ಟುಗ್ರೇಸ್‌ ಅಂಕ ನೀಡಲು ಅವಕಾಶವಿತ್ತು. ಆದರೆ, ಸರ್ಕಾರ ಕಲಿಕಾ ಕೊರತೆ ಹಿನ್ನೆಲೆಯಲ್ಲಿ 2020-21ರ ಕೋವಿಡ್‌ ವರ್ಷದಿಂದ ಗರಿಷ್ಠ 3 ವಿಷಯಗಳಲ್ಲಿ ತಲಾ 10ರಷ್ಟುಗ್ರೇಸ್‌ ಅಂಕ ನೀಡಬಹುದೆಂದು ವಿಶೇಷ ಅವಕಾಶ ಕಲ್ಪಿಸಿತ್ತು. ಅದನ್ನು ಈ ಬಾರಿಯೂ ಮುಂದುವರೆಸಲು ಅವಕಾಶ ನೀಡಿತ್ತು. ಆ ಪ್ರಕಾರ, ಆರೂ ವಿಷಯಗಳಲ್ಲಿ ಕನಿಷ್ಠ 175 ಅಂಕಗಳನ್ನು ಪಡೆದವರಿಗೆ ಮಾತ್ರ, ಫೇಲಾಗಿರುವ 3 ವಿಷಯಗಳಲ್ಲಿ ಗ್ರೇಸ್‌ ಅಂಕ ಪಡೆಯಲು ಅರ್ಹರಾಗಿರುತ್ತಾರೆ. ಅದೂ ಕೂಡ ಫೇಲಾಗಿರುವ ಮೂರು ವಿಷಯಗಳಿಗೆ ತಲಾ ಶೇ.10ರಷ್ಟುಅಂಕ ನೀಡಿದರೆ ಪಾಸಾಗುವಂತಹವರಿಗೆ ಮಾತ್ರ ನೀಡಲಾಗಿದೆ. 59 ಸಾವಿರ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಒಂದು ವಿಷಯದಲ್ಲಿ, ಕೆಲವರಿಗೆ 2 ವಿಷಯದಲ್ಲಿ ಇನ್ನು ಕೆಲವರು 3 ವಿಷಯದಲ್ಲಿ ಗ್ರೇಸ್‌ ಅಂಕ ಪಡಲಾಗಿದೆ.

625 ಅಂಕ ಪಡೆದವರ ಸಂಖ್ಯೆ ಗಣನೀಯ ಇಳಿಕೆ

ಕಳೆದ ಮೂರು ವರ್ಷದಿಂದ ನೂರಾರು ಸಂಖ್ಯೆಗೆ ಏರಿಕೆಯಾಗಿದ್ದ ಶೇ.100ಕ್ಕೆ ನೂರು ಅಂದರೆ 625ಕ್ಕೆ 625 ಅಂಕ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಈ ಬಾರಿ ಕೋವಿಡ್‌ ಪೂರ್ವ ವರ್ಷದಂತೆ ಒಂದಂಕಿಗೆ ಕುಸಿದಿದೆ. ಕೋವಿಡ್‌ ಪೂರ್ವದಲ್ಲಿ ಇಂತಹ ವಿದ್ಯಾರ್ಥಿಗಳ ಸಂಖ್ಯೆ ಎರಡು ಅಥವಾ ಮೂರು ಇರುತ್ತಿತ್ತು. ನಂತರ ಇದು 2019-20ರಲ್ಲಿ 11ಕ್ಕೆ ಏರಿಕೆಯಾಯಿತು. 2020-21ರ ಕೋವಿಡ್‌ ವರ್ಷದಲ್ಲಿ ಎರಡೇ ದಿನದಲ್ಲಿ ಆರೂ ವಿಷಯಗಳಿಗೆ ಪರೀಕ್ಷೆ ನಡೆಸಿ ಎಲ್ಲರನ್ನೂ ಪಾಸು ಮಾಡಿದ್ದಾಗ 158 ವಿದ್ಯಾರ್ಥಿಗಳು 625ಕ್ಕೆ 265 ಅಂಕ ಪಡೆದಿದ್ದರು. ನಂತರ 2021-22ರಲ್ಲೂ 145 ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದರು. ಈ ಬಾರಿ ನಾಲ್ಕು ಜನ ಮಾತ್ರ 625 ಅಂಕ ಗಳಿಸಿದ್ದಾರೆ.
 

click me!