ನೀಟ್‌ ಪರೀಕ್ಷೆ ವೇಳೆ ಒಳ ಉಡುಪು ಪರಿಶೀಲಿಸಿದ ಅಧಿಕಾರಿಗಳು: ಬ್ರಾ ಧರಿಸದೆ ಎಕ್ಸಾಂ ಬರೆದ ವಿದ್ಯಾರ್ಥಿನಿಯರು!

By BK AshwinFirst Published May 9, 2023, 11:34 AM IST
Highlights

NEET- UG 2023 ರ ಸಮಯದಲ್ಲಿ ಕೆಲವು ಅಭ್ಯರ್ಥಿಗಳಿಗೆ ತಮ್ಮ ಉಡುಪನ್ನು ತೆಗೆದುಹಾಕಲು ಕೇಳಲಾಯಿತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದ್ದಾರೆ.

ನವದೆಹಲಿ (ಮೇ 9, 2023): ಭಾನುವಾರ ಮಧ್ಯಾಹ್ನ ಮಣಿಪುರ ಹರತುಪಡಿಸಿ ಉಳಿದೆಡೆ ನೀಟ್‌ ಪರೀಕ್ಷೆ ನಡೆದಿದ್ದು, ಈ ವೇಳೆ ಅಧಿಕಾರಿಗಳು ವಿದ್ಯಾರ್ಥಿನಿಯರ ಒಳ ಉಡುಪು ಪರಿಶೀಲನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ನೀತಿಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವಿರೋಧ ಕೇಳಿಬರುತ್ತಿದೆ. ಈ ಬಾರಿಯೂ ಸಹ, ನೀಟ್‌ ಯುಜಿ ಪರೀಕ್ಷೆಯಲ್ಲಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ, ತಮಿಳುನಾಡು ಸೇರಿ ಹಲವೆಡೆ ಇಂತಹ ಘಟನೆಗಳು ವರದಿಯಾಗಿದೆ. ಈ ಘಟನೆಗಳು ವಿದ್ಯಾರ್ಥಿಗಳು, ಪೋಷಕರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಟೀಕೆ ಮಾಡಿದ್ದಾರೆ.

NEET- UG 2023 ರ ಸಮಯದಲ್ಲಿ, ಕೆಲವು ಅಭ್ಯರ್ಥಿಗಳಿಗೆ ತಮ್ಮ ಉಡುಪನ್ನು ತೆಗೆದುಹಾಕಲು ಕೇಳಲಾಯಿತು ಅಥವಾ ಅವುಗಳನ್ನು ಉಲ್ಟಾ ಧರಿಸುವಂತೆ ಕೇಳಲಾಯಿತು ಎಂದು ಆರೋಪಿಸಿದ್ದಾರೆ. ಕೆಲವರಿಗೆ ತಮ್ಮ ಬಟ್ಟೆ ಬದಲಾಯಿಸಲು ಹಾಗೂ ಪೋಷಕರ ಬಟ್ಟೆ ಹಾಕಿಕೊಳ್ಳಲು ಅಧಿಕಾರಿಗಳು ಕೇಳಿದ ಉದಾಹರಣೆಯನ್ನು ಸಹ ಹಂಚಿಕೊಂಡಿದ್ದಾರೆ. ಪರೀಕ್ಷೆಗೆ ಕುಳಿತ ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ವರದಿ ಮಾಡಿದ್ದಾರೆ ಮತ್ತು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಕಡ್ಡಾಯಗೊಳಿಸಿದ ಡ್ರೆಸ್ ಕೋಡ್ ಅನ್ನು ಅನುಸರಿಸಲು ಕೆಲವು ವಿದ್ಯಾರ್ಥಿಗಳು ಹತ್ತಿರದ ಅಂಗಡಿಗಳಿಂದ ಬಟ್ಟೆಗಳನ್ನು ಖರೀದಿಸಿದರು ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಈ ರಾಜ್ಯದಲ್ಲಿ ನೀಟ್‌ ಪರೀಕ್ಷೆ ಮುಂದೂಡಿಕೆ: ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಈ ಸಂಬಂಧ ವಿದ್ಯಾರ್ಥಿಗಳಿಂದ ಹಲವು ದೂರುಗಳನ್ನು ಸ್ವೀಕರಿಸಿದೆ. ಇದನ್ನು ಅರಿತುಕೊಂಡು, ಮಹಿಳಾ ಅಭ್ಯರ್ಥಿಗಳನ್ನು ಪರೀಕ್ಷಿಸುವಲ್ಲಿ ಒಳಗೊಂಡಿರುವ ಸೂಕ್ಷ್ಮತೆಯ ಬಗ್ಗೆ ಗಮನಹರಿಸುವಂತೆ ಪರೀಕ್ಷಾ ಕೇಂದ್ರಗಳಲ್ಲಿನ ಸಿಬ್ಬಂದಿಗೆ ಸಮಗ್ರ ಸೂಚನೆಗಳನ್ನು ನೀಡುವುದಾಗಿ ಎನ್‌ಟಿಎ ಹೇಳಿದೆ. ವೈದ್ಯಕೀಯ ಕಾಲೇಜು ಆಕಾಂಕ್ಷಿಗಳ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಅಲ್ಲಿ ಬ್ರಾ ಪಟ್ಟಿಗಳನ್ನು (ಸ್ಟ್ರಾಪ್‌) ಪರಿಶೀಲಿಸಲಾಗಿದೆ ಮತ್ತು ಒಳ ಉಡುಪುಗಳನ್ನು ತೆರೆಯಲು ಕೇಳಲಾಗಿದೆ ಎಂದು ಹೇಳುತ್ತದೆ.

ಈ ಮಧ್ಯೆ ಪರೀಕ್ಷೆ ವೇಳೆ ಈ ರೀತಿ ಸ್ವೀಕಾರಾರ್ಹವಲ್ಲ ಮತ್ತು ವಿದ್ಯಾರ್ಥಿಗಳನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಾದ ಮಾರ್ಗವಲ್ಲ ಎಂದು ವೈದ್ಯರು ಸಹ ಹೇಳಿದ್ದಾರೆ. ಅಂತಹ ನಿರ್ಣಾಯಕ ಪರೀಕ್ಷೆಗೆ ಹಾಜರಾಗುವಾಗ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ತೊಂದರೆ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಅಪೇಕ್ಷೆಯಂತೆ ರೋಡ್‌ ಶೋ ಬದಲಾವಣೆ ಮಾಡಲಾಗಿದೆ: ಶೋಭಾ ಕರಂದ್ಲಾಜೆ

ಪಶ್ಚಿಮ ಬಂಗಾಳದಲ್ಲಿ ಪರೀಕ್ಷೆಯಲ್ಲಿ ಹಲವಾರು ಅಭ್ಯರ್ಥಿಗಳು ತಮ್ಮ ಪ್ಯಾಂಟ್ ಬದಲಾಯಿಸಲು ಅಥವಾ ತಮ್ಮ ಒಳ ಉಡುಪುಗಳನ್ನು ತೆರೆಯಲು ಕೇಳಿಕೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿದೆ. ಕೆಲವು ವಿದ್ಯಾರ್ಥಿಗಳು ಕೇವಲ ಒಳ ಉಡುಪನ್ನು ಧರಿಸಿ ಪರೀಕ್ಷಾ ಕೊಠಡಿಯೊಳಗೆ ಹೋಗಿದ್ದಾರೆ ಎಂದೂ ವಿದ್ಯಾರ್ಥಿಯೊಬ್ಬರು  ಆರೋಪಿಸಿದ್ದಾರೆ.  

ಇನ್ನೊಂದೆಡೆ, ತಾನು ಗಮನಿಸಿದ ಪ್ರಕಾರ, ಪರೀಕ್ಷೆಗೆ ಬಂದ ಅರ್ಧದಷ್ಟು ವಿದ್ಯಾರ್ಥಿನಿಯರು ಬ್ರಾ ಧರಿಸಿರಲಿಲ್ಲ ಎಂದು ಪತ್ರಕರ್ತೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅವರು ಅದನ್ನು ಡಿಲೀಟ್‌ ಮಾಡಿದರೂ,  "ನನ್ನನ್ನು ಅಶ್ಲೀಲ ಪ್ರಶ್ನೆಗಳನ್ನು ಕೇಳುವವರು ಬ್ರಾ ಧರಿಸಲು ಅನುಮತಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಾ ಮಂಡಳಿಯನ್ನು ಕೇಳಬೇಕು" ಎಂದು ಬಳಿಕ ಟ್ವೀಟ್‌ ಮಾಡಿ ತಮ್ಮ ಹಿಂದಿನ ಟ್ವೀಟ್‌ ಅನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನೀಟ್‌ ಸಿದ್ಧತೆಯ ಒತ್ತಡ: ಬೆಂಕಿ ಹಚ್ಚಿಕೊಂಡು ಸಾವಿಗೆ ಯತ್ನಿಸಿದ ವಿದ್ಯಾರ್ಥಿ

click me!