ಶಾಲೆ-ಕಾಲೇಜು ಪ್ರಾರಂಭದ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸರ್ಕಾರ

By Suvarna NewsFirst Published Aug 29, 2020, 9:51 PM IST
Highlights

ಕೊರೋನಾದಿಂದ ಶೈಕ್ಷಣಿಕ ಕ್ಷೇತ್ರವೂ ಸಹ ನೆಲಕಚ್ಚಿದ್ದು, ಈ ತಿಂಗಳು ಮುಂದಿನ ತಿಂಗಳು ಶಾಲೆ ಪ್ರಾರಂಭವಾಗುತ್ತವೆ ಎನ್ನುವ ಗೊಂದಲಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದೆ.
 

ನವದೆಹಲಿ, (ಆ.29): ಕೊರೋನಾ ಮಹಾಮಾರಿ ನಡುವೆಯೂ ಹಂತ ಹಂತವಾಗಿ ಸಹಜಸ್ಥಿತಿಗೆ ತರಲು ಕೇಂದ್ರ ಸರ್ಕಾರ ಅನ್ ಲಾಕ್ ಪ್ರಕ್ರಿಯೆಯನ್ನು ನಡೆಸಿಕೊಂಡು ಬರುತ್ತಿದೆ. 

"

ಸೆಪ್ಟೆಂಬರ್ 1ರಿಂದ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಇಂದು (ಶನಿವಾರ) ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಗೆ ಅವಕಾಶ ನೀಡಲಾಗಿದ್ದು ರಾಜ್ಯಗಳು ಇನ್ನು ಮುಂದೆ ಲಾಕ್ ಡೌನ್ ಮಾಡುವಂತಿಲ್ಲ. ಅದರಲ್ಲೂ  ಶಾಲಾ-ಕಾಲೇಜುಗಳ ನಿರ್ಬಂಧ ಮುಂದುವರಿಸಿರುವ ಕೇಂದ್ರ ಸರ್ಕಾರ ಕೆಲ ಒಂದಿಷ್ಟು ಸಡಿಲಿಕೆಗಳನ್ನ ಮಾಡಿದೆ.

ಕೇಂದ್ರದಿಂದ ಅನ್‌ಲಾಕ್ 4.0 ಮಾರ್ಗಸೂಚಿ ಪ್ರಕಟ, ಏನಿರುತ್ತೆ? ಏನಿರಲ್ಲ?

ಇನ್ನೆರಡು ತಿಂಗ್ಳು ಶಾಲೆಗಳು ಕ್ಲೋಸ್
ಹೌದು... ರಾಜ್ಯ ಸರ್ಕಾರ ಸೆಪ್ಟೆಂಬರ್‌ನಲ್ಲಿ ಶಾಲಾ-ಕಾಲೇಜುಗಳನ್ನ ಆರಂಭಿಸಲು ಸಿದ್ಧತೆ ನಡೆಸಿತ್ತು. ಆದ್ರೆ, ಇದೀಗ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಅನ್‌ ಲಾಕ್ ಮಾರ್ಗಸೂಚಿ ಪ್ರಕಾರ ಇನ್ನೂ ಎರಡು ತಿಂಗಳು ಅಂದ್ರೆ ಸೆಪ್ಟೆಂಬರ್ 30ರ ವರಗೆ ಯಾವುದೇ ಕಾರಣಕ್ಕೂ ಶಾಲೆ ಪ್ರಾರಂಭ ಇಲ್ಲ. ಬದಲಾಗಿ ಆನ್‌ಲೈನ್ ಕ್ಲಾಸ್ ಪ್ರಾರಂಭಿಸಬೇಕೆಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಶಾಲಾ-ಕಾಲೇಜು ಆರಂಭದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಡಿಸಿಎಂ ಅಶ್ವತ್ಥನಾರಾಯಣ

ಸಡಿಲಿಕೆಗಳು
ಎಲ್ಲಾ ರಾಜ್ಯಗಳಿಗೆ ಶಾಲಾ-ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿ ಮತ್ತ ಬೋಧಕೇತರ ಸಿಬ್ಬಂದಿಗೆ ಮಾತ್ರ ಶಾಲೆಗೆ ಅವಕಾಶ ನೀಡಲಾಗಿದ್ದು, ಈ ಸಿಬ್ಬಂದಿ ಆನ್‌ಲೈನ್ ತರಗತಿ ಅಥವಾ ಸಂಬಂಧಿತ ಕೆಲಸಗಳನ್ನ ಮಾಡಹುದು.

ಇನ್ನು ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಹೊರತುಪಡಿಸಿದ 9ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ರಾಜ್ಯ ಸರ್ಕಾರಗಳು ಶಾಲೆಗೆ ಭೇಟಿ ನೀಡಲು ಅವಕಾಶ ಕೊಡಬಹುದಾಗಿದೆ. 

ಉನ್ನತ ವ್ಯಾಸಾಂಗಕ್ಕಾಗಿ ವಿಶ್ವವಿದ್ಯಾಲಗಣನ್ನು ರಿಸರ್ವ ಸ್ಕಾಲರ್ಸ್,  ತಾಂತ್ರಿಕ ಮತ್ತು ವೃತ್ತಿಪರ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ತೆರೆಯಬಹುದಾಗಿದೆ. ಇದು ಲ್ಯಾಬೊರೇಟರಿ ಮತ್ತ ಪ್ರಾಯೋಗಿಕ ಕೆಲಸಗಳಿಗೆ ಮಾತ್ರ.

ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಮೂರು ತಿಂಗಳು ಆಗಬೇಕಿತ್ತು. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ, ಅವರಸರದಲ್ಲಿ ಶಾಲೆಗಳನ್ನ ತೆರೆಯುವುದುಬೇಡ ಎನ್ನುವ ನಿರ್ಧಾರಕ್ಕೆ ಬಂದಿದೆ. ಇದರಿಂದ ಈ ವರ್ಷದ ಶೈಕ್ಷಣಿಕ ವರ್ಷ ಆರಂಭಿಸುವುದು ಹೇಗೆ ಅಂತಾ ಸರ್ಕಾರಕ್ಕೆ ತಲೆನೋವಾಗಿದೆ. 

ಒಟ್ಟಿನಲ್ಲಿ ಈ ತಿಂಗಳು ಮುಂದಿನ ತಿಂಗಳು ಶಾಲೆ ಪ್ರಾರಂಭವಾಗುತ್ತವೆ ಎನ್ನುವ ಗೊಂದಲಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದೆ.

click me!