ಇಂದೋರ್ ಐಐಟಿಯಲ್ಲಿ ಇನ್ಮುಂದೆ ಪುರಾತನ ಭಾರತೀಯ ವಿಜ್ಞಾನವನ್ನು ಸಂಸ್ಕೃತದಲ್ಲಿ ಬೋಧಿಸುವ ಯೋಜನೆ ರೂಪಿಸಿದ್ದು, ಇದೊಂದು ಹೊಸ ಹೆಜ್ಜೆಯಾಗಿದೆ.
ಇಂದೋರ್, (ಆ.29): ಐಐಟಿ-ಇಂದೋರ್‌ನಲ್ಲಿ ಇನ್ಮುಂದೆ ಪುರಾತನ ಭಾರತೀಯ ವಿಜ್ಞಾನವನ್ನು ಸಂಸ್ಕೃತದಲ್ಲಿ ಬೋಧಿಸುವ ತರಗತಿಗಳನ್ನ ಪ್ರಾರಂಭಿಸಿದೆ.
ಈ ತರಗತಿಗಳಿಗಾಗಿ ಜಾಗತಿಕ ಮಟ್ಟದಲ್ಲಿ 750 ಮಂದಿ ನೋಂದಣಿ ಮಾಡಿಕೊಂಡಿದ್ದು, ಆ.22 ರಿಂದ ಪ್ರಾರಂಭವಾಗಿದೆ. ಇನ್ನು ಶಾಸ್ತ್ರೀಯ ವೈಜ್ಞಾನಿಕ ಪಠ್ಯಗಳನ್ನು ಸಂಸ್ಕೃತದಲ್ಲಿಯೇ ಬೋಧಿಸುವುದಕ್ಕೆ ಪ್ರಾರಂಭಿಸಿದ್ದು, ತರಗತಿಗಳ ಮೊದಲ ಆವೃತ್ತಿ ಅ.2 ಗಾಂಧಿ ಜಯಂತಿಯಂದು ಮುಕ್ತಾಯಗೊಳ್ಳಲಿದೆ.
undefined
IPLನಿಂದ ಸುರೇಶ್ ರೈನಾ ಔಟ್, ರಾಜಕಾರಣಿ ಪುತ್ರನಿಗೂ ಡ್ರಗ್ಸ್ ಲಿಂಕ್; ಆ.29ರ ಟಾಪ್ 10 ಸುದ್ದಿ!
ಹಾಗೂ ಮೆಟಲರ್ಜಿ, ಖಗೋಳ ವಿಜ್ಞಾನ, ಔಷಧ, ಸಸ್ಯ ವಿಜ್ಞಾನಗಳನ್ನೂ ಸಹ ಸಂಸ್ಕೃತದಲ್ಲಿ ಬೋಧಿಸಲು ಯೋಜನೆ ರೂಪಿಸಿದೆ.ಐಐಟಿಗಳಲ್ಲಿ ಬರೀ ಇಂಗ್ಲೀಷ್. ಇದರ ಮಧ್ಯೆ ಇಂದೋರ್ ಐಐಟಿಯಲ್ಲಿ ಸಂಸ್ಕೃತ ಬೋಧನೆಗೆ ಮುಂದಾಗಿರುವುದು ಹೊಸ ಬದಲಾವಣೆಗೆ ನಾಂದಿ ಹಾಡಿದೆ.
ಇನ್ನು ಈ ಬಗ್ಗೆ ಮಾತನಾಡಿದ ಐಐಟಿ-ಇಂದೋರ್ ನ ನಿರ್ದೇಶಕ ಪ್ರೊಫೆಸರ್ ನೀಲೇಶ್ ಕುಮಾರ್ ಜೈನ್, ಸಂಸ್ಕೃತ ಪುರಾತನ ಭಾಷೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೂ ಸಹ ಸಂಸ್ಕೃತ ಛಾಪು ಮೂಡಿಸುತ್ತಿದೆ, ಸಂಸ್ಕೃತ ಭವಿಷ್ಯದ ಭಾಷೆಯಾಗಲಿದೆ. ಸಂಸ್ಕೃತದಲ್ಲೇ ಪುರಾತನ ಭಾರತೀಯ ವಿಜ್ಞಾನವನ್ನು ಕಲಿತು ಪುರಾತನ ಭಾಷೆಯಲ್ಲೇ ವಿದ್ಯಾರ್ಥಿಗಳು ಸಂವಹನ ನಡೆಸಬಹುದು ಎಂದು ಹೇಳಿದರು.