SSLC ಫಲಿತಾಂಶ: ಚಿಕ್ಕಬಳ್ಳಾಪುರ ಫಸ್ಟ್, ಯಾದಗಿರಿ ಲಾಸ್ಟ್

By Suvarna NewsFirst Published Aug 10, 2020, 3:51 PM IST
Highlights

ಕೊರೋನಾ ಭೀತಿ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಹಾಗಾದ್ರೆ, ಈ ಬಾರಿ ಫಸ್ಟ್ ಯಾವ ಜಿಲ್ಲೆ? ಯಾವ ಜಿಲ್ಲೆ ಲಾಸ್ಟ್..? 

ಬೆಂಗಳೂರು, (ಆ.10): ಕರ್ನಾಟಕ ಎಸ್‌ಎಸ್‌ಎಲ್ ಸಿ ಫಲಿತಾಂಶಗಳು ಪ್ರಕಟವಾಗಿದ್ದು, ಈ ಬಾರಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ರಾಜ್ಯಾದ್ಯಂತ 8, 48, 203 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 

"

ಎಸ್​ಎಸ್​ಎಲ್​ಸಿ ರಿಸಲ್ಟ್ ಪ್ರಕಟ: ಶೇ.71.80 ಫಲಿತಾಂಶ, 6 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್

 ಈ ವರ್ಷ ಶೇ.71.80 ಮಂದಿ ಅಂದರೆ 5, 82, 314 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷ 73.70 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

ಈ ಪೈಕಿ ಸರ್ಕಾರಿ ಶಾಲೆಗಳ ಶೇ.72.79 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅನುದಾನಿತ ಶಾಲೆಗಳ ಶೇ. 70.60 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳ ಶೇ.83.12ಮಂದಿ ವಿದ್ಯಾರ್ಥಿಗಲು ಉತ್ತೀರ್ಣರಾಗಿದ್ದಾರೆ.

ಇನ್ನು ಜಿಲ್ಲಾವಾರು ನೋಡುವುದಾದ್ರೆ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದ್ದು, ಬೆಂಗಳೂರು ಗ್ರಾಮಾಂತರ ದ್ವಿತೀಯ ಮಧುಗಿರಿ ತೃತೀಯ, ಮಂಡ್ಯ ಜಿಲ್ಲೆಗೆ ನಾಲ್ಕನೇ ಸ್ಥಾನ ಲಭಿಸಿದೆ. ಯಾದಗಿರಿ ಕೊನೆಯ ಸ್ಥಾನ ಲಭಿಸಿದೆ. 

ಯಾವ ಜಿಲ್ಲೆ ಎಷ್ಟನೇ ಸ್ಥಾನ...

1. ಚಿಕ್ಕಬಳ್ಳಾಪುರ
2. ಬೆಂಗಳೂರು ಗ್ರಾಮಾಂತರ
3. ಮಧುಗಿರಿ
4. ಮಂಡ್ಯ 
5. ಚಿತ್ರದುರ್ಗ
6. ಕೋಲಾರ
7. ಉಡುಪಿ
8. ರಾಮನಗರ
9. ಹಾಸನ
10.ಉತ್ತರ ಕನ್ನಡ
11. ಚಾಮರಾಜನಗರ
12. ಮಂಗಳೂರು (ದಕ್ಷಿಣ ಕನ್ನಡ)
13. ಬಳ್ಳಾರಿ.
14. ತುಮಕೂರು
15.  ಶಿರಸಿ
16. ಬೆಂಗಳೂರು ಉತ್ತರ
17. ದಾವಣಗೆರೆ
18. ಕೊಡಗು
19. ಶಿವಮೊಗ್ಗ
20 ಚಿಕ್ಕಮಗಳೂರು
21 ಮೈಸೂರು
22 ಕಲಬುರಗಿ
23 ಕೊಪ್ಪಳ
24 ಬೀದರ್
25  ವಿಜಯಪುರ
26 ಬಾಗಲಕೋಟೆ
27 ಧಾರವಾಡ
28 ರಾಯಚೂರು
29 ಬೆಂಗಳೂರು ದಕ್ಷಿಣ
30 ಚಿಕ್ಕೋಡಿ
31 ಬೆಳಗಾವಿ
32 ಗದಗ
33 ಹಾವೇರಿ
34 ಯಾದಗಿರಿ

click me!