ಎಸ್ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿ ನಿಮ್ಮ ರಿಸಲ್ಟ್ ನೋಡಿ

By Ramesh B  |  First Published Aug 10, 2020, 3:17 PM IST

2020ನೇ ಸಾಲಿನ ಎಸ್​ಎಸ್​ಎಸ್​ಲಿ ಪರೀಕ್ಷೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಪರೀಕ್ಷಾ ಫಲಿತಾಂಶ ನೋಡೋದು ಹೇಗೆ?:


ಬೆಂಗಳೂರು, (ಆ.10): ಕೊರೋನಾ ಆತಂಕದ ನಡುವೆಯೂ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಭಾರೀ ನಿರೀಕ್ಷೆಯಿಂದ ಕಾದಿದ್ದ 2020ನೇ ಸಾಲಿನ ಎಸ್​ಎಸ್​ಎಸ್​ಲಿ ಪರೀಕ್ಷೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. 

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಪೋಷಕರಿಗೆ ಸುರೇಶ್​ ಕುಮಾರ್​ ಮಹತ್ವದ ಸಂದೇಶ

Tap to resize

Latest Videos

ಇಂದು (ಸೋಮವಾರ) ಸುದ್ದಿಗೋಷ್ಟಿ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್​ಎಸ್​ಎಲ್​ಸಿ ಫಲಿತಾಂಶ ಬಿಡುಗಡೆ ಮಾಡಿದರು. 

ಫಲಿತಾಂಶದ ಪ್ರಮುಖಾಂಶಗಳು..
* 848203 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ
* 811050 ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳು
* ಈ ವರ್ಷ 8,11,050 ವಿದ್ಯಾರ್ಥಿಗಳಲ್ಲಿ 5,82,360 ವಿದ್ಯಾರ್ಥಿಗಳು ಉತ್ತೀರ್ಣ
* ಅನುತ್ತೀರ್ಣ 228734

* ಈ ಬಾರಿಯೂ ಹೆಣ್ಣು ಮಕ್ಕಳೇ ಫಲಿತಾಂಶದಲ್ಲಿ ಮುಂದೆ ಇದ್ದಾರೆ. ವಿದ್ಯಾರ್ಥಿನಿಯರ ಶೇಕಡಾವಾರು77.74 ಇದ್ದರೆ, ವಿದ್ಯಾರ್ಥಿಗಳ ( ಶೇಕಡಾವಾರು ಫಲಿತಾಂಶ 66.41ರಷ್ಟು ಇದೆ.

* 6 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ. 
* 501 ಸರ್ಕಾರಿ ಶಾಲೆಗಳು 100 ಪರ್ಸೆಂಟ್ ಫಲಿತಾಂಶ ಪಡೆದಿವೆ. 62 ಶಾಲೆಗಳು 0% ರಿಸಲ್ಟ್ ಪಡೆದಿವೆ.

*ಈ ವರ್ಷ 8,11,050 ವಿದ್ಯಾರ್ಥಿಗಳಲ್ಲಿ 5,82,360 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಈ ಬಾರಿ 71.80 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ 73.70 ಫಲಿತಾಂಶ ಬಂದಿತ್ತು.

ನಗರ ಪ್ರದೇಶದಲ್ಲಿ ಶೇ.73.41 ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದ ಶೇ.77.18 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂತೆಯೇ ಕನ್ನಡ ಮಾಧ್ಯಮದ ಶೇ. 70.49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು. ಆಂಗ್ಲ ಮಾಧ್ಯಮದ ಶೇ.84.98 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪರೀಕ್ಷಾ ಫಲಿತಾಂಶ ನೋಡೋದು ಹೇಗೆ?: 
ಸ್ಟೆಪ್ 1: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತ ವೆಬ್‌ಸೈಟ್ http://kseeb.kar.nic.in/ ಅಥವಾ http://karresults.nic.in./ ಗೆ ಹೋಗಿ 
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಮೂಡುವ ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ 
ಸ್ಟೆಪ್ 3: ಆ ನೋಟಿಫಿಕೇಶನ್‌ನಲ್ಲಿ ಕರ್ನಾಟಕ ಎಸ್ಎಸ್‌ಎಲ್‌ಸಿ ಫಲಿತಾಂಶ 2019ರ ಲಿಂಕ್ ಮೇಲೆ ಕ್ಲಿಕ್ ಮಾಡಿ 
ಸ್ಟೆಪ್ 4: ಅಲ್ಲಿ ಕೇಳಿರುವ ಜಾಗದಲ್ಲಿ ನಿಮ್ಮ ರೋಲ್ ನಂಬರ್, ಜನ್ಮ ದಿನಾಂಕ ಹಾಗೂ ಇನ್ನಿತರೆ ಕೇಳಲಾಗಿರುವ ಮಾಹಿತಿಗಳನ್ನು ನಮೂದಿಸಿ ಸ್ಟೆಪ್ 5: ನಂತರ Submit Button ಮೇಲೆ ಕ್ಲಿಕ್ ಮಾಡಿ 
ಸ್ಟೆಪ್ 6: ರಿಸಲ್ಟ್ ಪ್ರತಿಯನ್ನು ಪ್ರಿಂಟೌಟ್ ತೆಗೆದುಕೊಳ್ಳಿ

click me!