ಬಹುನಿರೀಕ್ಷಿತ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ವಿವರಗಳನ್ನು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮತ್ತು ಅಧಿಕಾರಿಗಳು ನೀಡುತ್ತಿದ್ದಾರೆ.
ಬೆಂಗಳೂರು, (ಆ.10): 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇಖಡವಾರು 71.80 ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ. 73.70 ಫಲಿತಾಂಶ ಬಂದಿತ್ತು.
ಕೊರೋನಾ ಆತಂಕದ ನಡುವೆಯೂ ಪರೀಕ್ಷೆಗೆ ಹಾಜರಾಗಿದ್ದ 8,11,050 ವಿದ್ಯಾರ್ಥಿಗಳ ಪೈಕಿ 5,82, 360 ಮಂದಿ ಉತ್ತೀರ್ಣರಾಗಿದ್ದಾರೆ. 2,28,734 ವಿದ್ಯಾರ್ಥಿಗಳು ಅನುತ್ತೀಣರಾಗಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿ ನಿಮ್ಮ ರಿಸಲ್ಟ್ ನೋಡಿ
ಶೇ. 66.41 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ರೆ, ಶೇ. 77.74 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಕಳೆದಬಾರಿ ಇಬ್ಬರು ಮಾತ್ರ 625ಕ್ಕೆ 625 ಅಂಕ ಪಡೆದಿದ್ದರು. ಆದ್ರೆ, ಈ ಬಾರಿ 625ಕ್ಕೆ 625 ಅಂಕ ಪಡೆದ 6 ಮಕ್ಕಳು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಟಾಪರ್ಗಳು..
* ಚಿರಾಯು. ನಾಗಸಂದ್ರ
* ನಿಖಿಲೇಶ್ ಮರಳಿ. ಸದಾಶಿವನಗರ
* ಧೀರಜ್ ರೆಡ್ಡಿ ಮಂಡ್ಯ.
* ಕುಮಾರಸ್ವಾಮಿ, ಸುಳ್ಯ.
* ತನ್ಮಯಿ, ಚಿಕ್ಕಮಗಳೂರು
* ಸನ್ನಿಧಿ ಮಹಾಬಲೇಶ್ವರ ಹೆಗಡೆ, ಶಿರಸಿ, ಉತ್ತರ ಕನ್ನಡ ಜಿಲ್ಲೆ.