2019-20ನೇ ಸಾಲಿನ ಸಿಇಟಿ ರಿಸಲ್ಟ್ ಪ್ರಕಟ: ಮೊದಲ 7 ಸ್ಥಾನ ಬೆಂಗಳೂರಿನ ತೆಕ್ಕೆಗೆ!

Published : May 25, 2019, 12:03 PM ISTUpdated : May 25, 2019, 05:40 PM IST
2019-20ನೇ ಸಾಲಿನ ಸಿಇಟಿ ರಿಸಲ್ಟ್ ಪ್ರಕಟ: ಮೊದಲ 7 ಸ್ಥಾನ ಬೆಂಗಳೂರಿನ ತೆಕ್ಕೆಗೆ!

ಸಾರಾಂಶ

CET ಫಲಿತಾಂಶ ಪ್ರಕಟ| ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರಿಂದ ಫಲಿತಾಂಶ ಪ್ರಕಟ| ಮೊದಲ 10 ಸ್ಥಾನಗಳಲ್ಲಿ 7 ಸ್ಥಾನಗಳು ಬೆಂಗಳೂರಿಗೆ.

ಬೆಂಗಳೂರು[ಮೇ.25]: ಇಂಜಿನಿಯರಿಂಗ್‌ ಸೇರಿದಂತೆ ನಾನಾ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ 2019-20ನೇ ಸಿಇಟಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಫಲಿತಾಂಶ ಪ್ರಕಟಿಸಿದ್ದಾರೆ.

"

ಇಂಜಿನಿಯರಿಂಗ್ ವಿಭಾಗದಲ್ಲಿ ಮಾರತ್‌ ಹಳ್ಳಿಯ ಚೈತನ್ಯ ಟೆನ್ನೋ ಸ್ಕೂಲ್‌ನ ಜಫಿನ್ ಬಿಜು ಮೊದಲ ಸ್ಥಾನ ಗಳಿಸಿದ್ದಾರೆ. ಎರಡನೇ ಸ್ಥಾನ ಮಂಗಳೂರು ಎಕ್ಸ್ ಪರ್ಟ್ ಕಾಲೇಜಿನ ಚಿನ್ಮಯ್ ಪಾಲಾಗಿದೆ. ಮೂರನೇ ಸ್ಥಾನ ಚೈತನ್ಯ ಕಾಲೇಜಿನ ಸಕೇತಿಕಾಗೆ ಲಭಿಸಿದೆ.

ಇನ್ನು ಮೊದಲ 10 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಬೆಂಗಳೂರು ಪಾಲಾಗಿದ್ದು, 2 ಸ್ಥಾನ ಮಂಗಳೂರು ಹಾಗೂ 1 ಸ್ಥಾನವನ್ನು ಬಳ್ಳಾರಿ ಪಡೆದುಕೊಂಡಿದೆ.

ಈಗಾಘಲೇ ಆನ್‌ಲೈನ್‌ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಇಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ಎಲ್ಲಾ ಕಾಲೇಜುಗಳಲ್ಲಿಯೂ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡರು ತಿಳಿಸಿದ್ದಾರೆ.

ಈ ಲಿಂಕ್ ಮೂಲಕ ನಿಮ್ಮ ಫಲಿತಾಂಶ ತಿಳಿದುಕೊಳ್ಳಿ

http://kea.kar.nic.in

http://cet.kar.nic.in 

http://kar.results.nic.in

ಮೇಲಿನ 3 ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.

PREV
click me!

Recommended Stories

ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ