ಮೋದಿ ತವರಿನ 63 ಶಾಲೆಗಳಲ್ಲಿ ಒಬ್ಬೇ ಒಬ್ಬ ವಿದ್ಯಾರ್ಥಿ ಪಾಸಾಗಿಲ್ಲ..!

By Web DeskFirst Published May 22, 2019, 6:20 PM IST
Highlights

ಪ್ರಧಾನಿ ನರೇಂದ್ರ ಮೋದಿ ಮೂರು ಬಾರಿ ಸಿಎಂ ಆಗಿದ್ದ ಗುಜರಾತ್‌ನ  63 ಶಾಲೆಗಳು ಶೂನ್ಯ  ಫಲಿತಾಂಶ ಕಂಡಿವೆ. 63 ಶಾಲೆಗಳಲ್ಲಿ ಒಬ್ಬೇ ಒಬ್ಬ ಪಾಸಾಗಿಲ್ಲ..!

ಗಾಂಧಿನಗರ (ಗುಜರಾತ್), (ಮೇ.22): ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಷನ್ ಬೋರ್ಡ್, ಮಾರ್ಚ್‌ನಲ್ಲಿ ನಡೆಸಿದ್ದ ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆಗಳ ಫಲಿತಾಂಶ ಇಂದು (ಬುಧವಾರ) ಪ್ರಕಟವಾಗಿದೆ.

ಒಟ್ಟಾರೆ  66.97% ರಿಸಲ್ಟ್ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಕೊಂಚ ಕುಸಿತ ಕಂಡಿದೆ. ಕಳೆದ ವರ್ಷ  ಶೇ. 67.5 ಫಲಿತಾಂಶ ಬಂದಿತ್ತು.

ದುರಂತ ಅಂದ್ರೆ ಒಟ್ಟು 63 ಶಾಲೆಗಳು ಶೂನ್ಯ ಫಲಿತಾಂಶ ಕಂಡಿವೆ. ಈ 63 ಶಾಲೆಗಳ ಪೈಕಿ ಒಬ್ಬೇ ಒಬ್ಬ ವಿದ್ಯಾರ್ಥಿಯೂ ತೇರ್ಗಡೆಯಾಗಿಲ್ಲ.

ಈ ಬಗ್ಗೆ ಬೋರ್ಡ್ ಚೇರ್ಮನ್ ಎ.ಜೆ.ಶಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಟ್ಟು 8,22,823 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 5,51,023 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಹೇಳಿದರು.

63 ಶಾಲೆಗಳ ಏಕೈಕ ವಿದ್ಯಾರ್ಥಿ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿಲ್ಲ. 366 ಶಾಲೆಗಳು ಶೇಕಡಾವಾರು ಫಲಿತಾಂಶಗಳನ್ನು ನೀಡಿವೆ ಎಂದು ಅವರು ತಿಳಿಸಿದರು. 

ದಕ್ಷಿಣ ಗುಜರಾತ್ ಸೂರತ್ ಜಿಲ್ಲೆ ಫಲಿತಾಂಶದಲ್ಲಿ ಶೇ 79.63ದೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು ಛೋಟಾ ಉದಪುರ್ ಜಿಲ್ಲೆ ಶೇ. 46.38ದೊಂದಿಗೆ ಕೊನೆ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

click me!