ಮಕ್ಕಳ ಪರೀಕ್ಷೆಗೆ ಹೀಗೆ ತಯಾರಿ ನಡೆಸಿ..

By Web DeskFirst Published May 24, 2019, 3:38 PM IST
Highlights

ಮಕ್ಕಳಿಗೆ ಪರೀಕ್ಷೆಯ ಭಯ ಆವರಿಸುವ ಮುನ್ನ ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಪೋಷಕರಾಗಿ ನೀವು ಮಕ್ಕಳನ್ನು ಪರೀಕ್ಷೆಗೆ ಹೀಗೆ ತಯಾರಾಗುವಂತೆ ಮಾಡಿ. 

ಪರೀಕ್ಷೆ ಎಂದ ಕೂಡಲೇ ಮಕ್ಕಳ ಮನಸಿನಲ್ಲಿ ಏನೋ ಒಂದು ರೀತಿಯ ಭಯ ಆವರಿಸುತ್ತದೆ. ಇದಕ್ಕೆ ಪೋಷಕರ ಜೊತೆ ಜೊತೆಗೆ ಶಿಕ್ಷಕರ ಜವಾಬ್ಧಾರಿಯೂ ಇರುತ್ತದೆ. ಅವರು ಮಕ್ಕಳಿಕೆ ಪರೀಕ್ಷೆಯ ನಕಾರಾತ್ಮಕ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು. ಆದುದರಿಂದ ಮಕ್ಕಳಿಗೆ ಪರೀಕ್ಷೆಗೆ ಮುನ್ನ ಹಾಗೂ ಪರೀಕ್ಷೆಯ ನಂತರ ತಯಾರಿ ನಡೆಸಲು ನೀವು ತಿಳಿಸಿಕೊಡಬೇಕು. 

- ಮಕ್ಕಳು ಓದುವ ವಾತಾವರಣ ಸಕಾರಾತ್ಮಕ ಮತ್ತು ಒತ್ತಡ ರಹಿತವಾಗಿರುವಂತೆ ನೋಡಿಕೊಳ್ಳಿ. 

- ಪರೀಕ್ಷೆಗೆ ತಯಾರಾಗುತ್ತಿರುವ ಮಗುವಿಗೆ ಸರಿಯಾದ ಪೌಷ್ಟಿಕಾಂಶ ಸಿಗುವಂತೆ ತಾಯಿ ನೋಡಿಕೊಳ್ಳಬೇಕು. ಜಂಕ್ ಫುಡ್ ಗಳನ್ನೂ ಅವಾಯ್ಡ್ ಮಾಡಿ. 

- ತಂದೆಯೂ ಮಕ್ಕಳ ಓದಿಗೆ ಸಂಬಂಧಿಸಿದಂತೆ ಮಕ್ಕಳಿಗೆ ಸಹಾಯ ಮಾಡಬೇಕು. ಮಕ್ಕಳಿಗೆ ಕಷ್ಟವಾದ ಪಠ್ಯಗಳನ್ನು ಹೇಳಿಕೊಡಿ. ಅಧಿಕ ಶ್ರಮಪಡಲು ಅವರಿಗೆ ಸಹಾಯ ಮಾಡಿ. 

ರಜೆಯಲ್ಲಿ ಮಾಡಬಹುದಾದ ಪಾರ್ಟ್ ಟೈಮ್ ಉದ್ಯೋಗಗಳು

- ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಲು ಟೈಮ್ ಟೇಬಲ್ ಮಾಡಿಕೊಳ್ಳುತ್ತೀರಿ. ಅದನ್ನು ಮಕ್ಕಳು ಸರಿಯಾಗಿ ಪಾಲಿಸುವಂತೆ ಮಾಡಿ. ಟಿವಿ, ಫಿಲಂ, ಇತರ ಮನರಂಜನೆಗಳಿಂದ ಮಕ್ಕಳ ಮನಸ್ಸು ವಿಚಲಿತವಾಗಬಾರದು. ಆದುದರಿಂದ ಓದಿನ ಕಡೆಗೆ ಮಾತ್ರ ಹೆಚ್ಚಿನ ಗಮನ ಹರಿಸುವಂತೆ ಮಾಡುವುದು ನಿಮ್ಮ ಕರ್ತವ್ಯ. 

- ಪರೀಕ್ಷೆ ದಿನಗಳಲ್ಲಿ ಮಕ್ಕಳಿಗೆ ಓದಿನ ವಿಷಯದಲ್ಲಿ ಹೊಡೆಯುವುದು, ಬೈಯುವುದು, ಓದು ಓದು ಎಂದು ಹೆಚ್ಚು ಒತ್ತಡ ಹಾಕಬೇಡಿ. ಇದರಿಂದ ಮಕ್ಕಳು ಹೆದರಿ ಅವರಿಗೆ ಆತಂಕ, ಹೊಟ್ಟೆನೋವು, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 

- ಮಕ್ಕಳಿಗೆ ಯಾವುದಾದರೂ ವಿಷಯ ಕಷ್ಟವಾಗುತ್ತಿದ್ದರೆ ಅವರಿಗೆ ಇನ್ನೊಬ್ಬರನ್ನು ಹೋಲಿಸಿ, ಕೋಪ ಮಾಡಬೇಡಿ. ಬದಲಾಗಿ ಆ ವಿಷಯ ಅವರಿಗೆ ಯಾಕೆ ಕಷ್ಟವಾಗುತ್ತದೆ ಅನ್ನೋದನ್ನು ತಿಳಿದುಕೊಂಡು ಅವರಿಗೆ ಅದನ್ನು ಸುಲಭವಾಗಿ ತಿಳಿಸಿ. 

click me!