PUC ನಂತರ ಮುಂದೇನು? ಇಲ್ಲಿದೆ ಸಿಂಪಲ್ ಟಿಪ್ಸ್

By Web DeskFirst Published May 14, 2019, 11:38 AM IST
Highlights

ಪಿಯುಸಿ ನಂತರ ಬೇಗನೆ ಕೆಲಸ ಸಿಗುವಂತಹ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಿರುವವರು ಇದನ್ನು ಓದಿ... BE, ಮೆಡಿಕಲ್ ಜತೆಗೆ ಬೇರೆ ಕೋರ್ಸ್‌ಗಳೂ ನಿಮ್ಮನ್ನು ಕಾಯುತ್ತಿವೆ.

ಪಿಯುಸಿ ಆದ ನಂತರ ಮತ್ತೇನು ಎಂಬ ಯೋಚನೆ ಎಲ್ಲರ ತಲೆಯಲ್ಲಿಯೂ ಇರುತ್ತದೆ. ಬಿಎ, ಬಿಕಾಮ್, ಬಿಎಸ್ಸಿ ಅಲ್ಲದೆ ಪಿಯುಸಿ ನಂತರ ನೀವು ಆಯ್ಕೆ ಮಾಡಬಹುದಾದ ಬಹಳಷ್ಟು ಕ್ಷೇತ್ರಗಳಿವೆ. ಈ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡರೆ ಬೇಗ ಉದ್ಯೋಗವೂ ಸಿಗುತ್ತದೆ. ಆ ಕ್ಷೇತ್ರಗಳು ಯಾವವು?

ಕಂಪನಿ ಸೆಕ್ರೇಟರಿ: ಕಚೇರಿಯಲ್ಲಿ ಮುಖ್ಯವಾಗಿ ಕಾರ್ಯ ನಿರ್ವಹಿಸುವ ಕೆಲಸ ಕಂಪನಿ ಸೆಕ್ರೇಟರಿಯದ್ದು. ಇವರಿಗೆ ಉತ್ತಮ ಜ್ಞಾನ ಇದ್ದು, ಸರಿಯಾದ ಟ್ರೇನಿಂಗ್ ಪಡೆದುಕೊಂಡರೆ ಫೈನಾನ್ಸ್, ಅಕೌಂಟ್, ಲೀಗಲ್, ಅಡ್ಮಿನಿಸ್ಟ್ರೇಷನ್ ಮೊದಲಾದ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು. 

ಮಾಸ್ ಕಮ್ಯೂನಿಕೇಷನ್ ಮುಗಿದ ನಂತ್ರ ಮುಂದೆ ಏನೆಲ್ಲ ಮಾಡಬಹುದು?

ಚಾರ್ಟೆಡ್ ಅಕೌಂಟೆನ್ಸಿ: ಇದು ಹೈ ಪ್ರೊಫೈಲ್ ಕರಿಯರ್. ತುಂಬಾ ಕ್ಲಿಷ್ಟವಾದ ವಿಷಯವನ್ನೂ  ಸುಲಭವಾಗಿ ಬಿಡಿಸುವಂಥ ಸಾಮರ್ಥ್ಯ ನಿಮ್ಮಲ್ಲಿ ಇರಬೇಕು. ಇದು ಚಾಲೆಂಜಿಂಗ್ ಆಗಿರುವ ಕ್ಷೇತ್ರ. ಈ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಹಲವು ಕಂಪನಿಗಳಲ್ಲಿ ಉತ್ತಮ ಕೆಲಸ, ವೇತನವೂ  ಸಿಗುತ್ತದೆ. 

ಸಶಸ್ತ್ರ ಸೇನೆ: ಇದು ಚಾಲೆಂಜಿಂಗ್ ಆಗಿರುವ ಕರಿಯರ್ ಆಯ್ಕೆ. ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವುದು ಎಂದರೆ ಅದು ಉಳಿದ ಕೆಲಸಗಳಿಗಿಂತ ತುಂಬಾನೇ ವಿಭಿನ್ನ. ಆರ್ಮಿ, ವಾಯು ಸೇನೆ, ನೌಕಾ ಸೇನೆಯಲ್ಲಿ ಕೆಲಸ ಮಾಡುವುದರ ಜೊತೆಗೆ ನಿಮಲ್ಲಿ ಉತ್ತಮ ಲೀಡರ್‌ಶಿಪ್ ಗುಣ ಬೆಳೆಸುತ್ತದೆ. ಜೊತೆಗೆ ಇದು ಪ್ರೇರಣೆ ನೀಡುವ ಕ್ಷೇತ್ರ. 

ಎಂಜಿನೀಯರಿಂಗ್: ಇಂದಿನ ವೇಗವಾಗಿ ಬೆಳೆಯುತ್ತಿರುವ ಟೆಕ್ನಾಲಜಿ, ಅಭಿವೃದ್ಧಿ ಹೊಂದುತ್ತಿರುವ ಇಂಡಸ್ಟ್ರಿ, ಎಲ್ಲದುದರಿಂದ ಇಂದು ಎಂಜಿನಿಯರಿಂಗ್ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ದೊರೆಯುವಂತಾಗಿದೆ. ಇಂಜಿನಿಯರಿಂಗ್ ಹಿಂದೆ ಇಂದು, ಮುಂದೆ ಕೂಡ ಉದ್ಯೋಗವನ್ನು ಕಲ್ಪಿಸುವ ಬೆಸ್ಟ್ ಕ್ಷೇತ್ರ. 

ಸ್ಕೈಪ್ ಇಂಟರ್‌‌ವ್ಯೂ ಇದೆಯಾ? ಹಾಗಿದ್ರೆ ಹೀಗೆ ತಯಾರಾಗಿ...

ಫ್ಯಾಷನ್ ಟೆಕ್ನಾಲಜಿ: ಫ್ಯಾಷನ್ ಪ್ರಪಂಚದ ಮೂಲೆ ಮೂಲೆಗಳಲ್ಲಿ ಹಾಸು ಹೊಕ್ಕಾಗಿದೆ. ಈ ಕ್ಷೇತ್ರ ಕ್ಷಿಪ್ರ ಗತಿಯಲ್ಲಿ ಪ್ರಗತಿ ಹೊಂದುತ್ತಿದೆ. ಎಲೆಕ್ಟ್ರಾನಿಕ್ ಮೀಡಿಯಾ ಇರಬಹುದು ಅಥವಾ ಪ್ರಿಂಟ್ ಮೀಡಿಯಾ ಎಲ್ಲಾ ಕ್ಷೇತ್ರದಲ್ಲೂ ಫ್ಯಾಷನ್ ಕ್ಷೇತ್ರದ ಬಗ್ಗೆ ಹೆಚ್ಚು ಒಲವು ತೋರಿಸುತ್ತಾರೆ. ಇದು ಬೆಸ್ಟ್ ಕರಿಯರ್ ಆಯ್ಕೆ. 

ಹೊಟೇಲ್ ಮ್ಯಾನೇಜ್‌ಮೆಂಟ್:  ಭಾರತೀಯ ಪ್ರವಾಸೋದ್ಯೋಮ ಕ್ಷೇತ್ರ ಬೆಳವಣಿಗೆ ಆಗುತ್ತಿರುವುದರಿಂದ ಮುಂದೆ ಹೊಟೇಲ್ ಮ್ಯಾನೇಜ್‌ಮೆಂಟ್ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ದೊರೆಯುವ ಕಾಲ ಹಿಂದಿಲ್ಲ. ಮುಂದೆ ಯಾಕೆ ಪ್ರಸ್ತುತ ವಿದ್ಯಮಾನದಲ್ಲೂ ಈ ಕ್ಷೇತ್ರಕ್ಕೆ ಸ್ಕೋಪ್ ಇದೆ. ಅಲ್ಲದೆ ಈ ಕ್ಷೇತ್ರದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವೂ ಇದೆ. 

ಇನ್ಫಾರ್ಮಶನ್ ಟೆಕ್ನಾಲಜಿ: ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಐಟಿ ವಿಭಾಗಕ್ಕೆ ಹೆಚ್ಚಿನ ಸ್ಕೋಪ್ ಇದೆ. ಈ ಕೋರ್ಸ್ ಮುಗಿಸಿದರೆ ಯಾವ ಕಂಪನಿಯಲ್ಲಿ ಬೇಕಾದರೂ ಕೆಲಸ ಸಿಗುತ್ತೆ. 

click me!