ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ವೇಳಾಪಟ್ಟಿ ಬದಲಾವಣೆ

Published : May 13, 2019, 08:42 PM IST
ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ವೇಳಾಪಟ್ಟಿ ಬದಲಾವಣೆ

ಸಾರಾಂಶ

ಇದೇ ಮೇ 27 ರಿಂದ ಜೂನ್ 10 ವರೆಗೆ ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ [ಡಿಗ್ರಿ] 6ನೇ ಸೆಮಿಸ್ಟರ್ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲವಣೆಯಾಗಿದೆ. ವಿವಿ ಸಿದ್ಧಪಡಿಸಿರುವ ಹೊಸ ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿದೆ. 

ಬೆಂಗಳೂರು, [ಮೇ.13]: ಇದೇ ಮೇ 27 ಮತ್ತು ಜೂನ್ 12ಕ್ಕೆ ಸಿಎ ಮತ್ತು ಸಿಎಸ್ ಪರೀಕ್ಷೆ ಇರುವುದರಿಂದ  ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ [ಡಿಗ್ರಿ] 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. 

ಇದೇ ಮೇ 27 ರಿಂದ ಜೂನ್ 10 ವರೆಗೆ ಬಿಕಾಂ, ಬಿಬಿಎಂ, ಬಿಸಿಎ 6ನೇ ಸೆಮಿಸ್ಟರ್ ಪರೀಕ್ಷೆಗಳು ನಿಗದಿಯಾಗಿದ್ದವು. ಸದ್ಯ ಬದಲಾದ ವೇಳಾಪಟ್ಟಿ ಪ್ರಕಾರ 10ಜೂನ್ ರಿಂದ 21ನೇ ಜೂನ್ ವರೆಗೆ ಪರೀಕ್ಷೆಗಳು ನಡೆಯಲಿವೆ.

ಈ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಶಿವರಾಜು ಅವರು ಇಂದು [ಸೋಮವಾರ] ಹೊಸ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ