ಸ್ಕೈಪ್ ಇಂಟರ್‌ವ್ಯೂ ಅಥವಾ ಆನ್‌ಲೈನ್ ಇಂಟರ್‌ವ್ಯೂ ಎಂದರೆ ಹೇಗೆ ಬೇಕು ಹಾಗೆ ಎದುರಿಸಬಹುದು ಎಂದೆನಲ್ಲಾ. ಅದಕ್ಕೂ ನೀವು ಪರ್ಫೆಕ್ಟ್ ಆಗಿ ತಯಾರಿ ನಡೆಸಬೇಕು. ಅದಕ್ಕೆ ನಾವು ಕೊಡ್ತೀವಿ ಟಿಪ್ಸ್....
ಇಂಟರ್‌ವ್ಯೂ ಹೋಗುವುದು ಎಂದರೆ ಏನೋ ಒಂಥರಾ ಭಯ ಇರುತ್ತದೆ. ಹೇಗೆ ಮಾತನಾಡಬೇಕು, ಡ್ರೆಸ್ ಹೇಗಿರಬೇಕು ಎಂದು. ಆದರೆ ಸ್ಕೈಪ್ ಇಂಟರ್‌ವ್ಯೂ ಎಂದಾಗ ಅಯ್ಯೋ ಕಂಪ್ಯೂಟರ್ ಮುಂದೆ ತಾನೇ ಹೇಗೆ ಬೇಕಾದರೂ ಇರಬಹುದು ಎಂದು ಅಂದುಕೊಳ್ಳುತ್ತೇವೆ. ಆದರೆ ಸ್ಕೈಪ್ ಇಂಟರ್‌ವ್ಯೂ ನಡೆಸುವಾಗಲೂ ನೀವು ಪರ್ಫೆಕ್ಟ್ ಆಗಿರಬೇಕು. ಯಾವ ರೀತಿ ಸ್ಕೈಪ್ ಇಂಟರ್‌ವ್ಯೂ ಎದುರಿಸಬೇಕು ನೋಡೋಣ...
ಕರಿಯರ್ ಆಯ್ಕೆ ಮಾಡುವಾಗ ಅಪ್ಪಿತಪ್ಪಿಯೂ ಈ 9 ತಪ್ಪುಗಳನ್ನು ಮಾಡ್ಬೇಡಿ..!
ಐ ಕಾಂಟಕ್ಟ್ : ಆನ್‌ಲೈನ್ ಇಂಟರ್‌ವ್ಯೂ ಸಮಯದಲ್ಲಿ ಐ ಕಾಂಟಾಕ್ಟ್ ಮಾಡ್ಲೇಬೇಕು. ಇದಕ್ಕಾಗಿ ನೀವು ನಿಮ್ಮ ನೋಟವನ್ನು ಕ್ಯಾಮೆರಾದ ಮೇಲೆ ಫೋಕಸ್ ಮಾಡಿ. ನೀವು ಆಚೆ ಈಚೆ ಅಥವಾ ಮೇಲೆ ನೋಡಿದರೆ ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾದಂತೆ ಅನಿಸುತ್ತದೆ.
ಡ್ರೆಸ್ಸಿಂಗ್: ಆನ್‌ಲೈನ್ ಇಂಟರ್‌ವ್ಯೂ ಸಮಯದಲ್ಲಿ ಡಾರ್ಕ್ ಬಣ್ಣದ ಡ್ರೆಸ್ ಧರಿಸಿ, ಆದರೆ ಬೋಲ್ಡ್ ಪ್ಯಾಟರ್ನ್ ಡ್ರೆಸ್ ಧರಿಸಬೇಡಿ. ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಸಿಂಪಲ್ ಆಗಿ, ಕ್ಲಾಸಿ ಆಗಿದ್ದರೆ ಉತ್ತಮ. ಒಟ್ಟಿನಲ್ಲಿ ಪ್ರೊಫೆಷನಲ್ ಆಗಿ ಡ್ರೆಸ್ ಮಾಡಿದರೆ ಉತ್ತಮ.
ಇನ್ನಷ್ಟು ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಕಪ್ ಇರಲಿ: ಮೇಕಪ್ ಇದ್ದರೆ ಮುಖ ಫ್ರೆಶ್ ಆಗಿ ಕಾಣುತ್ತದೆ. ಜೊತೆಗೆ ನೀವು ಎದ್ದು ಕಾಣುತ್ತೀರಿ. ಇದರಿಂದ ಇಂಟರ್‌ವ್ಯೂ ಸಮಯದಲ್ಲಿ ನಿಮ್ಮ ಲುಕ್ ಚೆನ್ನಾಗಿ ಕಾಣುತ್ತದೆ.
ಲೈಟಿಂಗ್ ಸರಿಯಾಗಿರಲಿ: ಸ್ಕೈಪ್ ಇಂಟರ್‌ವ್ಯೂ ನಡೆಯುವ ಜಾಗದಲ್ಲಿ ಸರಿಯಾಗಿ ಲೈಟ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ. ಆದರೆ ಲೈಟ್ ನಿಮ್ಮ ಮೇಲೆ ನೇರವಾಗಿ ಬೀಳದಿರಲಿ. ಜೊತೆಗೆ ಸೈಲೆಂಟ್ ಜಾಗವನ್ನು ಆಯ್ಕೆ ಮಾಡಿಕೊಳ್ಳುವುದನ್ನು ಮರೆಯಬೇಡಿ.
ಫೋನ್ ದೂರದಲ್ಲಿಡಿ: ಇಂಟರ್‌ವ್ಯೂ ಸಮಯದಲ್ಲಿ ಕೈಯಲ್ಲಿ ಫೋನ್ ಹಿಡಿಯಡಬೇಡಿ. ಒಂದು ವೇಳೆ ನಿಮ್ಮ ಕೈಯಲ್ಲಿ ಫೋನ್ ಇದ್ದರೂ ಇ-ಮೇಲ್, ಮೆಸೇಜ್ ಚೆಕ್ ಮಾಡಲು ಹೋಗಬೇಡಿ. ಈ ರೀತಿ ಮಾಡಿದರೆ ಇಂಟರ್‌ವ್ಯೂ ಮೇಲೆ ಪರಿಣಾಮ ಬೀರುತ್ತದೆ.