ಕರಿಯರ್ ಆಯ್ಕೆ ಅದು ಲೈಫ್ ಬದಲಾವಣೆ ಮಾಡುವ ಟಾಸ್ಕ್. ಕರಿಯರ್ ಆಯ್ಕೆ ಮಾಡುವಾಗ ನೀವು ಮಾಡುವ ತಪ್ಪುಗಳು ಜೀವನವನ್ನೇ ಕಷ್ಟವಾಗಿಸುತ್ತದೆ. ಆದುದರಿಂದ ಆರಂಭದಲ್ಲೇ ಸರಿಯಾದ ಹೆಜ್ಜೆ ಇಡಬೇಕು. ಕರಿಯರ್ ಆಯ್ಕೆ ಮಾಡುವಾಗ ಯಾವ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು?
ಹತ್ತನೇ ತರಗತಿಯಲ್ಲಿ ಇರುವಾಗಲೇ ಪ್ರತಿಯೊಬ್ಬರ ಮನಸಿನಲ್ಲಿ ತಾನು ಮುಂದೆ ಏನು ಆಗಬೇಕು ಎಂಬ ಗುರಿ ಇರುತ್ತದೆ. ನಂತರ ಅದಕ್ಕೆ ಪೂರಕವಾದ ಕ್ಷೇತ್ರವನ್ನು ಆಯ್ಕೆ ಮಾಡಿ ವಿದ್ಯಾಭ್ಯಾಸ ಮುಂದುವರೆಸಿ ಕರಿಯರ್ ಆಯ್ಕೆ ಮಾಡುತ್ತಾರೆ.
ಕರಿಯರ್ ಆಯ್ಕೆ ಮಾಡಿಕೊಳ್ಳುವುದು ಅಂದ್ರೆ ಅದು ಲೈಫ್ ಬದಲಾವಣೆ ಮಾಡುವ ಟಾಸ್ಕ್. ಇಂತಹ ಪ್ರಮುಖ ಘಟ್ಟದಲ್ಲಿ ಕರಿಯರ್ ಆಯ್ಕೆ ಮಾಡುವಾಗ ಜಾಗರೂಕರಾಗಿರಬೇಕಾಗಿರುವುದು ಉತ್ತಮ.
undefined
ಆದರೆ ಕೆಲವರು ಕರಿಯರ್ ಆಯ್ಕೆಯಲ್ಲಿ ತಾವಾಗಿಯೇ ಅಥವಾ ಇನ್ನೊಬ್ಬರ ಮಾತು ಕೇಳಿ ತಪ್ಪುಗಳನ್ನ ಮಾಡುತ್ತಾರೆ. ಸಾಮಾನ್ಯವಾಗಿ ವ್ಯಕ್ತಿಗಳು ಕರಿಯರ್ ಆಯ್ಕೆ ಮಾಡುವಾಗ ಮಾಡುವ ತಪ್ಪುಗಳು ಇವು..
* ಕರಿಯರ್ ಆಯ್ಕೆ ಮಾಡುವಾಗ ನಿಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಬಿಟ್ಟು, ಹೆಚ್ಚು ಹಣ ಸಿಗುವ ಕ್ಷೇತ್ರ ಆಯ್ಕೆ ಮಾಡಿದರೆ ಅದರಿಂದ ಯಶಸ್ಸು ಸಿಗುವುದಿಲ್ಲ.
* ಬೆಳವಣಿಗೆಗೆ ಹೆಚ್ಚು ಅವಕಾಶ ಇಲ್ಲದಂತಹ ಕ್ಷೇತ್ರವನ್ನು ಆಯ್ಕೆ ಮಾಡುವುದು.
* ನಿಮ್ಮ ಅಸೆ ಆಕಾಂಕ್ಷೆಗಳನ್ನು ಬಿಟ್ಟು ಪೋಷಕರು ಹೇಳಿದ, ಅವರಿಗೆ ಇಷ್ಟವಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಿದಾಗ ಕರಿಯರ್ ಪಾತಾಳಕ್ಕೆ ಬೀಳುತ್ತದೆ.
* ನನಗೇನು ಮಾಡಬೇಕು ಎಂದು ಗೊತ್ತಿಲ್ಲ, ಆದ್ರೆ ಇದನ್ನು ಆಯ್ಕೆ ಮಾಡಿದ್ರೆ ಓಕೇ ಇರಬೋದೇನೋ ಎಂದು ಅನಿಸಿದರೆ ಅದು ಶುದ್ಧ ತಪ್ಪು. ಆ ಕ್ಷೇತ್ರ ನಿಮಗೆ ಮುಂದೆ ಉಸಿರುಗಟ್ಟಿಸಬಹುದು.
* ಪರ್ಫೆಕ್ಟ್ ಕರಿಯರ್ ಸಿಗಲಿ. ದೊಡ್ಡ ಕಂಪನಿಯಿಂದ ಆಫರ್ ಬರಲಿ ಎಂದು ಅಂದುಕೊಂಡು ಬಂದ ಆಫರ್‌ಗಳನ್ನೆಲ್ಲಾ ಇಗ್ನೋರ್ ಮಾಡಿದರೆ ಮುಂದೆ ಜಾಬ್ ಸಿಗದೇ ಹೋಗಬಹುದು.
* ಇತರರು ಹೇಳಿದ್ದನ್ನು ಕೇಳಿಕೊಂಡು ಆ ಕ್ಷೇತ್ರ ಆಯ್ಕೆ ಮಾಡೋದು, ಈ ಕ್ಷೇತ್ರ ಆಯ್ಕೆ ಮಾಡೋದು ಎಂಬ ಗೊಂದಲದಲ್ಲಿ ಇರುವುದು.
* ಯಾರೋ ಒಬ್ಬ ಗೆಳೆಯ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡ ಅಥವಾ ಪ್ರತಿಷ್ಠೆಗಾಗಿ ಆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಅಂದುಕೊಂಡು ಅವರು ಆಯ್ಕೆ ಮಾಡಿದ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು.
* ನಿಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಗೊತ್ತಿರುವವರಲ್ಲಿ ಕೇಳದೆ ಇರುವುದು. ಅವರಿಂದ ಮಾಹಿತಿ ಸಂಗ್ರಹಿಸದೇ ಇರುವುದು.
* ಭವಿಷ್ಯದ ಬಗ್ಗೆ ಯೋಚಿಸದೆ ಯಾವುದೊ ಒಂದು ಕರಿಯರ್ ಆಯ್ಕೆ ಮಾಡಿದರೆ ಜೀವನಕ್ಕೆ ಮುಳುವಾಗುತ್ತದೆ.