ಇಂದು ಜಗತ್ತು ಚಿಕ್ಕದಾಗಿದೆ. ಭೂಮಿಯ ಯಾವ ಭಾಗಕ್ಕೆ ಬೇಕಾದರೂ ಸುಲಭವಾಗಿ ಹೋಗಲು ಆಧುನಿಕ ಸಂಪರ್ಕ ವ್ಯವಸ್ಥೆಗಳಿವೆ. ಆದರೆ ಕಾಸಿಲ್ಲದವಗೆ ಕಜ್ಜಾಯವೂ ಇಲ್ಲ. ಕಾಸೊಂದಿಲ್ಲದಿದ್ದರೆ ಮತ್ತೆಲ್ಲ ಇದ್ದು ಏನು ಪ್ರಯೋಜನ ಎಂದು ನೀವು ಕೇಳಬಹುದು. ಖಂಡಿತಾ ಪ್ರಯೋಜನವಿದೆ. ಈ ದೇಶಗಳು ನೀವು ಬರಲೆಂದು ತಾವೇ ಹಣ ನೀಡಿ ಬರ ಮಾಡಿಕೊಳ್ಳಲು ರೆಡಿ ಇವೆ...
ವಿದೇಶ ಸುತ್ತಬೇಕೆಂಬ ಆಸೆ ಎಲ್ಲರಿಗೂ ಇರತ್ತೆ. ಆದರೆ ಕೆಲವರು ಮಾತ್ರ ಉದ್ಯೋಗ ನಿಮಿತ್ತ ಅಥವಾ ಶಿಕ್ಷಣದ ನಿಮಿತ್ತ ಅದನ್ನು ಸುಲಭವಾಗಿ ಪೂರೈಸಿಕೊಳ್ಳುತ್ತಾರೆ. ಬಹುತೇಕರು ವಿಶ್ವ ಪರ್ಯಟನೆ ಮಾಡಬೇಕೆಂಬ ಆಸೆಯಲ್ಲೇ ಜೀವನಪೂರ್ತಿ ದುಡಿದು ಕೂಡಿಡುತ್ತಾ ಹೈರಾಣಾಗುತ್ತಾರೆ. ಆದರೆ, ನಿಮಗೆ ಗೊತ್ತಾ, ಈ ಪ್ರಪಂಚದಲ್ಲಿ ಕೆಲವೊಂದಿಷ್ಟು ದೇಶಗಳು ನೀವು ಅಲ್ಲಿಗೆ ಹೋಗಿ ನೆಲೆಸೋಕೆ ದುಡ್ಡು ಕೊಟ್ಟು ಆಹ್ವಾನ ನೀಡುತ್ತವೆ ಎಂದು? ಹೌದು ಸ್ವಾಮಿ, ಸರಿಯಾಗೇ ಓದಿದಿರಿ, ಈ ಕೆಳಗಿನ ದೇಶಗಳು ನಿಮ್ಮ ಆಗಮನಕ್ಕಾಗಿ ಕಾಯುತ್ತಿವೆ.
ಸ್ಮಾರ್ಟ್ ಆದ್ರೂ ಕೆಲವರು ಉದ್ಯೋಗದಲ್ಲೇಕೆ ಫೇಲ್ಯೂರ್ ಆಗ್ತಾರೆ?
undefined
ಚಿಲಿ
ಚಿಲಿ ಸರ್ಕಾರವು 2010ರಲ್ಲಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸುವಂಥ ವಿಶೇಷ ಕಾರ್ಯಕ್ರಮ ಘೋಷಿಸಿದ್ದು, ಯಾರಾದರೂ ಚಿಲಿಯಲ್ಲಿ ಸ್ಟಾರ್ಟಪ್ ಆರಂಭಿಸಬೇಕೆಂದರೆ, ಅವರು ಎಲ್ಲಿಯವರು, ಹಿನ್ನೆಲೆ ಏನು ಎಂಬುದೇನೂ ಕೇಳದೆ, ಸರಕಾರವೇ 50,000 ಡಾಲರ್ ಹಣ ನೀಡಿ ಬುಸಿನೆಸ್ ಆರಂಭಿಸುವಂತೆ ಕೇಳುತ್ತದೆ. ಸ್ವಂತ ಉದ್ಯೋಗ ಆರಂಭಿಸುವ ಹುಮ್ಮಸ್ಸಿನವರಿಗೆ ಇದು ದೊಡ್ಡ ಸುದ್ದಿಯೇ. ಏಕೆಂದರೆ ಕಳೆದೊಂದು ದಶಕದಲ್ಲಿ ಚಿಲಿಯ ಉದ್ಯಮ ಸಂಸ್ಕೃತಿ ಹಾಗೂ ವಾಣಿಜ್ಯೋದ್ಯಮವೂ ಅದ್ಭುತವಾಗಿ ಬೆಳೆದಿದೆ.
ಇಲ್ಲಿ ತೆರಿಗೆ ಕಡಿಮೆ ಇದ್ದು, ವಾಸದ ಖರ್ಚು ಕೂಡಾ ಕಡಿಮೆ. ಸಂಸ್ಕೃತಿ ಸಖತ್ತಾಗಿದೆ, ಸರಕಾರ ಸಹಕಾರ ನೀಡುತ್ತದೆ. ಮತ್ತಿನ್ನೇನು ಬೇಕು? ಇದು ಚಿಲಿಗೆ ಹೋಗುವ ಖರ್ಚನ್ನು ನೀಡುವುದೇ ಅಲ್ಲದಿದ್ದರೂ, ಅಲ್ಲಿ ಬದುಕಲು ಹೂಡಿಕೆಯನ್ನು ನೀಡುತ್ತದೆ ಎನ್ನಬಹುದು.
ಪೊಂಗಾ, ಸ್ಪೇನ್
ಸ್ಪೇನ್‌ನ ಈ ಪುಟ್ಟ ಹಳ್ಳಿ ಅಕ್ಷರಶಃ ನೀವಲ್ಲಿಗೆ ಹೋಗಿ ವಾಸಿಸಲು ಹಣ ನೀಡುತ್ತದೆ. ಇದೊಂದು ಆಳವಾಗಿ ಬೇರು ಬಿಟ್ಟ ಸಂಪ್ರದಾಯಗಳನ್ನು ಒಳಗೊಂಡ ಪುರಾತನ ಹಳ್ಳಿಯಾಗಿದ್ದು, ಅದ್ಭುತ ಹವಾಮಾನವನ್ನು ಹೊಂದಿದೆ. ಆದರೆ, ಇಂಥ ಸ್ವರ್ಗದಲ್ಲಿ ವಾಸಿಸಲು ಜನರೇ ಇಲ್ಲದೆ, ಕೇವಲ 800 ಜನಕ್ಕೆ ಮೀಸಲಾಗಿದೆ. ಇವರಲ್ಲಿ 18 ವರ್ಷಕ್ಕಿಂತ ಕಡಿಮೆ ವಯೋಮಾನದವರ ಸಂಖ್ಯೆ 50ನ್ನೂ ತಲುಪುವುದಿಲ್ಲ. ಹೀಗಾಗಿ, ಹಳ್ಳಿಯೇ ಇಲ್ಲಿಗೆ ಬಂದು ವಾಸಿಸುವ ಯುವ ಜೋಡಿಗೆ 3000 ಯೂರೋಗಳನ್ನು ನೀಡುವ ಹಾಗೂ ಅವರೊಂದಿಗೆ ಮಗುವಿದ್ದರೆ ಮತ್ತೆ ಹೆಚ್ಚಿನ 3000 ಯೂರೋಗಳನ್ನು ನೀಡುವುದಾಗಿ ಘೋಷಿಸಿದೆ. ಆದರೆ ಕನಿಷ್ಠ 5 ವರ್ಷಗಳಾದದರೂ ಇಲ್ಲಿ ವಾಸಿಸಬೇಕೆಂಬುದು ಕಂಡೀಶನ್.
ಕ್ಯಾಂಡೇಲಾ, ಇಟಲಿ
ಒಂದು ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಈ ಪುಟ್ಟ ಪಟ್ಟಣ, ಇಂದು ಜನರಿಲ್ಲದೆ ಘೋಸ್ಟ್ ಟೌನ್ ಆಗಿದೆ. ಅತ್ಯುತ್ತಮ ಆರ್ಕಿಟೆಕ್ಚರ್, ಅಗಲವಾದ ರಸ್ತೆಗಳು, ಇತಿಹಾಸ ಎಲ್ಲವನ್ನೂ ಹೊಂದಿದ ಕ್ಯಾಂಡೇಲಾ ಚಿತ್ರದಲ್ಲಿ ಬಿಡಿಸಿಟ್ಟಿರುವಷ್ಟು ಸುಂದರವಾಗಿದ್ದು ಶಾಂತವಾಗಿದೆ. ಆದರೆ 60ರ ದಶಕದ ಬಳಿಕ ಇಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಈಗಂತೂ 2700ಕ್ಕೆ ಬಂದು ನಿಂತಿದೆ. ಹೀಗಾಗಿ, ಇಲ್ಲಿನ ಮೇಯರ್ ಈ ಪಟ್ಟಣಕ್ಕೆ ಹೋಗಿ ನೆಲೆಸುವವರಿಗೆ ಬ್ಯಾಚುಲರ್ ಆದರೆ 800 ಯೂರೋಗಳು, ಕುಟುಂಬದೊಂದಿಗೆ ಹೋದರೆ 2000 ಯೋರೋಗಳು ಕೊಡುವುದಾಗಿ ಘೋಷಿಸಿದ್ದಾರೆ. ಆದರೆ, ಅದಕ್ಕಾಗಿ ನೀವಿಲ್ಲಿ ವಾರ್ಷಿಕ 7500 ಯೂರೋಗೂ ಅಧಿಕ ಸಂಬಳ ಪಡೆಯುವ ಕೆಲಸ ಹುಡುಕಿಕೊಂಡು ತೋರಿಸಬೇಕಷ್ಟೇ.
ಅಲಾಸ್ಕಾ
ಇದೇನು ಪುಟ್ಟ ಹಳ್ಳಿ ಇಲ್ಲವೇ ನಗರಕ್ಕಲ್ಲ, ಇಡೀ ಅಲಾಸ್ಕಾ ಸ್ಟೇಟ್‌ಗೆ ಹೋಗಲು ನಿಮಗೆ ಹಣ ನೀಡುವ ಆಫರ್ ಇದೆ. ಇಲ್ಲಿನ ಥಂಡಿ ಹವಾದಿಂದಾಗಿ ಸಾಮಾನ್ಯವಾಗಿ ಹೆಚ್ಚಿನವರು ಹೋಗಿರಲು ಬಯಸುವುದಿಲ್ಲ. ಆದ್ದರಿಂದ ಪ್ರಾದೇಶಿಕ ಸ್ಥಿರತೆ ಕಾಯ್ದುಕೊಳ್ಳಲು ಮನುಷ್ಯರ ಮೇಲೆ ಹೂಡಿಕೆ ಮಾಡುವುದಾಗಿ ಅಲಾಸ್ಕಾ ಸರ್ಕಾರ ಹೇಳಿದೆ. ಎಷ್ಟು ಹಣ ಎಂಬುದು ವರ್ಷದಿಂದ ವರ್ಷಕ್ಕೆ ಬದಲಾಗಲಿದ್ದು, ಕನಿಷ್ಠ 800 ಡಾಲರ್ ಪಕ್ಕಾ ಆಗಿದೆ. ಈ ಆಫರ್ ಸಿಗಬೇಕೆಂದರೆ ನೀವು ಅಲಾಸ್ಕಾದಲ್ಲಿ ಕನಿಷ್ಠ 1 ವರ್ಷ ವಾಸಿಸರಬೇಕು.
ಸಾಸ್ಕಾಶಿವಾನ್, ಕೆನಡಾ
ಹೆಚ್ಚು ಕಾಲೇಜ್ ಗ್ರ್ಯಾಜುಯೇಟ್ಸ್‌ಗಳನ್ನು ಉಳಿಸಿಕೊಳ್ಳಲು ಕೆನಡಾದ ಈ ಪ್ರಾಂತ್ಯ ಹಣ ನೀಡಿ ಕರೆಸಿಕೊಳ್ಳುವ ಆಫರ್ ಘೋಷಿಸಿದೆ. ಆದರೆ ನೀವು 2011ರ ಬಳಿಕ ಡಿಗ್ರಿ ಪಡೆದವರಾಗಿರಬೇಕು. ನಿಮ್ಮ ಪೋಸ್ಟ್ ಸೆಕೆಂಡರಿ ಸ್ಕೂಲ್ ಅನುಮೋದಿತ ಸಂಸ್ಥೆಯಾಗಿದ್ದರೆ, ಇಲ್ಲಿ ನಾನ್ ರಿಫಂಡೇಬಲ್ 20,000 ಕೆನಡಿಯನ್ ಡಾಲರ್ ತೆರಿಗೆ ರಿಟರ್ನ್ಸ್ ನೀಡಲಾಗುತ್ತದೆ. ಇಲ್ಲಿನ ಸಂಸ್ಥೆಗಳಿಗೆ ಅಪ್ಲೈ ಮಾಡುವುದು ಬಹಳ ಸುಲಭವಾಗಿದ್ದು, ಆಯ್ಕೆಯಾದರೆ ತಕ್ಷಣವೇ ನೀವಲ್ಲಿಗೆ ಸ್ಥಲಾಂತರವಾಗಬಹುದು.
ಕೊರಿಯಾ, ವಿಯೆಟ್ನಾಂ, ಥೈಲ್ಯಾಂಡ್
ಈ ಮೂರು ರಾಷ್ಟ್ರಗಳೂ ಒಂದೇ ರೀತಿಯ ಆಫರ್ ನೀಡಿರುವುದರಿಂದ ಅವೆಲ್ಲವನ್ನೂ ಒಟ್ಟಿಗೇ ನೀಡಲಾಗಿದೆ. ಯೂರೋಪ್ ಹಾಗೂ ಅಮೆರಿಕದ ಜನರಿಗೆ ಇಲ್ಲಿ ಆಫರ್ ಇದ್ದು, ಅವರು ಬಂದು ಇಂಗ್ಲಿಷ್ ಹಾಗೂ ಇತರೆ ಕೋರ್ಸ್ ತರಗತಿಗಳನ್ನು ನಡೆಸಿಕೊಡಬೇಕು.
ದಿಢೀರ್ ಅಂತ ಕೆಲಸದಿಂದ ತೆಗೆದರೇನು ಮಾಡಬೇಕು?
ಡೆನ್ಮಾರ್ಕ್
ಉದ್ಯಮ ಸ್ನೇಹಿ ದೇಶ ಎಂಬ ಹೆಗ್ಗಳಿಕೆ ಹೊಂದಿರುವ ಡೆನ್ಮಾರ್ಕ್ ನೀವಲ್ಲಿಗೆ ವಲಸೆ ಹೋಗಿ ಉದ್ಯಮ ಆರಂಭಿಸುತ್ತೀರಾದರೆ ಉತ್ತಮ ಇನ್ಸೆಂಟಿವ್ಸ್ ನೀಡುತ್ತದೆ. ನೇರವಾಗಿ ಹಣ ನೀಡದಿದ್ದರೂ, ನಿಮಗಲ್ಲಿನ ಆರೋಗ್ಯ ವ್ಯವಸ್ಥೆಗೆ ತಕ್ಷಣ ಆ್ಯಕ್ಸೆಸ್ ನೀಡುತ್ತದೆ. ಜೊತೆಗೆ ಯೂರೋಪಿಯನ್ ಮಾರುಕಟ್ಟೆಯಲ್ಲಿ ಕೂಡಾ ನಿಮ್ಮ ಬಿಸ್ನೆಸ್ ನಡೆಸಲು ಅನುಮತಿ ಸಿಗುತ್ತದೆ.
ಉದ್ಯೋಗ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ